2 ವರ್ಷದಿಂದ ವಿಧಾನಸೌಧದ 4 ದ್ವಾರದಲ್ಲಿರುವ ಸ್ಕ್ಯಾನಿಂಗ್‌ ಯಂತ್ರಗಳು ಕೆಲಸವನ್ನೇ ಮಾಡುತ್ತಿಲ್ಲ..!

By Kannadaprabha NewsFirst Published Feb 9, 2023, 11:49 AM IST
Highlights

ವಿಧಾನಸೌಧದೊಳಗೆ ಪ್ರವೇಶಿಸುವ ಮುನ್ನ ಬ್ಯಾಗ್‌ಗಳನ್ನು ಸ್ಕ್ಯಾನಿಂಗ್‌ ಮಾಡಲು ನಾಲ್ಕು ದಿಕ್ಕಿನಲ್ಲಿಯೂ ಸ್ಕ್ಯಾನಿಂಗ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ, 2021ನೇ ಸಾಲಿನಿಂದ ಈವರೆಗೆ ನಾಲ್ಕು ದಿಕ್ಕಿನಲ್ಲಿರುವ ಸ್ಕ್ಯಾನಿಂಗ್‌ ಯಂತ್ರಗಳು ದುರಸ್ತಿಯಲ್ಲಿವೆ ಎಂದು ವಿಧಾನಸೌಧದ ಭದ್ರತಾ ವಿಭಾಗದ ಮಾಹಿತಿ ಅಧಿಕಾರಿ ನೀಡಿರುವ ಮಾಹಿತಿಯಲ್ಲಿ ಈ ಅಂಶ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023): ನಾಡಿನ ಶಕ್ತಿಕೇಂದ್ರ ವಿಧಾನಸೌಧದೊಳಗೆ ಪ್ರವೇಶಿಸುವ ಮುನ್ನ ನಾಲ್ಕು ದಿಕ್ಕಿನಲ್ಲಿರುವ ಬ್ಯಾಗ್‌ಗಳನ್ನು ಸ್ಕ್ಯಾನಿಂಗ್‌ ಮಾಡುವ ಯಂತ್ರಗಳು ದುರಸ್ತಿಯಲ್ಲಿವೆ..!

ಹೌದು, ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರ ಪಡೆದುಕೊಂಡಿರುವ ಮಾಹಿತಿ ಹಕ್ಕಿನಲ್ಲಿ ಈ ಮಾಹಿತಿ ನೀಡಲಾಗಿದೆ. ವಿಧಾನಸೌಧದೊಳಗೆ ಪ್ರವೇಶಿಸುವ ಮುನ್ನ ಬ್ಯಾಗ್‌ಗಳನ್ನು ಸ್ಕ್ಯಾನಿಂಗ್‌ ಮಾಡಲು ನಾಲ್ಕು ದಿಕ್ಕಿನಲ್ಲಿಯೂ ಸ್ಕ್ಯಾನಿಂಗ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ, 2021ನೇ ಸಾಲಿನಿಂದ ಈವರೆಗೆ ನಾಲ್ಕು ದಿಕ್ಕಿನಲ್ಲಿರುವ ಸ್ಕ್ಯಾನಿಂಗ್‌ ಯಂತ್ರಗಳು ದುರಸ್ತಿಯಲ್ಲಿವೆ ಎಂದು ವಿಧಾನಸೌಧದ ಭದ್ರತಾ ವಿಭಾಗದ ಮಾಹಿತಿ ಅಧಿಕಾರಿ ನೀಡಿರುವ ಮಾಹಿತಿಯಲ್ಲಿ ಈ ಅಂಶ ಇದೆ.

ಇದನ್ನು ಓದಿ: Assembly election: ವಿಧಾನಸೌಧದದ ಗೋಡೆಗಳು ಕಾಸು ಕಾಸು ಎನ್ನುತ್ತಿವೆ: ಡಿ.ಕೆ.ಶಿವಕುಮಾರ್‌ ಹೀಗೆ ಹೇಳಿದ್ಯಾಕೆ?

ವಿಧಾನಸೌಧವು ನಾಡಿನ ಆಡಳಿತ ಕೇಂದ್ರವಾಗಿದೆ. ಅಲ್ಲದೇ, ಐತಿಹಾಸಿಕ ಕಟ್ಟಡವೂ ಆಗಿದೆ. ದುಷ್ಕೃತ್ಯ ಎಸಗುವ ದುಷ್ಕರ್ಮಿಗಳು ಒಂದು ವೇಳೆ ಪೊಲೀಸರ ಕಣ್ತಪ್ಪಿಸಿ ಒಳಗೆ ಪ್ರವೇಶಿಸಿದರೆ ಯಾರು ಹೊಣೆ. ಸಂಸತ್‌ ಭವನದ ಮೇಲೆ ಈ ಹಿಂದೆ ಉಗ್ರರು ದಾಳಿ ನಡೆಸಿದ್ದರು. ಇಂತಹ ಕೃತ್ಯಗಳು ನಡೆದರೆ ರಾಜ್ಯಕ್ಕೆ ಕಪ್ಪು ಚುಕ್ಕೆ. ದುರಸ್ತಿಯಾಗಿರುವ ಸ್ಕ್ಯಾನಿಂಗ್‌ ಯಂತ್ರಗಳನ್ನು ಸರಿಪಡಿಸಲು ಸರ್ಕಾರ ಬಳಿ ಹಣ ಇಲ್ಲವೇ? ಅಥವಾ ನಿರ್ಲಕ್ಷ್ಯ ಧೋರಣೆಯೇ ಎಂದು ಸುರೇಂದ್ರ ಉಗಾರ ಪ್ರಶ್ನಿಸಿದ್ದಾರೆ.

2015ರಲ್ಲಿ ಸುರಕ್ಷತೆ ದೃಷ್ಟಿಯಿಂದ ವಿಧಾನಸೌಧದ ನಾಲ್ಕು ದಿಕ್ಕಿನಲ್ಲಿರುವ ಸ್ಕ್ಯಾನಿಂಗ್‌ಯಂತ್ರಗಳನ್ನು ಅಳವಡಿಕೆ ಮಾಡಲಾಗಿದೆ. 2021ನೇ ಸಾಲಿನವರೆಗೆ ಯಂತ್ರಗಳು ಚಾಲ್ತಿಯಲ್ಲಿ ಕಾರ್ಯನಿರ್ವಹಿಸಿವೆ. ಆದರೆ, 2021ನೇ ಸಾಲಿನಿಂದ ದುರಸ್ತಿಯಲ್ಲಿವೆ ಎಂದು ಮಾಹಿತಿ ಹಕ್ಕಿನಿಂದ ತಿಳಿದುಬಂದಿದೆ. ಈ ಬಗ್ಗೆ ಸರ್ಕಾರ ಈಗಾಗಲಾದರೂ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ 10 ಲಕ್ಷ ಪತ್ತೆ: ತನಿಖೆಗೆ ಸಿದ್ದರಾಮಯ್ಯ ಆಗ್ರಹ

click me!