ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ: ನವೆಂಬರ್ ಅಂತ್ಯಕ್ಕೆ ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್ ಓಪನ್

By Sathish Kumar KH  |  First Published Nov 18, 2022, 5:54 PM IST

ಬಹುನಿರೀಕ್ಷಿತ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಅಂತಿಮಘಟ್ಟ ತಲುಪಿದೆ. ಈಗಾಗಲೇ ರಾಮನಗರ ಜಿಲ್ಲಾ ವ್ಯಾಪ್ತಿಯ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ನವೆಂಬರ್ ಅಂತ್ಯದ ವೇಳೆ ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.


ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ನ.18): ಬಹುನಿರೀಕ್ಷಿತ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಅಂತಿಮಘಟ್ಟ ತಲುಪಿದೆ. ಈಗಾಗಲೇ ರಾಮನಗರ ಜಿಲ್ಲಾ ವ್ಯಾಪ್ತಿಯ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಮಂಡ್ಯ ಜಿಲ್ಲೆಯಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಈ ನಡುವೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ನವೆಂಬರ್ ಅಂತ್ಯದ ವೇಳೆ ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಈ ಮಾಹಿತಿ ಹಂಚಿಕೊಂಡಿರುವ ಸಂಸದ ಪ್ರತಾಪ್‌ ಸಿಂಹ (Prathap simha), ಖುದ್ದು ಶ್ರೀರಂಗಪಟ್ಟಣ (Srirangapattana) ಬೈಪಾಸ್‌ನಲ್ಲಿ ಸಂಚರಿಸಿ, ಪರಿಶೀಲಿಸಿದ ಬಳಿಕ ಕಾಮಗಾರಿ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಮದ್ದೂರು ಬೈಪಾಸ್ (Bypass) ಸಂಪೂರ್ಣಗೊಂಡಿದೆ. ಶ್ರೀರಂಗಪಟ್ಟಣ ಬೈಪಾಸ್ ಎಕ್ಸ್‌ಪೆನ್ಷನ್ ಜಾಯಿಂಟ್ಸ್ (Expention joint) ಕೆಲಸವೂ ಮುಕ್ತಾಯ ಹಂತದಲ್ಲಿದೆ. ನವೆಂಬರ್ (November) ಅಂತ್ಯದೊಳಗೆ ಎರಡು ಬೈಪಾಸ್‌ಗಳನ್ನು ಸಂಚಾರಕ್ಕೆ ಮುಕ್ತ ಮಾಡುತ್ತೇವೆ. ಮಂಡ್ಯ ನಗರದ ಬೈಪಾಸ್ ಡಿಸೆಂಬರ್ ಅಂತ್ಯದೊಳಗೆ ಓಪನ್ ಮಾಡುತ್ತೇವೆ ಎಂದಿದ್ದಾರೆ. ಇನ್ನು ದಶಪಥ ಹೆದ್ದಾರಿ ಕಾಮಗಾರಿ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಮಾತ್ರ ಸ್ವಲ್ಪ ಕೆಲಸ ಬಾಕಿ ಉಳಿದಿದೆ. ಹಾಗಾಗಿ ಕೆಲವೊಂದು ಕಡೆಗಳಲ್ಲಿ ಸರ್ವೀಸ್ ರಸ್ತೆಯಲ್ಲಿ (Service road) ಸಂಚರಿಸಬೇಕು. ಉಳಿದಂತೆ ಡಿಸೆಂಬರ್ ಒಳಗಾಗಿ ಮಂಡ್ಯ (Mandya), ಶ್ರೀರಂಗಪಟ್ಟಣ ನಗರಗಳಿಗೆ ಬರದೆ ಪ್ರಯಾಣಿಕರು ಮೈಸೂರು ತಲುಪಬಹುದಾಗಿದೆ.

Tap to resize

Latest Videos

ಬೆಂಗಳೂರು-ಮೈಸೂರು ಹೆದ್ದಾರಿ ಶೀಘ್ರ ಸಂಚಾರ ಮುಕ್ತ

ಬೆಂಗಳೂರಿಗೆ 80 ನಿಮಿಷ ಪ್ರಯಾಣ: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ 118 ಕಿಲೋಮೀಟರ್ ಇದೆ.‌ ಇದರಲ್ಲಿ 61.104 ಕಿಲೋಮೀಟರ್ ಮಂಡ್ಯ ಜಿಲ್ಲೆಯಲ್ಲೇ ಹಾದು ಹೋಗಲಿದೆ. ಈ ಯೋಜನೆಗಾಗಿ 11,000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಮಂಡ್ಯದಲ್ಲಿ 5 ಬೃಹತ್ ಸೇತುವೆ (Bridge), 27 ಸಣ್ಣ ಸೇತುವೆ, 15 ಅಂಡರ್ ಪಾಸ್ (Underpass) ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆ ಲಕ್ಷಾಂತರ ಜನರಿಗೆ ಅನುಕೂಲ ಆಗಿದ್ದು ಬೆಂಗಳೂರು-ಮೈಸೂರು ಕೇವಲ 75 ರಿಂದ 80 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಈ ಮೂಲಕ ತಮ್ಮ ಅಮೂಲ್ಯ ಸಮಯವನ್ನು ಉಳಿಸಿಬಹುದು.

ಬೆಂಗಳೂರು-ಮೈಸೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿ ಪರದಾಡಿದ ಪ್ರಯಾಣಿಕರು

ದಶಫಥ ರಸ್ತೆ ವೀಕ್ಷಣೆಗೆ ಯುವಕನಿಂದ ಅಡ್ಡಿ: ಮೈಸೂರು - ಬೆಂಗಳೂರು ಹೆದ್ದಾರಿ ವೀಕ್ಷಣೆ ವೇಳೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ (Shettihalli) ಗ್ರಾಮದ ಬಳಿ ಪ್ರತಾಪ್ ಸಿಂಹ ಕಾರು ಅಡ್ಡಗಟ್ಟಿದ ಯುವಕ ಪರಿಹಾರ ಕೊಡಿಸುವಂತೆ ಸಂಸದರಿಗೆ ಮನವಿ ಮಾಡಿದ್ದಾನೆ. ಮೈಸೂರು-ಕುಶಾಲನಗರ ರಸ್ತೆಗಾಗಿ ಜಮೀನು ಸ್ವಾಧೀನ (Possession) ಪಡಿಸಿಕೊಂಡಿದ್ದು, ಈವರೆಗೆ ಪರಿಹಾರ (compensation) ಸಿಕ್ಕಿಲ್ಲ. ರೈತರಿಗೆ ಪರಿಹಾರ ಕೊಡಿಸುವಂತೆ ಒತ್ತಾಯಿಸಿ ಯುವಕ ಕೇಳಿಕೊಂಡಿದ್ದಾನೆ. ಈ ವೇಳೆ ಯುವಕನಿಗೆ ಭರವಸೆ ನೀಡಿದ‌ ಪ್ರತಾಪ್‌ ಸಿಂಹ ಇನ್ನೊಂದು ವಾರ (One week)ಸಮಯ ಕೊಡಿ. ನೀವು ಭೂಮಿ‌ ಕೊಟ್ಟಿದ್ದೀರಾ, ನಾನು ಪರಿಹಾರ ಕೊಡಿಸುತ್ತೇನೆ. ನನ್ನ ಕಚೇರಿಗೆ ಬನ್ನಿ, ಅಧಿಕಾರಿಗಳೊಂದಿಗೆ ನಾನೇ ಮಾತನಾಡಿ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಸಂಸದರ ಭರವಸೆ ಮಾತಿಗೆ ಧನ್ಯವಾದ ತಿಳಿಸಿದ ಯುವಕ ನಂತರ ಪ್ರತಾಪ್ ಸಿಂಹ ಜತೆಗೆ ಪೋಟೋ ತೆಗೆಸಿಕೊಂಡರು.

click me!