ಬೆಂಗಳೂರು: 20 ದಿನದಲ್ಲೇ 1 ಸಾವಿರ ಡೆಂಘೀ ಪ್ರಕರಣ| ಬಿಬಿಎಂಪಿ ಆಯುಕ್ತರಿಗೂ ಡೆಂಗ್ಯೂ ಫಿವರ್!

By Kannadaprabha News  |  First Published Jun 25, 2024, 8:41 AM IST

ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಜ್ವರದ ಹಾವಳಿ ಹೆಚ್ಚಾಗಿದೆ. ಕೇವಲ 20 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಜನರಲ್ಲಿ ಈ ಕಾಯಿಲೆ ಆವರಿಸಿದ್ದು, ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ವೈರಲ್‌ ಫೀವರ್‌ ಕೂಡ ಜನತೆಯನ್ನು ವಿಪರೀತವಾಗಿ ಬಾಧಿಸುತ್ತಿದೆ


 ಬೆಂಗಳೂರು (ಜೂ.25) : ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಜ್ವರದ ಹಾವಳಿ ಹೆಚ್ಚಾಗಿದೆ. ಕೇವಲ 20 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಜನರಲ್ಲಿ ಈ ಕಾಯಿಲೆ ಆವರಿಸಿದ್ದು, ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ವೈರಲ್‌ ಫೀವರ್‌ ಕೂಡ ಜನತೆಯನ್ನು ವಿಪರೀತವಾಗಿ ಬಾಧಿಸುತ್ತಿದೆ.

ಮಳೆ ಕಣ್ಣಾಮುಚ್ಚಾಲೆ, ಶೀತಗಾಳಿಯಂತಹ ಹವಾಮಾನ ವೈಪರಿತ್ಯವೇ ಡೆಂಘೀ, ಸಾಂಕ್ರಾಮಿಕ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ನಾಲ್ಕು ಪಟ್ಟು ಹೆಚ್ಚಿನದಾಗಿ ತಪಾಸಣೆ ಮಾಡಲಾಗಿದೆ, ನಿರಂತರವಾಗಿ ಫೀವರ್‌ ಸರ್ವೆ ನಡೆಸುತ್ತಿರುವುದು ಹೆಚ್ಚಿನ ಪ್ರಕರಣಗಳು ಪತ್ತೆಯಾಗಲು ಕಾರಣ ಎಂದು ಬಿಬಿಎಂಪಿ ವೈದ್ಯಾಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

ಗೆಳೆಯರೊಂದಿಗೆ ಸ್ನೂಕರ್ ಆಡುವಾಗಲೇ ಯುವಕನಿಗೆ ಹೃದಯಾಘಾತ; ಸ್ಥಳದಲ್ಲೇ ಹಾರಿಹೋಯ್ತು ಪ್ರಾಣಪಕ್ಷಿ!

ಕಳೆದ ಆರು ತಿಂಗಳಲ್ಲಿ ಜೂನ್‌ 20ರವರೆಗೆ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ 2457 ಡೆಂಘೀ ಪ್ರಕರಣ(Dengue case) ದಾಖಲಾಗಿದೆ (ಕಳೆದ ವರ್ಷ 1272). ಆದರೆ, ಕೇವಲ 20 ದಿನಗಳಲ್ಲಿ ಅಂದರೆ ಜೂನ್‌ 1ರಿಂದ ಜೂ.20ರವರೆಗೆ 1246 ಡೆಂಘೀ ಪ್ರಕರಣ ದಾಖಲಾಗಿದೆ. ಜನವರಿಯಿಂದ ಇಲ್ಲಿವರೆಗೆ 109 ಜನರಲ್ಲಿ ಚಿಕೂನ್‌ಗುನ್ಯಾ ಹಾಗೂ ಐವರಲ್ಲಿ ಮಲೇರಿಯಾ ಪತ್ತೆಯಾಗಿದೆ. ನೆಗಡಿ, ಕೆಮ್ಮು ಜ್ವರ ಒಳಗೊಂಡ ವೈರಲ್‌ ಫೀವರ್‌(Viral fever) 1500ಕ್ಕೂ ಹೆಚ್ಚು ಜನರಲ್ಲಿ ಕೂಡ ಕಾಣಿಸಿಕೊಂಡಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮಹಾದೇವಪುರ ಹಾಗೂ ಪೂರ್ವ ವಲಯದಲ್ಲಿ ಹೆಚ್ಚಿನವರಲ್ಲಿ ಡೆಂಘೀ ಜ್ವರ(Dengue fever) ಕಂಡುಬರುತ್ತಿದೆ. ದಕ್ಷಿಣ ವಲಯದಲ್ಲಿ ಹೆಚ್ಚಾಗಿ ಚಿಕೂನ್‌ ಗುನ್ಯಾ ಕಂಡುಬಂದಿದೆ ಎಂದು ಬಿಬಿಎಂಪಿ ಅಂಕಿ ಅಂಶಗಳು ಹೇಳುತ್ತಿವೆ. ಈ ಪ್ರದೇಶಗಳಲ್ಲಿ ಕಟ್ಟಡ ಕಾಮಗಾರಿ ಹೆಚ್ಚಾಗಿ ನಡೆಯುತ್ತಿವುದು ನೀರು ನಿಲ್ಲಲು ಕಾರಣವಾಗಿದೆ. ಹೀಗಾಗಿ ಹೆಚ್ಚಿನವರಲ್ಲಿ ಡೆಂಘೀ ಕಾಣಿಸಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ। ಸಯ್ಯದ್‌ ಮದನಿ ತಿಳಿಸಿದರು.

ಕಳೆದ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಆರು ತಿಂಗಳ ಅವಧಿಯಲ್ಲಿ 1009 ಜನರನ್ನು ಡೆಂಘೀ ಪರೀಕ್ಷೆ(Dengue test)ಗೆ ಒಳಪಡಿಸಲಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ ಶೇ. 75ರಷ್ಟು ಪರೀಕ್ಷೆ ಹೆಚ್ಚಿಸಲಾಗಿದ್ದು , 4063 ಜನರನ್ನು ಪರೀಕ್ಷಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂಘೀ ಪಾಸಿಟಿವ್‌ ಶೇ. 40ರಷ್ಟು ಹೆಚ್ಚಾಗಿದೆ.

ನಿರಂತರವಾಗಿ ಫೀವರ್‌ ಸರ್ವೆ(Dengue case survey) ನಡೆಸಲಾಗುತ್ತಿದ್ದು, ಈ ವೇಳೆ ಶಂಕಿತರನ್ನು ಡೆಂಘೀ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಆರೋಗ್ಯ ಇಲಾಖೆ ಸಲಹೆಯಂತೆ ಲಾರ್ವಾ ತಡೆಯಲು ಫಾಗಿಂಗ್‌, ಮನೆಗಳ ಸುತ್ತ ನೀರು ನಿಲ್ಲದಂತೆ ಜಾಗೃತಿ ಮೂಡಿಸುವುದು ಸೇರಿ ಇತರೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ। ಸಯ್ಯದ್‌ ಮದನಿ ಹೇಳಿದರು.

ಈ ನಡುವೆ ಚಿಕೂನ್‌ಗುನ್ಯಾ ಭೀತಿ ಕೂಡ ಇದೆ. ವರ್ಷದ ಪ್ರಾರಂಭದಿಂದ ಇಲ್ಲಿವರೆಗೆ 224 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 109 ಜನರಲ್ಲಿ ಪಾಸಿಟಿವ್‌ ಕಂಡುಬಂದಿತ್ತು. ದಕ್ಷಿಣ ವಲಯದಲ್ಲೇ 95 ಪ್ರಕರಣಗಳು ಪತ್ತೆಯಾಗಿವೆ. ಇನ್ನು, ಮೂರ್ನಾಲ್ಕು ದಿನ ಇರುವ ಸಾಮಾನ್ಯ ಜ್ವರ, ನೆಗಡಿಗಳೂ ಹೆಚ್ಚಿನವರನ್ನು ಕಾಡುತ್ತಿದೆ.

ಡೆಂಘೀ ಪೀಡಿತರು ನಗರದ ವಿಕ್ಟೋರಿಯಾ, ಬೌರಿಂಗ್‌, ಕೆ.ಜಿ.ಜನರಲ್‌ ಸೇರಿ ಇನ್ನಿತರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಹೆಚ್ಚಿನವರ ಆರೋಗ್ಯ ನಿಯಂತ್ರಣದಲ್ಲಿದೆ. ಅಗತ್ಯಕ್ಕೆ ಬೇಕಾದ ಎಲ್ಲ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಆಯುಕ್ತರಿಗೆ ಡೆಂಘೀ!

ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌(Tushar girinath IAS) ಕೂಡ ಡೆಂಘೀಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರ ರಕ್ತದ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಡೆಂಘೀ ಇರುವುದು ದೃಢಪಟ್ಟಿದೆ. ಮನೆಯಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಲಯಡೆಂಘೀ ಪ್ರಕರಣ ( ಜೂನ್‌1-ಜೂ.20)

  • ಬೊಮ್ಮನಹಳ್ಳಿ113
  • ದಾಸರಹಳ್ಳಿ6ಪೂರ್ವ236
  • ಮಹಾದೇವಪುರ328ಆರ್‌.ಆರ್‌.ನಗರ83
  • ದಕ್ಷಿಣ113ಪಶ್ಚಿಮ77
  • ಯಲಹಂಕ90
  • ಒಟ್ಟು1046
click me!