ಗೆಳೆಯರೊಂದಿಗೆ ಸ್ನೂಕರ್ ಆಡುವಾಗಲೇ ತೀವ್ರ ಹೃದಯಾಘಾತ ಸಂಭವಿಸಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಧಾರವಾಡ ನಗರದ ರಜತಗಿರಿ ಬಡಾವಣೆಯಲ್ಲಿ ನಡೆದಿದೆ.
ಧಾರವಾಡ (ಜೂ.25): ಗೆಳೆಯರೊಂದಿಗೆ ಸ್ನೂಕರ್ ಆಡುವಾಗಲೇ ತೀವ್ರ ಹೃದಯಾಘಾತ ಸಂಭವಿಸಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಧಾರವಾಡ ನಗರದ ರಜತಗಿರಿ ಬಡಾವಣೆಯಲ್ಲಿ ನಡೆದಿದೆ.
ಸುಶಾಂತ್ ಮಲ್ಲಿಗೇರಿ, ಮೃತ ದುರ್ದೈವಿ. ಮೂಲತಃ ಬಾಗಲಕೋಟೆ ನಿವಾಸಿಯಾಗಿರುವ ಸುಶಾಂತ್, ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಸ್ನೂಕರ್ ಗೇಮ್‌ನಲ್ಲಿ ಆಸಕ್ತಿ ಹೊಂದಿದ್ದ ಯುವಕ. ಗೆಳೆಯರೊಂದಿಗೆ ಸ್ನೂಕರ್ ಆಟವಾಡಲು ಬರುತ್ತಿದ್ದ. ಎಂದಿನಂತೆ ಗೆಳೆಯರೊಂದಿಗೆ ಬಂದ ಯುವಕ ಸ್ನೂಕರ್ ಆಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಏಕಾಏಕಿ ಕುಸಿದುಬಿದ್ದಿರುವ ಯುವಕ. ಕೂಡಲೇ ಸ್ನೇಹಿತರು ಗಾಬರಿಯಾಗಿ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.
33 ಕೋಟಿ ಗೆದ್ದವನಿಗೆ ಒಂದು ರೂ ಅನುಭವಿಸೋ ಯೋಗ ಇಲ್ಲ: ಲಾಟರಿ ಗೆಲ್ಲುತ್ತಿದ್ದಂತೆ ಎಳೆದೊಯ್ದ ಜವರಾಯ
ಘಟನೆ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.