ಕಾಫಿನಾಡಲ್ಲಿ ಅಪರೂಪದ ಹಾವು 'Bamboo pit viper' ಪತ್ತೆ, ಹಾವಿನ ವಿಶೇಷ ಏನು ಗೊತ್ತಾ?

By Ravi JanekalFirst Published Oct 7, 2023, 7:14 PM IST
Highlights

ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವನ್ನು ಸೆರೆ ಹಿಡಿಯಲಾಗಿದೆ.ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವ ಅಳಿವಿನಂಚಿನ ಬ್ಯಾಂಬೋ ಪಿಟ್ ವೈಫರ್  ಹಾವು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಸೆರೆ ಸಿಕ್ಕಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.7): ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವನ್ನು ಸೆರೆ ಹಿಡಿಯಲಾಗಿದೆ.ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವ ಅಳಿವಿನಂಚಿನ ಬ್ಯಾಂಬೋ ಪಿಟ್ ವೈಫರ್  ಹಾವು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಸೆರೆ ಸಿಕ್ಕಿದೆ.

ತಲೆ ಮೇಲೆ ಬಿದ್ದ ನೀರನ್ನ ದೇಹಕ್ಕೆ ಹಾಗೇ ಹೀರಿಕೊಳ್ಳುವ ಏಕೈಕ ಉರಗ :

ಉರಗ ಸಂತತಿಯಲ್ಲೇ ತಲೆ ಮೇಲೆ ಬಿದ್ದ ನೀರನ್ನ ದೇಹಕ್ಕೆ ಹಾಗೇ ಹೀರಿಕೊಳ್ಳುವ ಏಕೈಕ ಉರಗ ಬ್ಯಾಂಬೋ ಫಿಟ್ ವೈಫರ್ ಹಾವು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಪತ್ತೆಯಾಗಿದೆ. ಕಳಸ ಪಟ್ಟದ ಕಳಸೇಶ್ವರ ದೇಗುಲದ ಪಕ್ಕದ ಚಂದ್ರು ಭಟ್ ಎಂಬುವರ ಮನೆಯ ಗಿಡದಲ್ಲಿದ್ದ ಈ ಅಪರೂಪದ ಹಾವನ್ನ ಉರಗ ತಜ್ಞ ರಿಜ್ವಾನ್ ಸೆರೆ ಹಿಡಿದಿದ್ದಾರೆ. 

 

ಗುಹೆಯೊಂದರಲ್ಲಿ 6 ಸಾವಿರ ವರ್ಷಗಳಷ್ಟು ಹಳೆಯ ಶೂ ಪತ್ತೆ

ಈ ಹಾವು ಕಚ್ಚಿದರೆ ಸಾಯುವುದಿಲ್ಲ. ಆದರೆ, ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಸಾವೂ ಸಂಭವಿಸಬಹುದು. ಈ ಅಪರೂಪದ  ಹಾವಿನ ತಳಿ ಅಳಿವಿನಂಚಿನ ಜೀವಿಯಾಗಿದ್ದು, ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತವೆ. ಈ ಹಾವು ಹೆಚ್ಚಾಗಿ ಬಿದಿರಿನ ಬಂಬಿನಲ್ಲಿ ವಾಸವಿರುತ್ತದೆ. ಮನೆ ಮಾಲೀಕ ಚಂದ್ರು ಭಟ್ ಮನೆ ಅಂಗಳದ ಗಿಡದ ಮೇಲಿದ್ದ ಹಾವನ್ನ ಕಂಡು ಮನೆಯುವರು ಆತಂಕದಿಂದ ಉರಗ ತಜ್ಞ ರಿಜ್ವಾನ್ ಗೆ ಫೋನ್ ಮಾಡಿದ್ದಾರೆ.

ಬ್ಯಾಂಬೋ ಪಿಟ್ ವೈಫರ್ : 

ಸ್ಥಳಕ್ಕೆ ಬಂದ ರಿಜ್ವಾನ್ ಹಾವಿನ ವಿಶೇಷತೆ ತಿಳಿಸಿ ಎಚ್ಚರಿಕೆಯಿಂದ ಹಾವನ್ನ ಸರೆ ಹಿಡಿದಿದ್ದಾರೆ. ಈ ಬ್ಯಾಂಬೋ ಫಿಟ್ ವೈಫರ್ ಉರಗ ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವಾಗಿದೆ. ಈ ಸುಂದರ ಹಾವನ್ನ ಕಂಡು ಮನೆ ಮಾಲೀಕ ಹಾಗೂ ಸ್ಥಳಿಯರು ಖುಷಿ ಪಟ್ಟಿದ್ದಾರೆ. ಹೆಚ್ಚಾಗಿ ಬಿದಿರಿನ ಬೊಂಬುಗಳಲ್ಲಿ ವಾಸವಿರುವ ಕಾರಣ ಇದಕ್ಕೆ ಬ್ಯಾಂಬೋ ಪಿಟ್ ವೈಫರ್ ಎಂದು ಕರೆಯಲಾಗುತ್ತದೆ. ಈ ಹಾವು ಕಡಿದರೆ ಸಾಯುವುದಿಲ್ಲ. ಆದರೆ ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಅಪರೂಪದ ಹಾವಿನ ಸೌಂದರ್ಯ ನೋಡಿ ಸ್ಥಳೀಯರು ಖುಷಿ ಪಟ್ಟಿದ್ದಾರೆ. ಉರಗ ತಜ್ಞ ರಿಜ್ವಾನ್ ವರು ಈ ಅಪರೂಪದ ಹಾವನ್ನ ಸೆರೆ ಹಿಡಿದು, ಕಳಸ ಅರಣ್ಯದೊಳಕ್ಕೆ ಬಿಟ್ಟುಬಂದಿದಾರೆ.

ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರಿಯ... ಕರಿಚಿರತೆಯ ಸುಂದರ ಫೋಟೋಗಳು

click me!