ಕಾಂಗ್ರೆಸ್‌ ಅಧಿಕಾರದಲ್ಲಿ ಮುಸ್ಲಿಂ ಅಧಿಕಾರಿಯ ದರ್ಪ: ಸ್ವಪಕ್ಷದ ವಿರುದ್ಧವೇ ಸಿಡಿದೆದ್ದ ಶಾಸಕ

By Sathish Kumar KH  |  First Published Oct 7, 2023, 7:03 PM IST

ಸರ್ಕಾರದಲ್ಲಿ ಸಚಿವರು ಆಯ್ತು ಈಗ ಅಧಿಕಾರಿಗಳೇ ಶಾಸಕರ ಮಾತು ಕೇಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಬೀಳಗಿ ಶಾಸಕ ಜೆ.ಟಿ. ಪಾಟೀಲ್‌ ಪತ್ರ ಬರೆದಿದ್ದಾರೆ.


ಬಾಗಲಕೋಟೆ (ಅ.07): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತ ಪಕ್ಷದಲ್ಲಿ ಶಾಸಕರು ಹಾಗೂ ಶಾಸಕರ ನಡುವೆ ತೀವರ ತಿಕ್ಕಾಟ ನಡೆಯುತ್ತಿದೆ. ಇನ್ನು ಸಿಎಂ ಹಾಗೂ ಡಿಸಿಎಂ ಬಣಗಳಂತೆ ಕೆಲವರು ವರ್ತನೆ ಮಾಡುತ್ತಿದ್ದಾರೆಂಬ ಆರೋಪವೂ ವಿಪಕ್ಷದಿಂದ ಕೇಳಿಬಂದಿದೆ. ಇದರ ನಡುವೆ ಸರ್ಕಾರದ ವಿರುದ್ಧ ಹಾಗೂ ಸಚಿವರ ವಿರುದ್ಧ ಸ್ವಪಕ್ಷೀಯ ಶಾಸಕರೇ ಅಸಮಾಧಾನ ಹೊರ ಹಾಕುತ್ತಿರುವುದು ಆಡಳಿತಾರೂಢ ಸರ್ಕಾರಕ್ಕೆ ಇರಿಸುಮುರಿಸುವ ತಂದಿತ್ತು. ಈಗ ಅಧಿಕಾರಿಗಳು ಶಾಸಕರ ಮಾತನ್ನು ಕೇಳದೇ ಉಡಾಫೆ ಮಾಡುತ್ತಿದ್ದಾರೆಂದು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಂದು ಪತ್ರ ಸಮರ ಶುರುವಾಗಿದೆ. ಇಷ್ಟು ದಿನ ಕಾಂಗ್ರೆಸ್‌ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಿದ್ದ ಶಾಸಕರು, ಈಗ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ವಿಧಾನಸಭಾ ಅಧ್ಯಕ್ಷರಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಪತ್ರವನ್ನು ಬರೆದಿದ್ದಾರೆ. ಇನ್ನು ಸಭಾಧ್ಯಕ್ಷರಿಗೆ ಪತ್ರ ಬರೆದು ಆಕ್ರೋಶ ಹೊರ ಹಾಕಿರುವುದು ಬಾಗಲಕೋಟೆ ಜಿಲ್ಲೆ ಬೀಳಗಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಟಿ. ಪಾಟೀಲ್ ಅವರಾಗಿದ್ದಾರೆ. 
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಪ್ತ ಕಾರ್ಯದರ್ಶಿ ಕೆ.ಎ. ಇದಾಯತ್ ಉಲ್ಲಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇವರಿಗೆ ಕ್ಷೇತ್ರದ ಸಮಸ್ಯೆಯ ಬಗ್ಗೆ ಸಚಿವರ ಗಮನಕ್ಕೆ ತರುವಂತೆ ತಿಳಿಸಿದರೆ ಅಧಿಕಾರಿಯ ವರ್ತನೆ, ಧಿಮಾಕೂ, ವರಟುತನದಿಂದ ಕೂಡಿದೆ. ಕ್ಷೇತ್ರದ ಸಮಸ್ಯೆ ಹೇಳಿದ್ರೆ ಸರಿಯಾದ ಸ್ಪಂದನೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರಿ ಅಧಿಕಾರಿ ಕೆ.ಎ ಇದಾಯತ್ ಉಲ್ಲಾ ಅವರ ಕ್ರಮ ತೆಗೆದುಕೊಳ್ಳುವಂತೆ  ಮೇಲೆ ಹಕ್ಕು ಬಾದ್ಯತಾ ಸಮಿತಿಗೆ ಶಿಫಾರಸು ಮಾಡಲು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

Tap to resize

Latest Videos

ರೈತ ಹಂತಕ ಸಿಎಂ ಸಿದ್ದರಾಮಯ್ಯ ಎಂದು ಫೋಟೋ ಹರಿಬಿಟ್ಟ ಬಿಜೆಪಿ

ಹಿಂದೂ ಸಂಪ್ರದಾಯದಂತೆ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ: ಉತ್ತರ ಕನ್ನಡ (ಅ.07): ಧಾರವಾಡದ ಮುಸ್ಲಿಂ ಕುಟುಂಬವೊಂದು ಪುಣ್ಯ ಕ್ಷೇತ್ರ ಗೋಕರ್ಣದಲ್ಲಿ ಪಿತೃಕಾರ್ಯವನ್ನು ನಡೆಸಿದ ಅಪರೂಪದ ಘಟನೆಯು ಕೆಲವು ದಿನಗಳ ಹಿಂದೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ರಾಜ್ಯದ ಹಲವು ನದಿ ತೀರ ಪ್ರದೇಶಗಳು ಹಾಗೂ ದೇಶದ ಹಲವು ಸಮುದ್ರ ತೀರದ ಪ್ರದೇಗಳಲ್ಲಿ ಹಿಂದೂಗಳು ಸಾಮಾನ್ಯವಾಗಿ ಪಿತೃ ಕಾರ್ಯಗಳನ್ನು ನೆವೇರಿಸಲಾಗುತ್ತದೆ. ಆದರೆ, ಇಲ್ಲೊಂದು ಮುಸ್ಲಿಂ ಕುಟುಂಬವು ಹಿಂದೂ ಸಂಪ್ರದಾಯದಂತೆ ಗೋಕರ್ಣ ಸಮುದ್ರ ತೀರದಲ್ಲಿ ಪಿತೃ ಕಾರ್ಯವನ್ನು ನಡೆಸಿದ ಅಪರೂಪದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಮುಸ್ಲಿಂ ಕುಟುಂಬದಿಂದ ಪಿತೃಕಾರ್ಯವನ್ನು ನೆರವೇರಿಸಲಾಗಿದೆ.

ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನ ಗೋಕರ್ಣದ ಪಿತೃಶಾಲೆಯಲ್ಲಿ ಪೂರೈಕೆ ಮಾಡಲಾಗುದೆ. ಧಾರವಾಡದ ಧಾನೇಶ್ವರಿ ನಗರದ ಶಂಸಾದ್ ಎಂಬ ಮಹಿಳೆಯ ಕುಟುಂಬದಿಂದ ಪಿತೃಕಾರ್ಯ ನೆರವೇರಿಸಲಾಗಿದೆ. ಮೊದಲಿನಿಂದಲೂ ಕುಂಡಲೀ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳ ಮುಸ್ಲಿಂ ಕುಟುಂಬ ಇದಾಗಿದೆ. ಶಂಸಾದ್ ಅವರ ತಮ್ಮನಿಗೆ ಮದುವೆ ಸಂಬಂಧ ಹೆಣ್ಣು ಸಿಗದೇ ಇದ್ದಾಗ ಜ್ಯೋತಿಷಿಯ ಮೊರೆ ಹೋಗಿದ್ದರು. ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳಿಗೆಯ‌ ಉದ್ದೇಶದಿಂದ ಪಿತೃಕಾರ್ಯ ನೆರವೇರಿಸಲಾಗಿದೆ.

ಗೋಕರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ!

ಗೋಕಣದಲ್ಲಿ ಪುರೋಹಿತರಾದ ನಾಗರಾಜ ಭಟ್ ಗುರ್ಲಿಂಗ ಹಾಗೂ ಸುಬ್ರಹಣ್ಯ ಚಿತ್ರಿಗೆಮಠ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿಸಲಾಗಿದೆ. ಗೋಕರ್ಣದಲ್ಲಿ ಕ್ರೈಸ್ತ ಸಮುದಾಯದ ಸಾಕಷ್ಟು ಮಂದಿ ಪಿತೃ ಕಾರ್ಯ ನೆರವೇರಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಮುಸ್ಲಿಂ ಕುಟುಂಬದಿಂದ ಪಿತೃಕಾರ್ಯ ನೆರವೇರಿಸಿದ್ದಾರೆ ಎಂದು ಪುರೋಹಿತರು ಮಾಹಿತಿ ನೀಡಿದ್ದಾರೆ. ಈಗ ಮುಸ್ಲಿಂ ಕುಟುಂಬಕ್ಕೆ ಹಿಂದೂಗಳು ಕೂಡ ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ.

click me!