ನಾನು ಬಸವ ತತ್ವಕ್ಕೆ ಅಪಾರ ಗೌರವ ಕೊಡುವವನು. ಬಸವ ತತ್ವಗಳು ಎಂದೆಂದಿಗೂ ಪ್ರಸ್ತುತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಂದು ಮೈಸೂರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೈಸೂರು (ಅ.7): ನಾನು ಬಸವ ತತ್ವಕ್ಕೆ ಅಪಾರ ಗೌರವ ಕೊಡುವವನು. ಬಸವ ತತ್ವಗಳು ಎಂದೆಂದಿಗೂ ಪ್ರಸ್ತುತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಮೈಸೂರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 26 ವರ್ಷಗಳಿಂದ ಮೈಸೂರಿನಲ್ಲಿ ಬಸವ ಜಯಂತಿ ಆಚರಣೆ ಆಗ್ತಿದೆ. ನಾನು ಮೂರು ಬಾರಿ ಭಾಗಿ ಆಗಿದ್ದೇನೆ. ಬಸವಾದಿ ಶರಣರನ್ನು ಸ್ಮರಣೆ ಮಾಡಿಕೊಂಡು, ವಿಚಾರಗಳನ್ನು ಅವಶ್ಯವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
undefined
ಬಸವಣ್ಣನವರು ಸಮಾಜದಲ್ಲಿ ಜಾತಿ ತೊಡೆದು ಹಾಕಿ ವೈಚಾರಿಕತೆ ನೆಲೆಸಲು ಶ್ರಮಿಸಿದ್ರು. ಅದಕ್ಕಾಗಿ ಅವರ ವಿಚಾರಧಾರೆಯಂತೆ ನಡೆಯಲು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. 2013ರಲ್ಲಿ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕಾರ ಮಾಡಿದ್ದೆ. ಅವರು ನುಡಿದಂತೆ ನಡೆದವರು, ಅವರಂತೆ ನುಡಿದಂತೆ ನಡೆಯಲು ಪ್ರೇರಣೆ ಆಗಲಿ ಅಂತ ಅಂದು ನಾನು ಪ್ರಮಾಣ ವಚನ ಸ್ವೀಕಾರ ಮಾಡಿದ್ದೆ. ನಾವು ಚುನಾವಣೆಯಲ್ಲಿ ಹಲವು ವಚನಗಳನ್ನು ಈಡೇರಿಸಬೇಕಿತ್ತು, ಅವುಗಳನ್ನು ಈಡೇರಿಸಿದೆವು.
ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ ಅಂತಾ ಯಾರು ಹೇಳಿದ್ದು? ನನಗೆ ಕೊಟ್ಟಿಲ್ವಾ ಎಂದ ಸಿದ್ದರಾಮಯ್ಯ!
ಜಡ್ಡು ಕಟ್ಟಿದ್ದ ಸಮಾಜಕ್ಕೆ ಚಲನೆ ಕೊಡುವ ಕೆಲಸ ಬಸವಣ್ಣ ಮಾಡಿದ್ರು. ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ರು. ವಿಚಾರಶೀಲತೆ ಸಮಾಜ ಬಂದಾಗ ಮಾತ್ರ ಮಾನವೀಯ ಸಮಾಜ ನಿರ್ಮಾಣ ಸಾಧ್ಯ. ಸಮಾಜ ಜಾತಿ ಹೆಸರಿನಲ್ಲಿ ವಿಭಾಗ ಆಗಬಾರದು. ಹುಟ್ಟುವಾಗ ಪ್ರತಿ ಮಗು ವಿಶ್ವಮಾನವ ನಾಗಿ ಹುಟ್ಟುತ್ತೆ, ಸಮಾಜದ ಪ್ರಭಾವದಿಂದ ಅಲ್ಪ ಮಾನವ ಆಗುತ್ತಾನೆ ಅಂತ ಕುವೆಂಪು, ಬಸವಣ್ಣ ಹೇಳಿದ್ರು. ಶ್ರೇಣೀಕೃತ ವ್ಯವಸ್ಥೆ ಹೋಗಬೇಕು. ಮೇಲು ಕೀಳು ಇನ್ನೂ ಇದೆ. ಮೇಲಿರುವವನು ಶ್ರೇಷ್ಟ, ಕೆಳಗಿರುವವನು ಕನಿಷ್ಠ ಅಂತ ಇದೆ. ಇದು ಹೋಗಬೇಕು, ಸಮಾನವಾದ ಸಮಾಜ ಆಗಬೇಕು ಎಂದು ಹೇಳಿ ಶಾಸಕ ಶ್ರೀವತ್ಸ ಗೊತ್ತಾಯ್ತ ಎಂದ ಸಿಎಂ ಸಿದ್ದರಾಮಯ್ಯ.
ಸಾಹಿತ್ಯದಲ್ಲೇ ವಚನ ಸಾಹಿತ್ಯ ಬಹುಕ ವಿಶಿಷ್ಟವಾದುದು. ಬಸವಣ್ಣನವರ ವಚನ ಸಾಹಿತ್ಯ ಜನರಿಗೆ ಸುಲಭವಾಗಿ ಅರ್ಥ ಆಗುವಂತೆ ಇದೆ. ಇವನ್ಯಾರವ, ಇವನ್ಯಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ. ಇದನ್ನ ಸಂಸ್ಕೃತದಲ್ಲಿ ಹೇಳಿದ್ರೆ ಗೊತ್ತಾಗುತ್ತಾ? ಸಂಸ್ಕೃತ ದೇವ ಭಾಷೆ ಎನ್ನುತ್ತೇವೆ. ನನಗೂ ಸಂಸ್ಕೃತ ಹೇಳಿಕೊಡುತ್ತಿದ್ದರು. ಆದರೆ ಅವರೇನು ಹೇಳುತ್ತಿದ್ದಾರೆಂದು ನನಗೆ ಗೊತ್ತಾಗುತ್ತಿರಲಿಲ್ಲ. ಆದರೂ ಹೇಳುತ್ತಿದ್ದರು. ಹಾಗಾಗಿ ಜನರಿಗೆ ಅರ್ಥ ಆಗುವ ಭಾಷೆಯಲ್ಲಿ ಇರಬೇಕು. ಪ್ರಜಾಪ್ರಭುತ್ವ ಆರಂಭ ಆಗಿದ್ದೇ ಬಸವಣ್ಣನಕಾಲದಲ್ಲಿ. ಅದು ಸಂವಿಧಾನ ಬಂದಾಗ ಆಗಿದ್ದಲ್ಲ. ಅವತ್ತಿನ ಅನುಭವ ಮಂಟಪ ಇಂದಿನ ವಿಧಾನಸಭೆ, ಲೋಕಸಭೆ, ರಾಜ್ಯಸಭೆಯಂತೆ ಇತ್ತು ಎಂದರು
ಬಸವಣ್ಣನವರು ಶೂದ್ರರ ಪರವಾಗಿ ಕೆಲಸ ಮಾಡಿದರು. ಕೆಳ ವರ್ಗದ ಅಲ್ಲಮ್ಮಪ್ರಭು ಅವರನ್ನು ಅನುಭವ ಮಂಟಪದ ಅಧ್ಯಕ್ಷರಾಗಿ ಮಾಡಿದ್ರು. ಬಸವಾದಿ ಶರಣರು ಮಾನವತವಾದಕ್ಕೆ ಹೆಚ್ಚು ಹೊತ್ತು ಕೊಟ್ಟರು. ಮಧುವರಸನ ಮಗಳು, ಅರಳಯ್ಯ ಮಗನ ಮದುವೆ ಮಾಡಿದರು. ಇದು ಮೇಲ್ವರ್ಗದವರಿಗೆ ಸಹಿಸಲು ಆಗಲಿಲ್ಲ. ಹಾಗಾಗಿ ಬಿಜ್ಜಳನ ಬಳಿ ಚಾಡಿ ಹೇಳಿದ್ರು ಎಂದು ಬಸವಣ್ಣನ ಜೀವನ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟರು.
ಕರ್ನಾಟಕದಲ್ಲಿ ಹಸಿರು ಬರ, 4860 ಕೋಟಿ ಪರಿಹಾರಕ್ಕೆ ಮನವಿ: ಸಿಎಂ ಸಿದ್ದರಾಮಯ್ಯ
ಸಮಾಜದಲ್ಲಿ ಇನ್ನೂ ಅಸಮಾನತೆ ಇದೆ:
ಸ್ವಾತಂತ್ರ್ಯ ಬಂದು 75 ವರ್ಷ ಆದ್ರೂ ಅಸಮಾನತೆ ಸಮಾಜದಲ್ಲಿ ಇದೆ. ಅಸಮಾನತೆ ಹೋಗಬೇಕು, ಇಲ್ಲವಾದ್ರೆ ಶೋಷಣೆಗೆ ಒಳಗಾದವರು ರಾಜಕೀಯ ಸೌಧವನ್ನ ದ್ವಂಸ ಮಾಡುತ್ತಾರೆ ಅಂತ ಅಂಬೇಡ್ಕರ್, ಬಸವಣ್ಣ ಹೇಳಿದ್ದಾರೆ. ಅದಕ್ಕಾಗಿ ಅಸಮಾನತೆ ಕಡಿಮೆ ಮಾಡಲು ಅನೇಕ ಗ್ಯಾರಂಟಿ ಕೊಟ್ಟಿದ್ದೇವೆ. ನಮ್ಮ ಗ್ಯಾರಂಟಿಗಳು ಎಲ್ಲಾ ಜಾತಿಯ ಬಡವರಿಗೆ ನ್ಯಾಯ ಸಿಗಬೇಕು ಅಂತ ತಂದಿದ್ದೇವೆ. 73 ಕೋಟಿ ಮಹಿಳೆಯರು ಇಲ್ಲಿವರೆಗೆ ಬಸ್ ಪ್ರಯಾಣ ಮಾಡಿದ್ದಾರೆ. ಇಲ್ಲಿ ಯಾವುದೇ ಜಾತಿ ಧರ್ಮ ಇಲ್ಲ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನ ಭಾಗ್ಯ, ಯುವನಿಧಿಗೆ ಯಾವುದೇ ಜಾತಿ ಧರ್ಮ ಇಲ್ಲ. ಬರಿ ಇವನ್ಯಾರವ ಇವನ್ಯಾರವ ಅಂತ ಹೇಳಿ ಪಕ್ಕಕ್ಕೆ ಕರೆದು ನೀನು ಯಾವ ಜಾತಿ ಎನ್ನಬಾರದು ಅಶೋಕ್ ಖೇಣಿ ಗೊತ್ತಾಯ್ತ ಎಂದ ಸಿಎಂ ಸಿದ್ದರಾಮಯ್ಯ. ಇವ ನಮ್ಮವ ನಮ್ಮವ ಎನ್ನಬೇಕು ಇದೇ ಬಸವಣ್ಣ ಅವರಿಗೆ ನಾವು ಕೊಡಬೇಕಾದ ಗೌರವ ಎಂದರು.