ಅಯೋಧ್ಯೆ ರಾಮ ವಿಗ್ರಹ ಕೆತ್ತನೆಗೆ ರಾಜ್ಯದ ಇಬ್ಬರು: ಏಕಕಾಲಕ್ಕೆ 3 ಪ್ರತಿಮೆಗಳು ಸಿದ್ಧ

By Kannadaprabha News  |  First Published May 29, 2023, 9:07 AM IST

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ. ಇದೇ ಡಿಸೆಂಬರ್‌ ಒಳಗಾಗಿ ರಾಮಮಂದಿರದ ಗರ್ಭಗುಡಿ ನಿರ್ಮಾಣ ಮಾಡಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಪ್ರಯತ್ನಗಳು ಸಾಗಿವೆ. 


ಕಲಬುರಗಿ (ಮೇ.29): ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ. ಇದೇ ಡಿಸೆಂಬರ್‌ ಒಳಗಾಗಿ ರಾಮಮಂದಿರದ ಗರ್ಭಗುಡಿ ನಿರ್ಮಾಣ ಮಾಡಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಪ್ರಯತ್ನಗಳು ಸಾಗಿವೆ. ಈಗಾಗಲೇ ರಾಜಸ್ಥಾನದ ಒಬ್ಬ ಶಿಲ್ಪಿ, ಕರ್ನಾಟಕದ ಇಬ್ಬರು ಶಿಲ್ಪಿಗಳು ಸೇರಿ ಏಕಕಾಲಕ್ಕೆ ಮೂವರು ಶಿಲ್ಪಿಗಳು ಪ್ರತ್ಯೇಕವಾಗಿ ಬಾಲರಾಮನ ವಿಗ್ರಹ ಕೆತ್ತನೆಗೆ ತೊಡಗಿದ್ದಾರೆ ಎಂದು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ, ವಿಎಚ್‌ಪಿ ಕೇಂದ್ರೀಯ ಸಹಕಾರ್ಯದರ್ಶಿ ಗೋಪಾಲ್‌ ಹೇಳಿದ್ದಾರೆ.

ಭಾನುವಾರ ನಡೆದ ರಾಷ್ಟ್ರೋತ್ಥಾನ ಪರಿಷತ್‌ ವಿದ್ಯಾ ಕೇಂದ್ರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ ಕೆತ್ತನೆ ಬಳಿಕ ಮೂರೂ ವಿಗ್ರಹಗಳನ್ನು ಪರಿಶೀಸಲಾಗುತ್ತದೆ. ಶಿಲ್ಪಶಾಸ್ತ್ರ ಸಮ್ಮತವಾಗಿರತಕ್ಕಂಥ ವಿಗ್ರಹ ಆಯ್ಕೆ ಮಾಡಿ ಗರ್ಭಗುಡಿಯಲ್ಲಿ ಪ್ರತಿಷ್ಠಾನೆ ಮಾಡಲಾಗುತ್ತದೆ. ವಿಗ್ರಹ ಕೆತ್ತನೆಗೆ ಐದಾರು ತಿಂಗಳು ಬೇಕು. ಒಬ್ಬರಿಂದಲೇ ವಿಗ್ರಹ ಕೆತ್ತನೆಗೆ ಒಬ್ಬನೇ ಶಿಲ್ಪಿಗೆ ಜವಾಬ್ದಾರಿ ವಹಿಸಿದ್ದರೆ, ಕೊನೇ ಹಂತದಲ್ಲಿ ಸ್ವಲ್ಪ ಆಚೀಚೆ ಆದರೂ ಮತ್ತೊಂದು ವಿಗ್ರಹ ಹೊಂದಲು ಮತ್ತೆ 6 ತಿಂಗಳು ಕಾಯಬೇಕಾಗುತ್ತದೆ. ಇಂಥದ್ದೆಲ್ಲ ನಿವಾರಿಸಿ ಸುಂದರ ರಾಮಲಲ್ಲಾ ಮಂದಿರದೊಳಗೆ ಬಂದು ಕೂರಬೇಕು ಎಂಬ ಸದುದ್ದೇಶದಿಂದ ಏಕಕಾಲಕ್ಕೇ ಮೂವರು ಶಿಲ್ಪಿಗಳಿಗೆ ರಾಮನ ಬಾಲ ರೂಪ ವಿಗ್ರಹ ಕೆತ್ತನೆಗೆ ನೇಮಿಸಲಾಗಿದೆ. ಇನ್ನುಳಿದ 2 ವಿಗ್ರಹಗಳನ್ನು ಬೇರೆಕಡೆಗಳಲ್ಲಿ ಬಳಸಲಾಗುತ್ತದೆ ಎಂದರು.

Tap to resize

Latest Videos

undefined

ಜೀವನಾಂಶ ವಿಚಾರಣೆ ವೇಳೆ ಮದುವೆ ಸಿಂಧುತ್ವ ನಿಷ್ಕರ್ಷೆ ಸಲ್ಲ: ಹೈಕೋರ್ಟ್‌ ಮಹತ್ವದ ಆದೇಶ

ಮುಂದಿನ ವರ್ಷ ಜನವರಿಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಮಮಂದಿರ ನಿರ್ಮಾಣದ 3 ಹಂತಗಳಲ್ಲಿ ಮೊದಲ ಹಂತವನ್ನು ಡಿಸೆಂಬರ್‌ ಒಳಗಾಗಿ ಪೂರ್ಣಗೊಳಿಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ, ನೆಲ ಮಹಡಿಯಲ್ಲಿ ಐದು ಮಂಟಪಗಳಿದ್ದು, ಅವುಗಳಲ್ಲಿ ಅತ್ಯಂತ ಪ್ರಮುಖವಾದ ಗರ್ಭಗುಡಿಯಲ್ಲಿ ಬಾಲ ರೂಪಲ್ಲಿರುವ ರಾಮ ದೇವರ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ ಎಂದರು.

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ. ಇದೇ ಡಿಸೆಂಬರ್‌ಒಳಗಾಗಿ ರಾಮಮಂದಿರದ ಗರ್ಭಗುಡಿ ನಿರ್ಮಾಣ ಮಾಡಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಪ್ರಯತ್ನಗಳು ಸಾಗಿವೆ, ತಪ್ಪಿದ್ದಲ್ಲಿ 2024ರ ಜನವರಿ ತಿಂಗಳ ಮಂಕರ ಸಂಕ್ರಮಣದ ನಂತರದ ಶುಭ ಮುಹೂರ್ತದಲ್ಲಿ ರಾಮ ಮಂದಿರ ರಾಷ್ಟ್ರಕ್ಕೆ ಅರ್ಪಣ ಮಾಡೋದು ವಿಶ್ಚಿತ ಎಂದು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ, ವಿಎಚ್‌ಪಿ ಕೇಂದ್ರೀಯ ಸಹಕಾರ್ಯದರ್ಶಿ ಗೋಪಾಲ ಹೇಳಿದ್ದಾರೆ.

ಪಟ್ಟದಕಲ್ಲಿನ ಶಿವನ ಮೂರ್ತಿ ಕೈಯಲ್ಲೂ ‘ಸೆಂಗೋಲ್‌’!

ಕಲಬುರಗಿ ಸಂಚಾರದಲ್ಲಿರುವ ಗೋಪಾಲ ಇಲ್ಲಿನ ಅಫಜಲ್ಪುರ ರಸ್ತೆಯಲ್ಲಿ ಭಾನುವಾರ ನಡೆದ ರಾಷ್ಟ್ರೋತ್ಥಾನ ಪರಿಷತ್‌ ವಿದ್ಯಾ ಕೇಂದ್ರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡುತ್ತ ರಾಮ ಮಂದಿರ ನಿರ್ಮಾಣ ಕೆಲಸ ಕಾರ್ಯಗಳ ಮಾಹಿತಿ ಬಹಿರಂಗಪಡಿಸಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗಲಿದ್ದು, ಯಾವುದೇ ಕಾರಣಕ್ಕು ಇದು ಆಚೀಚೆ ಆಗೋದಿಲ್ಲ. ರಾಮಮಂದಿರ ನಿರ್ಮಾಣದ 3 ಹಂತಗಳಲ್ಲಿ ಮೊದಲ ಹಂತವನ್ನು ಡಿಸೆಂಬರ್‌ ಒಳಗಾಗಿ ಪೂರ್ಣಗೊಳಿಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ, ನೆಲ ಮಹಡಿಯಲ್ಲಿ ಐದು ಮಂಟಪಗಳಿದ್ದು, ಅವುಗಳಲ್ಲಿ ಅತ್ಯಂತ ಪ್ರಮುಖವಾದ ಗರ್ಭಗುಡಿಯಲ್ಲಿ ಬಾಲ ರೂಪಲ್ಲಿರುವ ರಾಮ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ.

click me!