
ಬೆಂಗಳೂರು (ಡಿ.20) : ಬೆಂಗಳೂರು ನಗರವಾಸಿಗಳೇ ತಿಂಗಳ ಕೊನೆ ವಾರ ಹೊರಗೆ ಹೊರಡುವ ಮುನ್ನ ಗಮನಿಸಿ. ಡಿ.29ರಂದು ಬೆಂಗಳೂರು ನಗರಾದ್ಯಂತ ಆಟೋ ಸೇವೆ ಸ್ಥಗಿತಗೊಳ್ಳಲಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಆಟೋ ಚಾಲಕರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ನಗರದಲ್ಲಿ ರಾಪಿಡೋ ಆಟೋ, ಬೌನ್ಸ್ ಬೈಕ್‌ಗಳಿಗೆ ಅನುಮತಿ ಕೊಟ್ಟ ಬಳಿಕ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ Rapido ಬೈಕ್ ಟ್ಯಾಕ್ಸಿ ಆಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿಯನ್ನು ಹಿಂಪಡೆಯುವಂತೆ ಆಟೋ ಚಾಲಕ ಸಂಘಟನೆಗಳು ಆಗ್ರಹಿಸಿದೆ.
Bike Taxi : ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಮಾಲೀಕರು, ಆಟೋ ಚಾಲಕರ ಜಟಾಪಟಿ ಶುರು
ಸಾರಿಗೆ ಇಲಾಖೆ ವಿರುದ್ಧ ಸಿಡಿದೆದ್ದಿರುವ ಆಟೋ ಚಾಲಕರು ಬೇಡಿಕೆ ಈಡೇರಿಸದಿದ್ದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಅದರ ಪ್ರಾರಂಭಿಕ ಹಂತವಾಗಿ ಆ.29ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಈಗಾಗಲೇ ಈ ಮುಷ್ಕರಕ್ಕೆ ಎರಡು ಲಕ್ಷಕ್ಕೂ ಅಧಿಕ ಆಟೋ ಚಾಲಕರು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಇದೇ ತಿಂಗಳು 29 ರಂದು ಆಟೋ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಅಂದು ಇಡೀ ದಿನ ನಗರದಲ್ಲಿ ಆಟೋಗಳು ರಸ್ತೆಗಿಳಿಯುವುದಿಲ್ಲ.
ಡಿ.29ರಂದು ಬೆಳಗ್ಗೆ ಬೃಹತ್ ಆಟೋ rally ನಡೆಯಲಿದ್ದು, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ನಿಂದ ಹೊರಟು ವಿಧಾನಸೌಧ ಮುತ್ತಿಗೆ ಹಾಕಲಿದೆ. ಈಗಾಗಲೇ ಮುಷ್ಕರಕ್ಕೆ 21 ಆಟೋ ಸಂಘಟನೆಗಳು ಈಗಾಗಲೇ ಸಾಥ್ ನೀಡಿವೆ. ಅಲ್ಲದೆ ರಾಜಧಾನಿಯ ಎರಡು ಲಕ್ಷದ ಹತ್ತು ಸಾವಿರ ಆಟೋ ಚಾಲಕರು ಬೆಂಬಲ ನೀಡಿದ್ದಾರೆ. ನಗರದ ಎಲ್ಲ ಆಟೋಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿರುವುದರಿಂದ ಅಂದು ಇಡೀ ನಗರ ಆಟೋ ಸೇವೆಯಿಲ್ಲದೆ ಬಣಗುಡಲಿದೆ.
ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ Rapido ಬೈಕ್ ಟ್ಯಾಕ್ಸಿ ಗಳ ಸಂಖ್ಯೆ ಹೆಚ್ವಾಗ್ತಿದೆ. ಇದರಿಂದ ಆಟೋಗಳಿಗೆ ಗ್ರಾಹಕರಿಲ್ಲದೆ. ದಿನದ ಕನಿಷ್ಟ ದುಡಿಮೆ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. rapido ಬೈಕ್ ಟ್ಯಾಕ್ಸಿಗೆ ಅನುಮತಿ ಇಲ್ಲದಿದ್ರೂ ನಗರದಲ್ಲಿ ರಾಜಾರೋಷವಾಗಿ ಓಡಿಸುತ್ತಿದ್ದಾರೆ. ಆರ್‌ಟಿಓ ಅಧಿಕಾರಿಗಳು ಬೈಕ್, ಟ್ಯಾಕ್ಸಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಆಟೋ ಚಾಲಕರ ಸಂಕಷ್ಟಕ್ಕೆ ಆರ್‌ಟಿಓ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ ಎಲೆಕ್ಟ್ರಿಕ್ ಬೈಕ್ ಗಳಿಗೆ ಅನುಮತಿ ನೀಡಿರುವುದೇ ಕಾರಣವಾಗಿದೆ.
ಎಲೆಕ್ಟ್ರಿಕ್ ಬೈಕ್‌ಗಳಿಗೆ ಸಾರಿಗೆ ಇಲಾಖೆ ಅನುಮತಿ ನೀಡಿದ ನಂತರ ಮೊದಲ ಹಂತದಲ್ಲಿ 100 ಇ-ಬೈಕ್ ಖರೀದಿಸಲು ಮುಂದಾಗಿರುವ ಬೌನ್ಸ್ ಕಂಪನಿ. ಅನಂತರ ಹಂತ ಹಂತವಾಗಿ1000 ಇ- ಬೈಕ್ ಗಳನ್ನ ರಸ್ತೆಗಿಳಿಸಲು ನಿರ್ಧಾರ. ಈ ಹಿಂದೆ ಕೂಡ ಬೈಕ್ ಸೇವೆ ನೀಡುತ್ತಿದ್ದ ಬೌನ್ಸ್ ಕಂಪನಿ ಕೊರೊನಾ ಸಮಯದಲ್ಲಿ ಸೇವೆ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಇ-ಬೈಕ್ ಸೇವೆ ನೀಡಲು ಅನುಮತಿ ಕೇಳಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ ಕಂಪನಿ.
ಆಟೋ ಚಾಲಕರಿಗೂ ಸೂರು ಒದಗಿಸುವ ಭರವಸೆ: ಸಚಿವ ಎಂಟಿಬಿ ನಾಗರಾಜ್
ಆಟೋ ಚಾಲಕರ ಪ್ರಮುಖ ಬೇಡಿಕೆಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ