ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಫ್ರಿಕನ್ ಮಹಿಳಾ ಖೈದಿಗಳಿಂದ ಚೈತ್ರಾ ಕುಂದಾಪುರ ಮೇಲೆ ಹಲ್ಲೆ!

By Ravi Janekal  |  First Published Nov 12, 2023, 4:33 PM IST

ರಾಷ್ಟ್ರಗೀತೆ ವಿಚಾರಕ್ಕೆ ನಡೆದ ಜಗಳದಲ್ಲಿ ಚೈತ್ರಾ ಕುಂದಾಪುರ ಮೇಲೆ ಆಫ್ರಿಕನ್ ಮಹಿಳಾ ಖೈದಿಗಳು ಹಲ್ಲೆ ಮಾಡಿರುವ ಘಟನೆ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ.


ಬೆಂಗಳೂರು (ನ.12) : ರಾಷ್ಟ್ರಗೀತೆ ವಿಚಾರಕ್ಕೆ ನಡೆದ ಜಗಳದಲ್ಲಿ ಚೈತ್ರಾ ಕುಂದಾಪುರ ಮೇಲೆ ಆಫ್ರಿಕನ್ ಮಹಿಳಾ ಖೈದಿಗಳು ಹಲ್ಲೆ ಮಾಡಿರುವ ಘಟನೆ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ.

 ಇಂದು ಮಧ್ಯಾಹ್ನ ನಡೆದಿರುವ ಘಟನೆ. ಮಹಿಳಾ‌‌ ವಿಚಾರಣಾಧೀನ ಖೈದಿಗಳ ಬ್ಯಾರಕ್‌ನಲ್ಲಿ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಖೈದಿಗಳು ಚೈತ್ರಾ ಕುಂದಾಪುರ ನಡುವೆ ನಡೆದ ಮಾತಿನ ಚಕಮಕಿ. ಈ ವೇಳೆ ಆಫ್ರಿಕನ್ ಮಹಿಳಾ ಖೈದಿಗಳು ಚೈತ್ರಾ ಮತ್ತು ಮೂವರು ಸ್ಥಳೀಯ ಖೈದಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ ಚೈತ್ರಾ ಕುಂದಾಪುರ.

Tap to resize

Latest Videos

undefined

ಬಿಜೆಪಿ ಟಿಕೆಟ್‌ ವಂಚನೆ ಕೇಸ್‌ ಟ್ವಿಸ್ಟ್‌: ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಹೆಸರೇಳಿದ ಆರೋಪಿ

ಹಲ್ಲೆ ಬಳಿಕ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಕರೆ ಮಾಡಿ ನೋವು ತೋಡಿಕೊಂಡಿರೋ ಚೈತ್ರಾ. ಕೈದಿಗಳಿಗೆ ವಾರಕ್ಕೊಮ್ಮೆ ಲ್ಯಾಂಡ್ ಲೈನ್ ನಿಂದ ಕುಟುಂಬಸ್ಥರ ಜೊತೆ ಮಾತನಾಡೋಕೆ ಅವಕಾಶ ಇರುತ್ತೆ. ಇಂದು ಲ್ಯಾಂಡ್ ಲೈನ್ ಮೂಲಕ ಕುಟುಂಬಸ್ಥರು, ಸ್ನೇಹಿತರಿಗೆ ಕರೆ ಮಾಡಿದ್ದ ಚೈತ್ರಾ. ಈ ವೇಳೆ ಜೈಲಿನಲ್ಲಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಮೇಲೆ ಈ ರೀತಿ ಹಲ್ಲೆಯಾಗಿದೆ ಎಂದು ನೋವು ತೋಡಿಕೊಂಡಿರೋ ಚೈತ್ರಾ.

ರಾಷ್ಟ್ರ ಗೀತೆ ವಿಚಾರಕ್ಕೆ ಜಗಳ ಆಗಿರೋದಾಗಿ ತಿಳಿಸಿರುವ ಚೈತ್ರಾ ಕುಂದಾಪುರ. ಆದ್ರೆ ಅಸಲಿಗೆ ಯಾವ ಕಾರಣಕ್ಕೆ ಆಗಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಸದ್ಯ ಪರಪ್ಪನ ಅಗ್ರಹಾರ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿರೋ ಚೈತ್ರಾ. ದೂರಿನ ಅನ್ವಯ ಪರಿಶೀಲನೆ ನಡೆಸ್ತಿರೋ ಪೊಲೀಸರು.

ಇನ್ಮುಂದೆ ನಾನು ನಿದ್ದೆ ಮಾಡಲ್ಲ; ರಾಜ್ಯಾದ್ಯಂತ ಓಡಾಡುವೆ: ಎಂಪಿ ರೇಣುಕಾಚಾರ್ಯ

ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಚೈತ್ರ ಕುಂದಾಪುರ. ವಂಚನೆ ಪ್ರಕರಣದಲ್ಲಿ ಜೈತ್ರಾ ಜೊತೆಗೆ ಸೇರಿದ್ದ ಇನ್ನುಳಿದ ಆರೋಪಿಗಳಾದ ಮೋಹನ್, ರಮೇಶ್, ಚೆನ್ನಾನಾಯ್ಕ್, ಧನರಾಜ್ ಎಂಬುವವರು ಸಹ ಇದೇ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. ಇಂದು ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಖೈದಿಗಳೊಂದಿಗೆ ಕಿರಿಕ್. ಡ್ರಗ್ಸ್ ಸಾಗಾಟ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆಫ್ರಿಕನ್ ಮಹಿಳಾ ಖೈದಿಗಳು. ಸದ್ಯ ಪ್ರಕರಣ ಸಂಬಂಧ ಜೈಲಾಧಿಕಾರಿಗೆ ದೂರು ನೀಡಿರುವ ಚೈತ್ರಾ ಕುಂದಾಪುರ. 

click me!