ಮಳೆ ಬೆಳೆ ಇಲ್ಲದೇ ಕೋಟೆನಾಡಿನ ರೈತರು ಕಂಗಾಲಾಗಿದ್ದಾರೆ. ಇಂತಹ ವೇಳೆ ಜಮೀನಿನಲ್ಲಿನ ಕೊಳವೆ ಬಾವಿಯ ಪಂಪ್ ಸೆಟ್ ಹಾಗು ಕೇಬಲ್ ಗಳನ್ನು ಕದ್ದು ಕಳ್ಳರು ಪರಾರಿಯಾಗ್ತಿದ್ದಾರೆ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಪಂಪ್‌ಸೆಟ್ ಕಳುವುದು ಪ್ರಕರಣದಿಂದ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಚಿತ್ರದುರ್ಗ (ನ.12): ಮಳೆ ಬೆಳೆ ಇಲ್ಲದೇ ಕೋಟೆನಾಡಿನ ರೈತರು ಕಂಗಾಲಾಗಿದ್ದಾರೆ. ಇಂತಹ ವೇಳೆ ಜಮೀನಿನಲ್ಲಿನ ಕೊಳವೆ ಬಾವಿಯ ಪಂಪ್ ಸೆಟ್ ಹಾಗು ಕೇಬಲ್ ಗಳನ್ನು ಕದ್ದು ಕಳ್ಳರು ಪರಾರಿಯಾಗ್ತಿದ್ದಾರೆ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಪಂಪ್‌ಸೆಟ್ ಕಳುವುದು ಪ್ರಕರಣದಿಂದ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪೈಪ್, ಕೇಬಲ್ ಕಳ್ಳತನದಿಂದ ಕಂಗಲಾಗಿ ಕುಳಿತ ಅನ್ನದಾತರು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅನ್ನೆಹಾಳ್ ನಡೆದಿರುವ ಕಳ್ಳತನ. ತಾಲ್ಲೂಕಿನಾದ್ಯಂತ ಮಳೆ ಇಲ್ಲದೇ ಈ ಬಾರಿ ರೈತರು ಜಮೀನುಗಳತ್ತ ತಿರುಗಿ ನೋಡ್ತಿಲ್ಲ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿರೊ ಖತರ್ನಾಕ್ ಕಳ್ಳರು, ಜಮೀನುಗಳಲ್ಲಿನ ಕೊಳವೆ ಬಾವಿಯ ಪಂಪ್‌ಸೆಟ್, ಸ್ಟ್ರಾಟರ್ಸ್ ಸೇರಿದಂತೆ ಕೇಬಲ್‌ವೈರನ್ನು ಸಹ ಕದ್ದು ಪರಾರಿಯಾಗ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ಅಲ್ದೇ ಕಳ್ಳರನ್ನು ಬಂಧಿಸಿ , ಕಳ್ಳತನಕ್ಕೆ ಬ್ರೇಕ್ ಹಾಕಬೇಕಿದ್ದ ಪೊಲೀಸರು ನಿರ್ಲಕ್ಷ್ಯತೋರಿರುವ ಪರಿಣಾಮ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ ಅಂತ ಆಕ್ರೋಶ ಹೊರಹಾಕಿದ್ದಾರೆ.
undefined
ಪುರಾತತ್ವ ಇಲಾಖೆ ಅನುಮತಿ ಪಡೆಯದೇ ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದ ಧಾರ್ಮಿಕ ದತ್ತಿ ಇಲಾಖೆ!
ಇನ್ನು ಈ ಬಗ್ಗೆ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ಕೇಳಿದ್ರೆ, ಜಿಲ್ಲೆಯ ವಿವಿದೆಡೆಯ ಜಮೀನುಗಳಲ್ಲಿ ಕಳ್ಳತನವಾಗಿವೆ. ಅದ್ರಲ್ಲೂ ಹೊಳಲ್ಕೆರೆ, ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿವೆ. ಅವರಲ್ಲಿ ಕೆಲವರು ಠಾಣೆಗೆ ದೂರು ನೀಡಿದ್ದು, ಕೆಲವರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ. ಆದರೂ ಸಹ ಕಳ್ಳತನಕ್ಕೆ ಬ್ರೇಕ್ ಹಾಕಲು ಸಂಬಂಧಪಟ್ಟ ಠಾಣಾಧಿಕಾರಿ ನೇತೃತ್ವದಲ್ಲಿ ಟೀಂ ರಚಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಕಳ್ಳರನ್ನು ಬಂಧಿಸ್ತೇವೆಂಬ ಭರವಸೆ ನೀಡಿದ್ದಾರೆ.
ವರ್ಷಪೂರ್ತಿ ಸುವರ್ಣ ಸಂಭ್ರಮದಲ್ಲಿ ಕರ್ನಾಟಕ: ಕನ್ನಡ ಜ್ಯೋತಿ ರಥಯಾತ್ರೆಗೆ ಹಂಪಿಯಲ್ಲಿಂದು ಸಿಎಂ ಚಾಲನೆ
ಒಟ್ಟಾರೆ ಚಿತ್ರದುರ್ಗದಲ್ಲಿ ಕೊಳವೆ ಬಾವಿಯ ಪಂಪ್‌ಸೆಟ್ ಹಾಗು ಕೇಬಲ್ ಕಳ್ಳರಹಾವಳಿ ಮಿತಿ ಮೀರಿದೆ. ಮೊದಲೇ ಬರದಿಂದ ಕಂಗಲಾಗಿದ್ದ ಅನ್ನದಾತರಲ್ಲಿ ಈ ಕಳ್ಳರ ಕರಾಮತ್ತು ಮತ್ತಷ್ಟು ಆತಂಕ ಸೃಷ್ಟಿಸಿದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿ,ರೈತರ ಜಮೀನುಗಳಲ್ಲಿ ಆಗ್ತಿರುವ ಕಳ್ಳತನಕ್ಕೆ ಬ್ರೇಕ್ ಹಾಕಲು ಮುಂದಾಗಬೇಕಿದೆ
ಕ್ಯಾಮರಾಮ್ಯಾನ್ ಶ್ರೀನಿವಾಸ್ ಜೊತೆ ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್