
ಕಲಬುರಗಿ (ಸೆ.15): ನಿನ್ನೆ ಇಂಡಿಯಾ ಪಾಕಿಸ್ತಾನ ಮ್ಯಾಚ್ ನಡೆಯಿತು. ನಾವು ದೊಡ್ಡ ದೇಶಭಕ್ತರು ಅಂತಾ ಹೇಳ್ಕೊಳ್ತಾರಲ್ಲ? ಈ ಬಿಜೆಪಿಯವರಿಗೆ ಸ್ವಲ್ಪನಾದರೂ ನಾಚಿಕೆ ಆಗಲಿಲ್ಲವಾ? ಈ ದೇಶದ ಜನರು ಬಾಯ್ಕಟ್ ಮಾಡಿದ್ರೂ ಪಂದ್ಯ ನಡೆಸಿದ್ರಲ್ಲ, ಅವರ ಜೊತೆ ಮ್ಯಾಚ್ ಆಡಿದ್ರಲ್ಲ ಯಾಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು
ವಿರೋಧದ ನಡುವೆಯೂ ಭಾರತ ಪಾಕಿಸ್ತಾನ ನಿನ್ನೆ ಕ್ರಿಕೆಟ್ ಪಂದ್ಯ ನಡೆದ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅವರ ಜೊತೆ ಮ್ಯಾಚ್ ಆಡ್ಲಿಲ್ಲ ಅಂದ್ರೆ ಪಾಯಿಂಟ್ಸ್ ಹೋಗ್ತಾವೆ ಅಂತ ಬಿಜೆಪಿ ನಾಯಕರು ಹೇಳ್ತಾರೆ. ಬಿಡ್ರಿ ಏಷ್ಯಾ ಕಪ್ ಆಡುವುದು. ಈ ಹಿಂದೆ ಶ್ರೀಲಂಕಾದಲ್ಲಿ ತಮಿಳುವರಿಗೆ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಅಂತ ಭಾರತ ಏಷ್ಯಾ ಕಪ್ ನಿಂದ ದೂರ ಉಳಿದಿತ್ತು ನೆನಪಿಲ್ಲವಾ ? ನಮ್ಮ ಸಿದ್ಧಾಂತ ನಮಗೆ ಮುಖ್ಯ ಅಂದ್ಬಿಟ್ಟು ಪಾಕಿಸ್ತಾನದೊಂದಿಗಿನ ಮ್ಯಾಚ್ ಬಿಡಬೇಕಾಗಿತ್ತು. ಯಾರೋ ಸ್ಪಾನ್ಸರ್ ಶಿಪ್ ಕೊಡ್ತಾರೆ ಅಂತ ಹೋಗೋದಾ ? ರಕ್ತ ನೀರು ಒಂದು ಕಡೆ ಹರಿಯುವುದಿಲ್ಲ ಅಂತ ಹೇಳಿದವರು ಈಗೇನು ಮಾಡಿದ್ದಾರೆ? ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ ಕರ್ನಾಟಕವನ್ನ ಬಿಹಾರ, ಯುಪಿ ಮಾಡಲು ಹೊರಟಿದ್ದಾರಾ? ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
BCCI ಸರ್ಕಾರಕ್ಕಿಂತ ದೊಡ್ಡದಾ ?
ಕಾಂಗ್ರೆಸ್ ನವರು ಸೈನಿಕರಿಗೆ ಅವಮಾನ ಮಾಡಿದ್ದಾರೆ ಅಂತ ಪ್ರಧಾನಿ ದೊಡ್ಡದಾಗಿ ಹೇಳಿದ್ರು. ಈಗ ನಿನ್ನೆ ನೀವು ಪಾಕಿಸ್ತಾನ ಜೊತೆ ಮ್ಯಾಚ್ ಆಡಿಸಿ ಸೈನಿಕರಿಗೆ ಪುರಸ್ಕಾರ ಮಾಡಿದ್ರ? ಹುತಾತ್ಮ ಸೈನಿಕನ ಪತ್ನಿಯೇ ಮ್ತಾಚ್ ಮ್ಯಾಚ್ ಆಡೋದು ಬೇಡ ಅಂತ ಹೇಳಿದ್ರು ಅದಾದ ನಂತರವೂ ಏನು ಅನ್ನಿಸಲಿಲ್ಲವಾ ನಿಮಗೆ? ಈ ಬಿಸಿಸಿಐ ಸರ್ಕಾರಕ್ಕಿಂತ ದೊಡ್ಡದಾ? ಬಿಸಿಸಿಐ ನಡೆಸ್ತಿರೋದೇ ಬಿಜೆಪಿ ಮುಖಂಡರು. ಮೋಟಾ ಭಾಯ್ ಮಾತ್ ಖೇಲೋ ಅಂತಾ ಪ್ರಧಾನಿ ಫೋನ್ ಮಾಡಿ ಹೇಳಬಾರದಿತ್ತು ಎನ್ನುವ ಮೂಲಕ ಅಮಿತ್ ಶಾರನ್ನ ಮೋಟಾ ಭಾಯ್ ಎಂದು ಜರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ