PSI Recruitment Scam: ದಿವ್ಯಾ ವಿರುದ್ಧ ಅರೆಸ್ಟ್ ವಾರೆಂಟ್: ಸರೆಂಡರ್ ಆಗದಿದ್ರೆ ಆಸ್ತಿ ಜಪ್ತಿ..!

By Girish Goudar  |  First Published Apr 27, 2022, 11:03 AM IST

*   ದಿವ್ಯಾ ಹಾಗರಗಿ & ಟೀಂ ವಿರುದ್ಧ ಅರೆಸ್ಟ್‌ ವಾರೆಂಟ್ ಜಾರಿ 
*  ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ತೀವ್ರಗೊಳಿಸಿದ ಸಿಐಡಿ
*  ಅರೆಸ್ಟ್ ವಾರೆಂಟ್ ಆದ್ರೆ ಏನಾಗುತ್ತೆ?


ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ

ಕಲಬುರಗಿ(ಏ.27):  ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ(PSI Recruitment Scam) ಆರೋಪ ಎದುರಿಸುತ್ತಿರುವ ದಿವ್ಯಾ ಹಾಗರಗಿ(Divya Hagaragi) & ಟೀಂಗೆ ಅರೆಸ್ಟ ವಾರೆಂಟ್ ಜಾರಿ ಮಾಡಲಾಗಿದೆ. ವಾರದೊಳಗೆ ಶರಣಾಗದಿದ್ರೆ ಆಸ್ತಿ ಜಪ್ತಿಯ ಎಚ್ಚರಿಕೆ ನೀಡಲಾಗಿದ್ದು, ಇದು ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿಗೆ ತೀವ್ರ ನಡುಕ ಸೃಷ್ಟಿಸುವಂತದ ಆದೇಶವಾಗಿದೆ. 

Tap to resize

Latest Videos

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ತೀವ್ರಗೊಳಿಸಿರುವ ಸಿಐಡಿ, ನಾಪತ್ತೆಯಾಗಿರುವವರ ಪತ್ತೆಗೆ ಬಿಗಿ ಕ್ರಮಕ್ಕೆ ಮುಂದಾಗಿದೆ. ಈ ಪ್ರಕರಣದ ಪ್ರಮುಖ ಆರೋಪ ಎದುರಿಸುತ್ತಿರುವ ಕಲಬುರಗಿಯ(Kalaburagi) ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಶಾಲೆಯ ಕೆಲಸ ನೌಕರರು ಕಳೆದ 16 ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ಸಿಐಡಿ(CID) ಎಲ್ಲಾ ಪ್ರಯತ್ನ ನಡೆಸಿದ್ರೂ ಪತ್ತೆಯಾಗಿಲ್ಲ. ಇವರ ಬಂಧನಕ್ಕಾಗಿಯೇ ಸಿಐಡಿ ಆರು ತಂಡ ರಚಿಸಿ ಹಗಲಿರುಳು ಶೋಧ ನಡೆಸುತ್ತಿದ್ರೂ ದಿವ್ಯಾ ಹಾಗರಗಿ ಆಂಡ್ ಟೀಂ ಸುಳಿವು ಸಿಕ್ಕಿಲ್ಲ.

ಡಿಕೆಶಿ ಜತೆಗೆ ದಿವ್ಯಾ ಹಾಗರಗಿ ಫೋಟೋ ವೈರಲ್: ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ

ಇದರಿಂದಾಗಿ ನಾಪತ್ತೆಯಾದವರ ವಿರುದ್ಧ ಬಿಗಿ ಕ್ರಮಕ್ಕೆ ಮುಂದಾಗಿರುವ ಸಿಐಡಿ, ನ್ಯಾಯಾಲಯದ(Court) ಮೂಲಕ ಅರೆಸ್ಟ್ ವಾರೆಂಟ್(Arrest Warrant) ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಇವರು ಸಂಘಟಿತ ಅಪರಾಧಿಗಳು, ಇವರಿಗೆ ಜಾಮೀನು(Bail) ನೀಡಬಾರದು. ಜೊತೆಗೆ ದಿವ್ಯಾ ಸೇರಿ 6 ಆರೋಪಿಗಳ ವಿರುದ್ಧ ಅರೆಸ್ಟ್ ವಾರೆಂಟ್ ಇಸ್ಯೂ ಮಾಡಬೇಕು ಎಂದು ಸಿಐಡಿ ಕಲಬುರಗಿ ಜಿಲ್ಲಾ ಮೂರನೇ ಸಸೆನ್ಸ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಸಿಐಡಿ ಮನವಿ ಪುರಸ್ಕರಿಸಿದ ನ್ಯಾಯಾಲಯ, ದಿವ್ಯಾ ಹಾಗರಗಿ ಮತ್ತು ಐವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. 

ಅರೆಸ್ಟ್ ವಾರೆಂಟ್ ಯಾರಾರ ಮೇಲೆ ?

ಜ್ಞಾನ ಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ, ಅದೇ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್, ಅದೇ ಶಾಲೆಯ ಸಹ ಶಿಕ್ಷಕಿಯರಾದ ಅರ್ಚನಾ, ಶಾಂತಾಬಾಯಿ, ಈ ಪ್ರಕರಣದ ಇನ್ನೊಬ್ಬ ಆರೋಪಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮಂಜುನಾಥ್ ಮೇಳಕುಂದಾ ಮತ್ತು ಆತನ ಸಹೋದರ ರವೀಂದ್ರ ಮೇಳಕುಂದಾ ಅವರುಗಳಿಗೆಲ್ಲಾ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. 

ಪಿಎಸ್‌ಐ ಪರೀಕ್ಷೆ ಅಕ್ರಮ- ಶೀಘ್ರ ಸರ್ಕಾರಕ್ಕೆ ಮಧ್ಯಂತರ ವರದಿ?

ದಾವುದ್ ಪ್ರಕರಣ ರೆಫರೆನ್ಸ್‌

ಕಲಬುರಗಿ ಜಿಲ್ಲಾ ಮೂರನೇ ಸಸೆನ್ಸ ಕೋರ್ಟ್‌ ಮುಂದೆ ಈ ಆರೋಪಿಗಳಿಗೆ(Accused) ಅರೆಸ್ಟ್ ವಾರೆಂಟ್ ಜಾರಿ ಮಾಡುವುದಕ್ಕಾಗಿ ಸಿಐಡಿ ಪರ ವಕೀಲರು ಮುಂಬೈ ಬ್ಲಾಸ್ಟ್ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಸಿಬಿಐ ಮತ್ತು ದಾವುದ್ ಇಬ್ರಾಹಿಂ ನಡುವಿನ ಆ ಕೇಸ್ ನಲ್ಲಿಯೂ ನ್ಯಾಯಾಲಯ ವಿಚಾರಣಾ ಹಂತದಲ್ಲಿಯೇ ದಾವುದ್ ಇಬ್ರಾಹಿಂಗೆ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು. ಇದೇ ರೀತಿ ಇವರು ಸಂಘಟಿತ ಅಪರಾಧಿಗಳಾಗಿದ್ದು, ಇವರಿಗೆ ಅರೆಸ್ಟ್ ವಾರೆಂಟ್ ಜಾರಿ ಅನೀವಾರ್ಯ ಎಂದು ವಾದಿಸಿದ್ದರು. ಈ ವಾದಕ್ಕೆ ಮನ್ನಣೆ ನೀಡಿರುವ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. 

ಅರೆಸ್ಟ್ ವಾರೆಂಟ್ ಆದ್ರೆ ಏನಾಗುತ್ತೆ ?

ಸಿಐಡಿ ವಾದಕ್ಕೆ ಮನ್ನಣೆ ನೀಡಿ ಕಲಬುರ್ಗಿ ನ್ಯಾಯಾಲಯ, ದಿವ್ಯ ಹಾಗರಗಿ ಅಂಡ್ ಟೀಮ್ ಗೆ  ಅರೆಸ್ಟ್ ವಾರೆಂಟ್ ಜಾರಿ ಮಾಡಿರುವುದು ಸಿಐಡಿ ಪಾಲಿಗೆ ದೊಡ್ಡ ಮುನ್ನಡೆಯಾಗಿದೆ. ಅರೆಸ್ಟ್ ವಾರೆಂಟ್ ಜಾರಿಗೊಳಿಸಿರುವ ನ್ಯಾಯಾಲಯ, ಒಂದು ವಾರದೊಳಗೆ ಹಾಜರಾಗುವಂತೆ ಪರಾರಿಯಾಗಿರುವ ಆರೋಪಿಗಳಿಗೆ ಸೂಚನೆ ನೀಡಿದೆ. ಆದಾಗ್ಯೂ ಹಾಜರಾಗದಿದ್ದರೆ ಅಥವಾ ಶರಣಾಗತರಾಗದಿದ್ದರೆ, ಮತ್ತೊಮ್ಮೆ ಕಾಲಾವಕಾಶ ಕೊಟ್ಟು ಅರೆಸ್ಟ್ ವಾರೆಂಟ್ ಮರುಜಾರಿ ಮಾಡಬಹುದು. ಇಲ್ಲವೇ ಘೋಷಿತ ಆರೋಪಿ ಎಂದು ಪರಿಗಣಿಸಬಹುದು.‌ ಈ ರೀತಿ ಘೋಷಿತ ಆರೋಪಿ ಎಂದು ಪರಿಗಣಿಸಿದರೆ, ಈ ಆರೋಪಿಗಳ ಸ್ಥಿರ ಹಾಗೂ ಚರಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲು ಅವಕಾಶ ಇರುತ್ತದೆ.  ಹಾಗಾಗಿ ಅರೋಪಿಗಳ ಬಂಧನಕ್ಕಾಗಿ ಅರೆಸ್ಟ್ ವಾರೆಂಟ್ ಸಿಐಡಿಗೆ ಮಹತ್ವದ ಮುನ್ನಡೆಯಾದಂತಾಗಿದೆ.‌  ಹಾಗಾಗಿ ದಿವ್ಯಾ ಹಾಗರಗಿ ಆಂಡ್ ಟೀಂ ಎಲ್ಲೇ ಇದ್ರೂ ವಾರದೊಳಗೆ ಸರೆಂಡರ್ ಆಗುವುದು ಅನಿವಾರ್ಯ ಎಂದು ವಿಶ್ಲೇಷಿಸಲಾಗುತ್ತಿದೆ. 

"

click me!