ಅರೆಕಾ ಟೀ ಮೂಲಕ ಜಗತ್ಪ್ರಸಿದ್ಧರಾಗಿರುವ ನಿವೇದನ್ ನೆಂಪೆ ಯಾರಿಗೆ ಗೊತ್ತಿಲ್ಲ ಹೇಳಿ. ಕೋಟ್ಯಧೀಶನಾಗಿದ್ದರೂ, ಸರಳವಾಗಿ ಬದುಕುವ ನಿವೇದನ್ ನೆಂಪೆ, ಇತ್ತೀಚೆಗೆ ತನ್ನ ಕಾರು ಚಾಲಕನಿಗೆ ತೋರಿದ ಸಹಾನುಭೂತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು (ಸೆ.30): ಅರೇಕಾ ಟಿ ಮೂಲಕ ಮನೆಮಾತಾಗಿರುವ ನಿವೇದನ್ ನೆಂಪೆ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದಲ್ಲಿ ಇವರನ್ನು ಮತ್ತಷ್ಟು ಮನೆಮಾತು ಮಾಡಿದ್ದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ. ಇದಾದ ಬಳಿಕ ನಿವೇದನ್ ನೆಂಪೆ ಬಗ್ಗೆ ಜನರಲ್ಲಿ ಸಾಕಷ್ಟು ಹೆಮ್ಮೆ ಮೂಡಿದೆ. ಆದರೆ, ಅದೆಷ್ಟೇ ಶ್ರೀಮಂತಿಕೆ ಇದ್ದರೂ ನಿವೇದನ್ ನೆಂಪೆ ಇಂದಿಗೂ ಸರಳವಾಗಿಯೇ ಬದುಕಿದ್ದಾರೆ. ಇತ್ತೀಚೆಗೆ ಅವರು ತಮ್ಮ ಕಾರು ಚಾಲಕನ ಕಷ್ಟಕ್ಕೆ ಮರುಗಿದ್ದು ಮಾತ್ರವಲ್ಲ, ಅವರಿಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಗುಣಮುಖರಾಗುವವರೆಗೂ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದನ್ನು ಕೆಲವೊಂದು ಇನ್ಸ್‌ಟಾಗ್ರಾಮ್ ಪೇಜ್‌ಗಳು ಹಂಚಿಕೊಂಡಿದ್ದು, ನಿವೇದನ್ ನೆಂಪೆ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕಾರಿನ ಚಾಲಕನಿಗೆ ಇತ್ತೀಚೆಗೆ ಅನಾರೋಗ್ಯ ಕಾಡಿತ್ತು. ಆದರೆ, ಇದನ್ನು ತಿಳಿದುಕೊಂಡ ನಿವೇದನ್ ನೆಂಪೆ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು ಮಾತ್ರವಲ್ಲದೆ, ಅವರು ಪ್ರಾಣಾಪಾಯದಿಂದ ಪಾರಾಗಿ ಮನೆಗೆ ಬರುವವರೆಗೂ ಆಸ್ಪತ್ರೆಯಲ್ಲಿಯೇ ಇದ್ದು ಅವರ ಆರೋಗ್ಯ ವಿಚಾರಿಸಿದ್ದಾರೆ. ಅವರು ಆಸ್ಪತ್ರೆಯ ಬಾಗಿಲ ಬಳಿ ನಿಂತಿರುವ ಚಿತ್ರಗಳನ್ನು ಹಲವರು ಶೇರ್ ಮಾಡಿಕೊಂಡಿದ್ದು, ನಿಮ್ಮಂಥೋರು ಬಹಳ ಅಪರೂಪ ಎಂದು ಹೇಳಿದ್ದಾರೆ.
'ಕಾರಿನ ಚಾಲಕರೊಂದಿಗೆ ಕಾರಿನ ಮಾಲಿಕ ಎಷ್ಟು ಕನೆಕ್ಟ್ ಆಗಿರುತ್ತಾರೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ನಿವೇದನ್ ನೆಂಪೆ ಅವರ ಕಾರಿನ ಚಾಲಕ ಒಂದೂವರೆ ವರ್ಷದಿಂದ ಇವರ ಬಳಿ ಕೆಲಸ ಮಾಡುತ್ತಿದ್ದರು. ಸಮಯ ಬಡವರಿಗೆ ಜಾಸ್ತಿ ನೋವು ಕೊಡುವಂತೆ ಕಾರಿನ ಚಾಲಕನ ಆರೋಗ್ಯದಲ್ಲೂ ಏರು ಪೇರು ಉಂಟುಮಾಡಿತು. ಈ ವಿಷಯ ತಿಳಿದ ಬಳಿಕ ಕಾರಿನ ಮಾಲಿಕ ಹಣ ಕೊಟ್ಟು ಸುಮ್ಮನಿರಬಹುದಿತ್ತು. ಆದರೆ ತನ್ನ ದಿನ ನಿತ್ಯ ಕಾರಿನಲ್ಲಿ ಹಾಗೂ ರಸ್ತೆಯಲ್ಲಿ ಪ್ರಯಾಣ ಮಾಡಿ ತನ್ನ ಜೀವನವನ್ನು ಸಾಗಿಸಿದ ಚಾಲಕನ ಬಗ್ಗೆ ಹೇಗೆ ಸುಮ್ಮನಿರಲು ಮಾನವೀಯತೆ ಇರೋ ಮನಸ್ಸು ಒಪ್ಪುತ್ತೆ ನಿವೇದನ್ ನೆಂಪೆ ಅವರು ತನ್ನ ಚಾಲಕನನ್ನು ಕುಟುಂಬದವರಂತೆ ಕಂಡು ಆಸ್ಪತ್ರೆಗೆ ಸೇರಿಸಿದ್ದು ಅಲ್ಲದೆ, ಆಸ್ಪತ್ರೆಯಲ್ಲಿ ಚಾಲಕ ಗುಣ ಮುಖವಾಗಿ ಪ್ರಾಣಪಾಯದಿಂದ ಪಾರಗುವವರೆಗೂ ಆಸ್ಪತ್ರೆಯಲ್ಲೆ ಇದ್ದು ಮನೆಗೆ ಕರೆದುಕೊಂಡು ಬಂದಿದ್ದಾರೆ , ಇಲ್ಲಿ ವಿಷಯ ಇಷ್ಟೆ ಹಣ ಇರೋರು ತುಂಬಾ ಜನ ಇದಾರೆ ಹಣದ ಜೊತೆ ಗುಣ ಇರೋರು ಕಡಿಮೆ. ಅದ್ರಲ್ಲಿ ಇವರು ಒಬ್ಬರು ಹಣ ಖರ್ಚು ಮಾಡಿದ್ದು ದೊಡ್ಡ ವಿಷಯವಲ್ಲ ಜೊತೆಗೆ ದೈರ್ಯ ತುಂಬಿ ಜೊತೆ ನಡೆದದ್ದೇ ಒಂದು ಮಾನವೀಯತೆಯ ವಿಷಯ. ನಿವೇದನ್ ನೆಂಪೆ ರಾಜ್ಯದಲ್ಲೇಡೆ ಆಗಲೇ ಪರಿಚಯ ಇರುವ ವ್ಯಕ್ತಿ' ಎಂದು ಚಿಕ್ಕಮಗಳೂರು ಮೂಲದ ಇನ್ಸ್‌ಟಾಗ್ರಾಮ್ ಪೇಜ್ ಬರೆದುಕೊಂಡಿದೆ.
ನಿವೇದನ್ ನೆಂಪೆಯಿಂದ ಅಡಕೆಯಿಂದ ಸ್ಯಾನಿಟೈಸರ್ ತಯಾರಿಕೆ
ನಿವೇದನ್ ನೆಂಪೆ ಅರೆಕಾ ಟೀಯ ಸೃಷ್ಟಿಕರ್ತ. ಅರೆಕಾ ಅಂದರೆ ಅಡಿಕೆ ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಬೆಳೆಯುವ ವಾಣಿಜ್ಯ ಬೆಳೆ. ನಿವೇದನ್ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಗ್ರಾಮದಲ್ಲಿ. ಅವರು ತಮ್ಮ ಶಾಲಾ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರೆ ಮತ್ತು ಶಿವಮೊಗ್ಗದ ನ್ಯಾಷನಲ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ತಮ್ಮ ಬಿ.ಫಾರ್ಮಾವನ್ನು ಪೂರ್ಣಗೊಳಿಸಿದರು. ಆಸ್ಟ್ರೇಲಿಯಾದ ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮಾಡಲು ಅವರಿಗೆ ಅವಕಾಶ ಸಿಕ್ಕಿತು. ಅವರು ವ್ಯಾಪಾರ ಅಭಿವೃದ್ಧಿ ಸಲಹೆಗಾರರಾಗಿ ಕೆಲಸ ಮಾಡಿದರು, ಅದು ಅವರನ್ನು ವಿವಿಧ ದೇಶಗಳಿಗೆ ಕರೆದೊಯ್ಯಿತು. ಆದರೆ, ಹುಟ್ಟಿದ ಸ್ಥಳದಲ್ಲಿ ಏನನ್ನಾದರೂ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಅವರು ಊರಿಗೆ ಮರಳಿದ್ದರು.
ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ...