: 'ಕನ್ನಡ ಹೋರಾಟಗಾರರು ಎನಿಸಿಕೊಂಡವರು ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ. ಅವರೆಲ್ಲ ಕರ್ನಾಟಕದ ಸಲುವಾಗಿ ಹೋರಾಡುತ್ತಾರೆ ಹೀರೋಗಳು ಎಂದು ಹೇಳ್ತೀರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡ ಹೋರಾಟಗಾರರ ವಿರುದ್ಧ ಕಿಡಿ ಕಾರಿದರು.
ವಿಜಯಪುರ (ಸೆ.30): 'ಕನ್ನಡ ಹೋರಾಟಗಾರರು ಎನಿಸಿಕೊಂಡವರು ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ. ಅವರೆಲ್ಲ ಕರ್ನಾಟಕದ ಸಲುವಾಗಿ ಹೋರಾಡುತ್ತಾರೆ ಹೀರೋಗಳು ಎಂದು ಹೇಳ್ತೀರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡ ಹೋರಾಟಗಾರರ ವಿರುದ್ಧ ಕಿಡಿ ಕಾರಿದರು.
ಇಂದು ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋರಾಟಗಾರರು ಯಾವಾಗಲೂ ಮಂತ್ರಿಗಳ ಮನೆಯಲ್ಲಿರ್ತಾರೆ.ರಾಜಕಾರಣಿಗಳ ಮನೆಯಲ್ಲಿ ಹೋರಾಟಗಾರರದ್ದೇನು ಕೆಲಸ? ಹೋರಾಟ ಬಿಟ್ಟು ಮನೆಯಲ್ಲಿದ್ದರೆ ಹೇಗೆ? ಎಂದು ಪ್ರಶ್ನಿಸುವ ಮೂಲಕ ಕಾವೇರಿ ಪ್ರತಿಭಟನೆ ವೇಳೆ ಡಿಕೆಶಿ ಶಿವಕುಮಾರ ನಿವಾಸಕ್ಕೆ ತೆರಳಿದ್ದ ಕರವೇ ನಾರಾಯಣಗೌಡರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸಿದ್ಧರಾಮಯ್ಯ ಈ ಬಾರಿ ಕುಗ್ಗಿಹೋಗೋಕೆ ಡಿಕೆಶಿ ಅವರೇ ಕಾರಣ, ಯತ್ನಾಳ್ ನೇರ ಮಾತು
ಕಾವೇರಿ ಹೋರಾಟದಲ್ಲಿ ಕೆಲವು ಸಂಘಟನೆಗಳು ಹತ್ತು ಜನರನ್ನು ಕರೆದುಕೊಂಡು ಝಂಡಾ ಹಿಡಿದು ಹೋರಾಟ ಮಾಡಿದರು ಅಂಥವರ ಮೇಲೆ ಕೇಸ್ ಆಗಿವೆ. ಆದರೆ ಮಂತ್ರಿಗಳ ಮನೆಯಲ್ಲಿದ್ದವರನ್ನು ಹೀರೋ ಅಂತೀರಿ ಎಂದು ವ್ಯಂಗ್ಯ ಮಾಡಿದರು.
ಗಣೇಶ ವಿಸರ್ಜನೆ,ಮಹಿಳಾಮಣಿಗಳ ದೇಶಿ ನೃತ್ಯಕ್ಕೆ ಮನಸೋತ ಶಾಸಕ ಯತ್ನಾಳ್
ಇವರಿಗೆ ನೈತಿಕತೆ ಇದೆಯಾ?
ಇವರು ಹೋರಾಟ ಬಿಟ್ಟು ಸಿಎಂ ಮನೆಯಲ್ಲಿ, ಡಿಸಿಎಂ ಮನೆಯಲ್ಲಿರ್ತಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಡಿಕೆಶಿಯವರನ್ನು ಮಾತಾಡಿಸಲು ಮನೆಗೆ ಹೋಗ್ತಾರೆ. ಅವರು ಜೈಲಿಗೆ ಹೋಗಿದ್ದು ಸ್ವಾತಂತ್ರ್ಯ ಹೋರಾಟ ಮಾಡಿದ್ದಕ್ಕೋ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಗೆದ್ದು ಬಂದಿದ್ದಕ್ಕೋ ಎಂಬಂತೆ ಹೊಗುತ್ತಾರೆ.ಇಂಥವರ ಮನೆಯಲ್ಲಿ ಹೋರಾಟಗಾರರು ಇರ್ತಾರೆ ಎಂದರೆ ಅವರಿಗೆ ನೈತಿಕತೆ ಎಲ್ಲಿದೆ ಎಂದು ಡಿಕೆಶಿ ಹಾಗೂ ಕನ್ನಡಪರ ಹೋರಾಟಗಾರರ ವಿರುದ್ಧ ಏಕಕಾಲಕ್ಕೆ ವಾಗ್ದಾಳಿ ನಡೆಸಿದರು.