
ಬೆಂಗಳೂರು (ಫೆ.25) : ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದುರಂತಕ್ಕೆ ತಾಯಿ-ಮಗು ಮೃತಪಟ್ಟ ಘಟನೆ ಮರೆಯುವ ಮುನ್ನವೇ ಮತ್ತೊಮ್ಮೆ ನಮ್ಮ ಮೆಟ್ರೋ ಎಡವಟ್ಟು ಮಾಡಿಕೊಂಡಿದೆ.
ಹೌದು ನಮ್ಮ ಮೆಟ್ರೋ(Namma Metro)ದಲ್ಲಿ ಮತ್ತೊಂದು ದುರಂತ ನಡೆದಿದ್ದು ಚಲಿಸುತ್ತಿರುವ ಕಾರಿನ ಮೇಲೆ ಕಬ್ಬಿಣದ ತುಂಡು ಬಿದ್ದು, ಕಾರಿನ ಗಾಜು ಜಖಂಗೊಂಡಿರುವ ಘಟನೆ ನಡೆದಿದೆ.
ದುರಂತ ನಡೆದ್ರೂ ಎಚ್ಚೆತ್ತುಕೊಳ್ಳದ ಮೆಟ್ರೋ ಅಧಿಕಾರಿಗಳು: ಪಿಲ್ಲರ್ ಗುಣಮಟ್ಟದಲ್ಲಿ ಅನುಮಾನ
ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ:
ಯಶವಂತಪುರ(Yeshwantpur)ದ ಸ್ಯಾಂಡಲ್ ಸೋಫ್ ಪ್ಯಾಕ್ಟರಿ(Sandal Sofa Factory) ಮೇಟ್ರೋ ಸ್ಟೇಷನ್ ಕೆಳ ಭಾಗದಲ್ಲ ಚಲಿಸುತ್ತಿದ್ದ ಕಾರಿನ ಮೇಲೆ ಇದಕ್ಕಿದ್ದಂತೆ ಕಬ್ಬಿಣದ ತುಂಡು(iron piece ) ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಮೆಟ್ರೋ ಮೇಲಿಂದ ಕಬ್ಬಿಣ ತುಂಡು ಬಿದ್ದ ರಭಸಕ್ಕೆ ಕಾರಿನ ಬ್ಯಾನೆಟ್ ಹಾಗೂ ಗಾಜು ಜಖಂ ಆಗಿದೆ. ಕಾರಿನ ಮೇಲೆ ಬೀಳುವ ಬದಲು ಬೈಕ್ ಸವಾರನ ಮೇಲೆ ಬಿದ್ದಿದ್ರೆ ಮತ್ತೊಂದು ದುರಂತವೇ ನಡೆದು ಹೋಗ್ತಿತ್ತು. ಇಷ್ಟೆಲ್ಲ ದುರಂತ ಸಂಭವಿಸುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.
Bengaluru: ಮೈಸೂರು ರಸ್ತೆಯ ಮೆಟ್ರೋ ಟ್ರ್ಯಾಕ್‌ನಲ್ಲಿ ಬಿರುಕು: ತಪ್ಪಿದ ಭಾರೀ ಅನಾಹುತ
ಪೊಲೀಸ್ ಠಾಣೆ ಮೆಟ್ಟಿಲೇರಿದ ಕಾರು ಮಾಲೀಕ:
ಕಬ್ಬಿಣದ ತುಂಡು ಕಾರಿನ ಮೇಲೆ ಬಿದ್ದಿದೆ. ಇಂಥ ದುರಂತಗಳಿಗೆ ಮೆಟ್ರೋ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಸುಬ್ರಮಣ್ಯ ನಗರ ಪೊಲೀಸ್ ಠಾಣೆ(Subramanyanagara police statiion)ಗೆ ದೂರು ನೀಡಿರುವ ಕಾರಿನ ಮಾಲೀಕ ರಿತೇಶ್(Ritesh car owner). ಈ ದುರಂತಕ್ಕೆ ಮೆಟ್ರೋ(BMRCL) ಅಧಿಕಾರಿಗಳೇ ಹೊಣೆ. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಕಾರಿನ ನಷ್ಟವನ್ನು ತುಂಬುವಂತೆ ದೂರಿನಲ್ಲಿ ಉಲ್ಲೇಖಿಸಿರುವ ಕಾರು ಮಾಲೀಕ ರಿತೇಶ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ