ಎಲ್ಲ ಜೀವಿಗಳು ಸುಖವನ್ನೇ ಬಯಸುತ್ತವೆ. ಆದರೆ ಅದನ್ನು ಪಡೆಯುವುದು ನಮ್ಮ ಕೈಮೀರಿದೆ. ರಾಮಾಯಣವು ಇರುವ ಸುಖವನ್ನಲ್ಲದೆ, ಇಲ್ಲದ, ಕೈಮೀರಿದ ಸುಖವನ್ನೂ ಕರುಣಿಸುವಂಥದ್ದು ಎಂದು ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಶ್ರೀ ಹೇಳಿದರು.
ಗೋಕರ್ಣ (ಫೆ.25): ಎಲ್ಲ ಜೀವಿಗಳು ಸುಖವನ್ನೇ ಬಯಸುತ್ತವೆ. ಆದರೆ ಅದನ್ನು ಪಡೆಯುವುದು ನಮ್ಮ ಕೈಮೀರಿದೆ. ರಾಮಾಯಣವು ಇರುವ ಸುಖವನ್ನಲ್ಲದೆ, ಇಲ್ಲದ, ಕೈಮೀರಿದ ಸುಖವನ್ನೂ ಕರುಣಿಸುವಂಥದ್ದು ಎಂದು ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಶ್ರೀ ಹೇಳಿದರು. ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಶ್ರೀಗಳೇ ಧರ್ಮಭಾರತಿ ಪತ್ರಿಕೆಯಲ್ಲಿ ಬರೆದಿರುವ ಭಾವ ರಾಮಾಯಣವನ್ನು ರಾಮಾರ್ಪಣಗೊಳಿಸಿ ಆಶೀರ್ವಚನ ನೀಡಿದರು. ರಾಮಾಯಣವನ್ನು ಓದುವಾಗಲೇ ಶಬ್ದಗಳಲ್ಲಿ ಹೇಳಲಾರದ ಸುಖದ ಅನುಭವವಾಗುತ್ತದೆ.
ರಾಮಾಯಣವು ತೋರಿದ ಹಾದಿಯಲ್ಲಿ ನಡೆದಾಗ ಜೀವನದಲ್ಲಿ ಅನನ್ಯ ಸುಖಗಳು ಒದಗಿ ಬರುತ್ತವೆ. ರಾಮಾಯಣದ ಅವಲೋಕನವು ಪುಣ್ಯ ತಂದುಕೊಡುತ್ತದೆ. ಹೀಗೆ ರಾಮಾಯಣದ ಅನುಸಂಧಾನದಿಂದ ಮೂರು ಬಗೆಯ ಸುಖಗಳ ಪ್ರಾಪ್ತಿಯಾಗುತ್ತದೆ ಎಂದರು. ರಾಮಾಯಣದ ಓದಿನಿಂದ ಜೀವಿಯು ಬಯಸುವ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳು ಲಭಿಸುತ್ತವೆ. ನಾಲ್ಕು ಪುರುಷಾರ್ಥಗಳನ್ನು ಹೊರತುಪಡಿಸಿ ಜೀವಿ ಏನನ್ನೂ ಬಯಸುವುದಿಲ್ಲ. ಏನನ್ನೇ ಬಯಸಿದರೂ ಅದು ಪುರುಷಾರ್ಥಗಳಲ್ಲೇ ಬರುತ್ತದೆ. ಹಾಗಾಗಿ ರಾಮಾಯಣದಿಂದ ಪುರುಷಾರ್ಥ ಸಿದ್ಧಿಸುತ್ತದೆ ಎಂದು ಬಣ್ಣಿಸಿದರು.
ಗೋವುಗಳ ರಕ್ತ ಹರಿಯುವುದರಿಂದ ದೇಶಕ್ಕೆ ಸೂತಕವಿದ್ದಂತೆ: ರಾಘವೇಶ್ವರ ಸ್ವಾಮೀಜಿ
ಧರ್ಮಭಾರತೀ ಸಂಪಾದಕ ಕೃಷ್ಣಾನಂದ ಶರ್ಮಾ ಪ್ರಸ್ತಾವಿಕವಾಗಿ ಮಾತನಾಡಿದರು. ಧರ್ಮಭಾರತೀ ಪತ್ರಿಕೆ ರಾಮಾರ್ಪಣಗೊಳಿಸಿದ ಶ್ರೀಗಳು ನಂತರ ಪತ್ರಿಕೆಯನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಮತ್ತು ಶಿಷ್ಯಭಕ್ತರಿಗೆ ಅನುಗ್ರಹಿಸಿ, ರಾಮಾಯಣ ಆಧರಿತ ಪಾಠ ಮಾಡಿದರು. ವಿಶ್ವವಿದ್ಯಾಪೀಠದ ಲೋಕ ಸಂಪರ್ಕಾಧಿಕಾರಿ ಅಶ್ವಿನಿ ಉಡುಚೆ ಭಾವರಾಮಾಯಣದ ಮಹತ್ವ ವಿವರಿಸಿದರು. ಮಹಾಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಭಾರತೀ ಪ್ರಕಾಶನದ ಅಧ್ಯಕ್ಷ ಸಚಿನ್, ಉಪಸಂಪಾದಕ ಗಣೇಶ ಕೃಷ್ಣ ಹೆಗಡೆ, ಪ್ರಸರಣ ಮಾರ್ಗದರ್ಶಕ ಮಹೇಶ ಚಟ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿವರ್ಷ ಸಿದ್ದಾಪುರ ಉತ್ಸವ ನಡೆಯಲಿ: ಊರಿನ ಕುರಿತು ಅಭಿಮಾನ ಬೇಕು, ಪ್ರತಿವರ್ಷ ಸಿದ್ದಾಪುರ ಉತ್ಸವ ನಡಿಬೇಕು, ಇಡೀ ವರ್ಷ ಸಮಾಜ ಕಟ್ಟುವ ಕಾರ್ಯವಾಗಬೇಕು, ಜಾತಿ, ಪಕ್ಷ ಸ್ಪರ್ಧೆ ಸಂಘರ್ಷ ಇರುತ್ತದೆ, ಊರನ್ನು ಕಟ್ಟುವಾಗ ಸಂಘರ್ಷ ಇರಬಾರದು. ಸಿದ್ದಾಪುರಕ್ಕೆ ಸಿದ್ದಾಪುರವೇ ಎದ್ದು ಬಂದಿರುವ ಜನಸ್ತೋಮವನ್ನು ನೋಡಿ ಇಂದು ತುಂಬಾ ಸಂತೋಷವಾಗುತ್ತಿದೆ ಎಂದು ಗೋಕರ್ಣದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. ಅವರು ಸ್ಥಳೀಯ ನೆಹರು ಮೈದಾನದಲ್ಲಿ ನಡೆದ ಸಿದ್ದಾಪುರ ಉತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಇಲ್ಲಿಯ ನೆಲ ರಾಷ್ಟ್ರ ನಾಯಕರನ್ನು ತನ್ನಲ್ಲಿಗೆ ಕರೆದುಕೊಂಡ ನೆಲ, ಮಹಾತ್ಮ ಗಾಂಧೀಜಿ, ನೆಹರೂ ಅವರನ್ನು ಕಂಡ ನೆಲ ಇದು.
ಇಂತಹ ನೆಲದಲ್ಲಿ ನಿಮ್ಮೆಲ್ಲರನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ. ಇಲ್ಲಿ ಯಾವುದೇ ಸಿನಿಮಾ ನಟರು ಬರುತ್ತಿಲ್ಲ, ಕ್ರೀಡಾಪಟುಗಳು ಬರುತ್ತಿಲ್ಲ, ಇಲ್ಲಿ ಬರುವವರಿಗೆ ದುಡ್ಡು ಸಹ ಹಂಚಲಾಗುತ್ತಿಲ್ಲ ಆದರೂ ಕೂಡ ನೀವೆಲ್ಲರೂ ನಮ್ಮೂರು ಎಂಬ ಅಭಿಮಾನದಿಂದ ಬಂದಿದ್ದೀರಿ. ನಮ್ಮ ತಂದೆ- ತಾಯಿ ಮೇಲೆ ನಮ್ಮ ಕುಲದ ಮೇಲೆ ದೇಶದ ಮೇಲೆ ಇರುವಂತೆ ನಮ್ಮ ಊರಿನ ಮೇಲೆ ಕೂಡ ಅಭಿಮಾನ ಇರಬೇಕು. ಶ್ರೀ ರಾಮಚಂದ್ರನಂತವರು ಕೂಡ ತಮ್ಮ ಗ್ರಾಮದ ಮೇಲೆ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸ್ವರ್ಗವೇ ಎಲ್ಲಕ್ಕಿಂತ ದೊಡ್ಡದು. ಆದರೆ, ಜನ್ಮಭೂಮಿ ಅದಕ್ಕಿಂತ ಮಿಗಲಾದದು ಎಂಬ ಮಾತು ಪ್ರಭು ಶ್ರೀ ರಾಮಚಂದ್ರನ ಬಾಯಿಯಿಂದ ಬಂದಿದೆ.
IAS vs IPS: ಡಿ.ರೂಪಾ, ರೋಹಿಣಿ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ
ಶ್ರೀರಾಮಚಂದ್ರ ಕಾಡಿಗೆ ಹೋಗುವಾಗ ಅಯೋಧ್ಯೆ ಕಡೆ ತಿರುಗಿ ಕೈ ಮುಗಿದು ಹೇಳುತ್ತಾನೆ ಹೇ ಅಯೋಧ್ಯೆ ನಾನು ಹೋಗಿ ಬರುತ್ತೇನೆ, ಆದಷ್ಟುಶೀಘ್ರದಲ್ಲಿ ವನವಾಸ ಮುಗಿಸಿ ಬಂದು ನಿನ್ನನ್ನು ಕಾಣುತ್ತೇನೆ ಎಂದು ಜೀವಂತ ಮನುಷ್ಯನ ಜೊತೆ ಮಾತನಾಡುವಂತೆ ಶ್ರೀ ರಾಮಚಂದ್ರ ತನ್ನ ಊರಿನೊಂದಿಗೆ ಸಂಭಾಷಣೆ ಮಾಡುತ್ತಾನೆ. ಅಯೋಧ್ಯೆಯಲ್ಲಿ ಯಾರು ಸಂಚಾರ ಮಾಡುತ್ತಾರೆ ಯಾರು ವಾಸವಾಗಿದ್ದಾರೋ ಅವರು ಧನ್ಯರು ಎಂಬ ಮಾತು ಶ್ರೀರಾಮನ ಬಾಯಿಂದ ಬಂದಿದೆ. ನಮಗೆ ನಮ್ಮ ಸಿದ್ದಾಪುರವೇ ಅಯೋಧ್ಯ ಹಾಗಾಗಿ ರಾಮ ಅಯೋಧ್ಯ ಕುರಿತು ತೋರಿಸಿದ ಅಭಿಮಾನವನ್ನು ನಾವು ನಮ್ಮ ಸಿದ್ದಾಪುರದ ಕುರಿತು ತೋರಿಸೋಣ.