ಅನ್ನಭಾಗ್ಯ ಅಕ್ಕಿ ಕುಟ್ಟಿ ಪುಡಿ ಮಾಡಿ ರಂಗೋಲಿಗೆ ಬಳಕೆ!

By Kannadaprabha News  |  First Published Jul 13, 2023, 11:57 AM IST

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೀಡಲಾಗುವ ಅಕ್ಕಿಯನ್ನು ರಂಗೋಲಿ ಪುಡಿಯಾಗಿ ಮಾರಾಟ ಮಾಡುತ್ತಿರುವ ವಿಷಯವನ್ನು ಜೆಡಿಎಸ್‌ನ ಗೋವಿಂದರಾಜು ಸದನದ ಗಮನಕ್ಕೆ ತಂದರು.


ವಿಧಾನ ಪರಿಷತ್ತು (ಜು.13) ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೀಡಲಾಗುವ ಅಕ್ಕಿಯನ್ನು ರಂಗೋಲಿ ಪುಡಿಯಾಗಿ ಮಾರಾಟ ಮಾಡುತ್ತಿರುವ ವಿಷಯವನ್ನು ಜೆಡಿಎಸ್‌ನ ಗೋವಿಂದರಾಜು ಸದನದ ಗಮನಕ್ಕೆ ತಂದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ‘ಅನ್ನಭಾಗ್ಯ ಯೋಜನೆಯು ಬಡವರಿಗಾಗಿ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ,ಹಿಂದಿನ ಕಾಂಗ್ರೆಸ್‌ ಸರ್ಕಾರ ಅನ್ನಭಾಗ್ಯ ಅಡಿ ನೀಡಲಾಗುತ್ತಿದ್ದ ಅಕ್ಕಿ ಗುಣಮಟ್ಟದ್ದಾಗಿರಲಿಲ್ಲ. ಹೀಗಾಗಿ ಕೋಲಾರ ಕಡೆಯಲ್ಲಿ ಕೆಲವರು ಅಕ್ಕಿಯನ್ನು ಸಣ್ಣದಾಗಿ ಪುಡಿ ಮಾಡಿ ರಂಗೋಲಿ ಪುಡಿ ಎಂಬ ರೀತಿಯಲ್ಲಿ ಮಾರಾಟ ಮಾಡುತ್ತಿದ್ದರು. ಅಕ್ಕಿಪುಡಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪ್ರಶ್ನಿಸಿದಾಗ, ‘ಅಕ್ಕಿ ಗುಣಮಟ್ಟಸರಿಯಿಲ್ಲ. ಅದನ್ನು ಸೇವಿಸಲಾಗದು. ಹೀಗಾಗಿ ರಂಗೋಲಿ ಪುಡಿಯಂತೆ ಮಾರುತ್ತಿದ್ದೇನೆ’ ಎಂದುತ್ತರಿಸಿದಳು. ಸರ್ಕಾರ ಈ ಅವಧಿಯಲ್ಲಾದರೂ ಉತ್ತಮ ಗುಣಮಟ್ಟದ ಅಕ್ಕಿಯನ್ನು ನೀಡಬೇಕು’ ಎಂದು ಒತ್ತಾಯಿಸಿದರು.

Latest Videos

undefined

ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ: ನೀವು ಹಣ ಪಡೆಯಲು ಅರ್ಹರೇ..

ಬಿಜೆಪಿಯಿಂದ ನೀಚ ರಾಜಕೀಯ

ಮಾಲೂರು:  ಕಾಂಗ್ರೆಸ್‌ ನ ಸರ್ವೊಚ್ಚ ನಾಯಕ ರಾಹುಲ್‌ ಗಾಂಧಿ ವಿರುದ್ಧ ಷಡ್ಯಂತ್ರ ನೆಡೆಸಿ ಲೋಕಸಭೆ ಸದಸ್ಯತ್ವದಿಂದ ಅರ್ನಹತೆಗೊಳಿಸಿದ ಬಿಜೆಪಿಯ ರ್ದುನಡತೆ ತೋರಿದೆ ಎಂದು ಆರೋಪಿಸಿ ಸ್ಥಳೀಯ ಕಾಂಗ್ರೆಸ್‌ ಮುಖಂಡರುಗಳು ಇಲ್ಲಿನ ಪುರಸಭೆ ಉದ್ಯಾನವನದಲ್ಲಿ ಮೌನ ಪ್ರತಿಭಟನೆ ನಡೆಸಿದರು

ಉದ್ಯಾನವನದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದ ಬ್ಲಾಕ್‌ ಕಾಂಗ್ರಸ್‌ ಅಧ್ಯಕ್ಷ ವಿಜಯಾನರಸಿಂಹ ಮಾತನಾಡಿ, ಕಳೆದ ಒಂದು ದಶಕಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಸರ್ಕಾರವು ವಿರೋಧ ಪಕ್ಷದವರನ್ನು ದಮನ ಮಾಡುವ ನೀಚ ರಾಜಕೀಯ ಮಾಡುತ್ತಿದೆ ಎಂದರು.

ದೇಶದ ಬಡವರ-ಶೋಷಿತರ ದನಿಯಾಗಬೇಕಾಗಿದ್ದ ಮೋದಿ ಅವರು ಕೇವಲ ದ್ವೇಷ ಸಾಧನೆಗಾಗಿ ಅಧಿಕಾರ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು, ಬೆಲೆ ಏರಿಕೆ, ಕೋಮದ್ವೇಷ ಸಾಧನೆ, ಸಾರ್ವಜನಿಕ ಉದ್ಯಮಗಳ ಮಾರಾಟ, ಬಂಡವಾಳಶಾಹಿ ಪರ ಧೋರಣೆಯ ವಿರುದ್ಧ ದೇಶದ ಯೂತ್‌ ಐಕಾನ್‌ ರಾಹುಲ್‌ ಗಾಂಧಿ ಭಾರತ ಜೋಡೋ ಯಾತ್ರೆ ಮೂಲಕ ದ್ವನಿ ಎತ್ತಿರುವುದನ್ನು ಸಹಿಸದ ಬಿಜೆಪಿ ಆಡಳಿತ ರಾಜಕೀಯ ಲಾಭಕ್ಕಾಗಿ ಸಂವಿಧಾನತ್ಮಕ ಹಾಗೂ ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವಿರುದ್ಧದ ಧೋರಣೆಯಾಗಿದೆ ಎಂದರು.\

ಬಿಪಿಎಲ್‌ ಕುಟುಂಬಕ್ಕೆ ಇಬ್ಬರು ಮುಖ್ಯಸ್ಥರಿದ್ದರೆ ಈ ತಿಂಗಳು ಅಕ್ಕಿ ಹಣ ಇಲ್ಲ: ಯಾಕೆ ಗೊತ್ತಾ?

ಮಾಜಿ ಶಾಸಕ ಎ.ನಾಗರಾಜು, ಕೆ.ಪಿ.ಸಿ.ಸಿ ಸದಸ್ಯ ಅಂಜನಿ ಸೋಮಣ್ಣ ಮಾತನಾಡಿದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಆನೇಪುರ ಹನುಮಂತಪ್ಪ, ಪ್ರದೀಪ್‌ ರೆಡ್ಡಿ, ಡಿ.ಸಿ.ಸಿ.ಬ್ಯಾಂಕ್‌ ನಿರ್ದೇಶಕ ಕೆ.ಎಚ್‌.ಚೆನ್ನರಾಯಪ್ಪ, ಪುರಸಭೆ ಸದಸ್ಯರಾದ ಆರ್‌.ವೆಂಕಟೇಶ್‌, ಎನ್‌.ವಿ.ಮುರಳಿಧರ್‌, ವಿಜಯಲಕ್ಷ್ಮಿ, ಭಾರತಮ್ಮ, ಮುಖಂಡರಾದ ಎ.ಹನುಮಂತರೆಡ್ಡಿ, ಎ.ಅಶ್ವಥ ರೆಡ್ಡಿ, ಬಾಳಿಗಾನಹಳ್ಳಿ ಶ್ರೀನಿವಾಸ್‌,ನಲ್ಲಾಂಡಹಳ್ಳಿ ನಾಗರಾಜ್‌, ಎ.ಆಂಜಿನಪ್ಪ, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಬೆಂಡಶೆಟ್ಟಿಹಳ್ಳಿ ರಮೇಶ್‌, ಎಟ್ಟಕೋಟಿ ವೆಂಕಟೇಶ್‌, ಹೇಮಾಮಾಲಿನಿ, ನಹೀಮ್‌ ಉಲ್ಲಾ, ವಿಜಯಲಕ್ಷ್ಮಿ ಸಿಂಗ್‌, ಮಹಾಲಕ್ಷ್ಮಿ, ಎಸ್‌.ಎಂ.ಶಂಕರ್‌, ಕೃಷ್ಣಪ್ಪ, ಎಂ.ಸಿ.ರವಿ, ಮಾಸ್ತಿ ಚೇತನ್‌, ತನ್ವೀರ್‌, ಆಶೋಕ್‌, ಪ್ರವೀಣ್‌ ಇನ್ನಿತರರು ಇದ್ದರು.

click me!