ಚಿತ್ರದುರ್ಗ:  ಕಲುಷಿತ ನೀರು ಸೇವನೆ; 30ಕ್ಕೂ ಹೆಚ್ಚು ಜನರು ಅಸ್ವಸ್ಥ. ಇಬ್ಬರ ಸ್ಥಿತಿ ಗಂಭೀರ!

By Ravi Janekal  |  First Published Jul 13, 2023, 9:14 AM IST

ಕಲುಷಿತ ನೀರು ಕುಡಿದು 30 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆಕಕ ಚಿತ್ರದುರ್ಗ ಜಿಲ್ಲೆ  ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರದಲ್ಲಿ ನಡೆದಿದೆ.


ಚಿತ್ರದುರ್ಗ (ಜು.13) : ಕಲುಷಿತ ನೀರು ಕುಡಿದು 30 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆಕಕ ಚಿತ್ರದುರ್ಗ ಜಿಲ್ಲೆ  ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರದಲ್ಲಿ ನಡೆದಿದೆ.

ಚಾಮುಂಡಮ್ಮ, ಓಬಕ್ಕ ಇಬ್ಬರು ತೀವ್ರ ಅಸ್ವಸ್ಥರಾಗಿರುವ ಮಹಿಳೆಯರು. ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು. JJM ಪೈಪ್ ಲೈನ್ಕ ಮಾಡುವ ವೇಳೆ ಕುಡಿಯುವ ನೀರಿನ ಪೈಪ್ ಗೆ ಹಾನಿ. ಹಾನಿಯಾಗಿದ್ದ ಪೈಪ್ ಮೂಲಕ ಚರಂಡಿ ನೀರು ಪೈಪ್‌ ಗೆ ಸೇರಿರುವ ಸಾಧ್ಯತೆ. ಕಲುಷಿತ ನೀರು ಕುಡಿದು ತೀವ್ರ ಅಸ್ವಸ್ಥಗೊಂಡಿರುವ ಗ್ರಾಮಸ್ಥರು.

Latest Videos

undefined

ಪೈಪ್ ಹೊಡೆದಿದ್ದರೂ ನಿರ್ಲಕ್ಷ ತೋರಿರುವ ಗ್ರಾ.ಪಂ ಅಧಿಕಾರಿಗಳು. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದಿರುವ ದುರಂತವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲುಷಿತ ನೀರು ಸೇವನೆಯಿಂದ ಜನರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡ ಮಹಿಳೆಯರಿಗೆ ಸ್ಥಳೀಯ ರಾಂಪುರ, ಮೊಳಕಾಲ್ಮೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲವು ಮಹಿಳೆಯರ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ವಿಜಯನಗರ: ಕಲುಷಿತ ನೀರು ಸೇವಿಸಿ 34 ಜನರಿಗೆ ವಾಂತಿ-ಭೇದಿ; ಆಸ್ಪತ್ರೆಗೆ ದಾಖಲು

ಘಟನೆ ಮಾಹಿತಿ ತಿಳಿಯುತ್ತಿದ್ದ ಸ್ಥಳಕ್ಕೆTHO ಡಾ.ಮಧುಕುಮಾರ್ ಭೇಟಿ ಪರಿಶೀಲನೆ. ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು. ಸದ್ಯ ಜನರ ಆರೋಗ್ಯ ತಪಾಸಣೆಗೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದಿರುವ ವೈದ್ಯರು. ಪೈಪ್ ಲೈನ್ ವ್ಯಾಪ್ತಿಯಲ್ಲಿ ನೀರು ಕುಡಿದಿರಬಹುದಾದ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. 

ಘಟನೆ ಬಳಿಕ ಎಚ್ಚೆತ್ತ ಅಧಿಕಾರಿಗಳು ದುರಸ್ತಿಗೊಂಡ ಪೈಪ್‌ಲೈನ್ ನೀರು ಸ್ಥಗಿತಗೊಳಿಸಿ ಗ್ರಾಮಸ್ಥರಿಗೆ ಬೇರೆ ಮೂಲಗಳಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. 

ಕಲುಷಿತ ಕುಡಿಯುವ ನೀರಿಗೆ ಇನ್ನೆಷ್ಟು ಬಲಿಯಾಗಬೇಕು? 5 ಬಲಿಯಾದ್ರೂ ಎಚ್ಚೆತ್ತುಕೊಳ್ಳದ ಕೊಪ್ಪಳ ಜಿಲ್ಲಾಡಳಿತ!

click me!