ಸಿ.ಟಿ. ರವಿ, ಚಕ್ರವರ್ತಿ ಸೂಲಿಬೆಲೆ ಬಂಧಿಸುವಂತೆ ದಲಿತ ಸಂಘ ಒತ್ತಾಯ

By Kannadaprabha News  |  First Published Jul 13, 2023, 11:27 AM IST

ಮಾಜಿ ಸಚಿವ ಸಿ.ಟಿ. ರವಿ ಮತ್ತು ಯುವಾ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸರ್ಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಬೇಕು ಎಂದು ದಸಂಸ ನಾಗವಾರ ಬಣದ ವತಿಯಿಂದ ಜಿಲ್ಲಾ ಸಂಚಾಲಕ ಎಸ್‌.ಆರ್‌. ಶಶಿಕಾಂತ ಸರ್ಕಾರವನ್ನು ಒತ್ತಾಯಿಸಿದರು.


ಟಿ. ನರಸೀಪುರ (ಜು.13) : ಮಾಜಿ ಸಚಿವ ಸಿ.ಟಿ. ರವಿ ಮತ್ತು ಯುವಾ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸರ್ಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಬೇಕು ಎಂದು ದಸಂಸ ನಾಗವಾರ ಬಣದ ವತಿಯಿಂದ ಜಿಲ್ಲಾ ಸಂಚಾಲಕ ಎಸ್‌.ಆರ್‌. ಶಶಿಕಾಂತ ಸರ್ಕಾರವನ್ನು ಒತ್ತಾಯಿಸಿದರು.

ಮೂರು ದಿನಗಳ ಹಿಂದೆ ವೇಣುಗೋಪಾಲ… ಎಂಬ ಯುವಕನ ಕೊಲೆಯಾಗಿದೆ, ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ, ವೈಯಕ್ತಿಕ ದ್ವೇಷದಿಂದ ಮತ್ತು ಸ್ವ ಪ್ರತಿಷ್ಠೆಯಿಂದ ಘಟನೆ ನಡೆದಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Tap to resize

Latest Videos

ಚಕ್ರವರ್ತಿ ಸೂಲಿಬೆಲೆ ನೆಚ್ಚಿನ ಶಿಷ್ಯನ ಹತ್ಯೆ: ಸ್ನೇಹಿತರಿಂದಲೇ ಕೊಲೆಯಾದ್ನ ದಲಿತ ಯುವಕ ?

ಈ ವಿಚಾರವಾಗಿ ತಾಲೂಕಿಗೆ ಭೇಟಿ ನೀಡಿದ ಚಕ್ರವರ್ತಿ ಸೂಲಿಬೆಲೆ, ಸಿ.ಟಿ. ರವಿ, ಅಶ್ವತ್‌್ಥ ನಾರಾಯಣ…, ಎನ್‌. ಮಹೇಶ… ಅವರು ಈ ಕೊಲೆಯನ್ನು ಹಿಂದು ಕಾರ್ಯಕರ್ತನ ಕೊಲೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರಲ್ಲಿ ವಿಷ ಬೀಜ ಬಿತ್ತಿ ಮುಂಬರುವ ಚುನಾವಣೆಯಲ್ಲಿ ಧರ್ಮಾಧರಿತ ಬೆಂಬಲ ಪಡೆಯಲು ಮಾಡುತ್ತಿರುವ ವ್ಯವಸ್ಥಿತ ಪಿತೂರಿ ಎಂದು ಅವರು ಆರೋಪಿಸಿದರು.

ಹನುಮ ಜಯಂತಿಗೆ ಅನುಮತಿ ನೀಡಿದ್ದರಿಂದ ಈ ರೀತಿ ಸಮಸ್ಯೆ ಸೃಷ್ಟಿಯಾಗಿದೆ ನಮ್ಮ ತಾಲೂಕಿಗೆ ಹನುಮ ಜಯಂತಿಯ ಅವಶ್ಯಕತೆ ಇಲ್ಲ, ನೂರಾರು ವರ್ಷಗಳಿಂದ ಧಾರ್ಮಿಕ ಜಾತ್ರೆಗಳು ನಡೆಯುತ್ತಿರುವುದರಿಂದ ಹೊಸದಾಗಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ, ಮುಂದಿನ ದಿನಗಳಲ್ಲಿ ಸರ್ಕಾರ ಹನುಮ ಜಯಂತಿಗೆ ಅನುಮತಿ ನೀಡಬಾರದು, ಬಿಜೆಪಿಯ ಯಾವುದೇ ನಾಯಕರಿಗೆ ತಾಲೂಕು ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ವೇಣುಗೋಪಾಲ್‌ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಕಾರ ನೀಡಬೇಕು ಎಂದು ಅವರು ಅಗ್ರಹಿಸಿದರು. ಶಿವಣ್ಣ, ಎಸ್‌. ನಂಜುಂಡಯ್ಯ, ಮಹದೇವಸ್ವಾಮಿ, ಮಂಜು, ನಾಗರಾಜು ಇದ್ದರು.

ದಲಿತ ಹುಡುಗನ ಬೆಳವಣಿಗೆ ಸಹಿಸದೇ ಕೊಲೆ: ಚಕ್ರವರ್ತಿ ಸೂಲಿಬೆಲೆ

 

click me!