ASHA ಕಾರ್ಯಕರ್ತೆಯರ ಮೊಬೈಲ್ ಸೈಲೆಂಟ್; 4 ತಿಂಗಳಿಂದ ಆಗಿಲ್ಲ ರೀಚಾರ್ಜ್!

Published : Jul 25, 2022, 10:56 AM ISTUpdated : Jul 25, 2022, 11:11 AM IST
ASHA ಕಾರ್ಯಕರ್ತೆಯರ ಮೊಬೈಲ್ ಸೈಲೆಂಟ್; 4 ತಿಂಗಳಿಂದ ಆಗಿಲ್ಲ ರೀಚಾರ್ಜ್!

ಸಾರಾಂಶ

ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ನಿಶ್ಶಬ್ದ ತಳಮಟ್ಟದ ಮಾಹಿತಿ ಸಿಗದೇ ಪರದಾಡುತ್ತಿದೆ ಸರ್ಕಾರ ಕಳೆದ ನಾಲ್ಕು ತಿಂಗಳಿನಿಂದ ರೀಚಾರ್ಜ್ ಮಾಡಿಸದ ಸರ್ಕಾರ

ವರದಿ- ನಂದೀಶ್ ‌ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು ( ಜುಲೈ 25) :-ಅಂಗನವಾಡಿ ಕಾರ್ಯಕರ್ತೆಯರ ಕಳೆದ 6 ತಿಂಗಳಿನಿಂದ ‌ಮೊಬೈಲ್ ನಿಶ್ಯಬ್ದಗೊಂಡಿದೆ. ಮತ್ತೊಂದು ಕಡೆ ತಳಮಟ್ಟದ ಮಾಹಿತಿ ಸಿಗದೇ ಪರದಾಡುತ್ತಿದೆ ಸರ್ಕಾರ. ಹೌದು, ರಾಜ್ಯದ 60 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಬಂದ್ ಆಗಿದ್ದು,  ಕರೆನ್ಸಿ ಇಲ್ಲದೆ ಬಳಕೆಯಾಗುತ್ತಿಲ್ಲ ಸರ್ಕಾರಿ ಮೊಬೈಲ್ ಗಳು. ಅದರಲ್ಲೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಕೊಡುವ ಗೌರವ ವೇತನದಲ್ಲಿ  (11,500 ರೂ. ) ಇದೀಗ ಮತ್ತೊಂದು ಹೊರೆ ಬೀಳುವಂತಾಗಿದೆ.ಪ್ರತಿಯೊಂದು ಸರ್ಕಾರಿ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಬೇಕು.ಆದ್ರೆ ಇದಕ್ಕಾಗಿ ಕಳೆದ ವರುಷ ಕೇಂದ್ರ ಸರ್ಕಾರ ಸ್ಮಾರ್ಟ್ ಫೋನ್ ನೀಡಿತ್ತು.ಮಕ್ಕಳ ಪೋಷಣ ಅಭಿಯಾನ ಜಾರಿಗಾಗಿ ಸ್ಮಾರ್ಟ್ ಫೋನ್ ನ್ನ ಅಂಗನವಾಡಿ ಕಾರ್ಯಕರ್ತರೆಯರಿಗೆ ನೀಡಲಾಗಿತ್ತು.ಮೊಬೈಲ್ ‌ಪೋನ್ ಜೊತೆಗೆ ಪ್ರತಿ ದಿನ ಎರಡು ಜಿಬಿ, ಅನ್ ಲಿಮಿಟೆಡ್ ಕಾಲ್ ಸೌಲಭ್ಯ ಹಾಗೂ ರೀಚಾರ್ಜ್ ಗೂ ಕೇಂದ್ರ ಸರಕಾರದ ಅನುದಾನ ಬಳಕೆಯಾಗುತ್ತಿತ್ತು.ಆದರೀಗ ಕಳೆದ 6 ತಿಂಗಳಿನಿಂದ ಅನುದಾನ ಸ್ಥಗಿತಗೊಂಡಿದೆ.

ಸ್ಮಾರ್ಟ್ ಫೋನ್‌(Smart Phone) ಬಳಕೆ ಹೇಗೆ ಉಪಯೋಗಕಾರಿ?
ಸ್ಮಾರ್ಟ್ ಪೋನ್‌ನಲ್ಲಿ ಪೋಷಣ, ಸ್ನೇಹ ಆಪ್ ಬಳಕೆ, ಆಪ್ ಮೂಲಕ ಪ್ರತಿಯೊಂದು ಮಾಹಿತಿ ಅಪ್ ಲೋಡ್(Upload) ಮಾಡಲಾಗುತ್ತೆ.ಮಕ್ಕಳ, ಗರ್ಭಿಣಿಯರ ಆರೋಗ್ಯದ ಸ್ಥಿತಿ ಹಾಗೂ ಅಪೌಷ್ಟಿಕ ಮಕ್ಕಳ ಸ್ಥಿತಿ ಹಾಗೂ ದಾಖಲಾತಿಯ ಅಂಕಿ ಅಂಶ ಸೇರಿದಂತೆ ಹಲವು ಅಂಶಗಳನ್ನ ಆನ್ ಲೈನ್(Online) ನಲ್ಲಿ ಅಪ್ ಡೇಟ್(Update) ಮಾಡಲಾಗುತ್ತೆ.ಮಗುವಿನ ಪ್ರತಿಯೊಂದು ಚಟುವಟಿಕೆಯ ಪೋಟೋ, ವೀಡಿಯೋ ವಾಟ್ಸಪ್ ಗ್ರೂಪ್ ನಲ್ಲಿ ಅಪ್ ಲೋಡ್ ಆಗ್ತಿತ್ತು.

ಸರ್ಕಾರ ನೀಡಿದ ಮೊಬೈಲ್‌ಗೂ ಅಪೌಷ್ಟಿಕತೆ: ರಿಚಾರ್ಜ್ ಮಾಡಲು ದುಡ್ಡೇ ಇಲ್ವಾ?

ಕಳೆದ ಏಪ್ರಿಲ್ ತಿಂಗಳಿನಿಂದ ರೀಚಾರ್ಜ್ ಮಾಡಿಸದ ಸರ್ಕಾರ:
ಆದ್ರೆ ಇದೀಗ ಇದ್ದೂ ಇಲ್ಲದಂತಿರುವ ಸರಕಾರಿ ಸ್ಮಾರ್ಟ್ ಪೋನ್ ಆದರೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅಪ್ ಡೇಟ್ ಮಾಡುವಂತೆ ಅಧಿಕಾರಿಗಳ ಒತ್ತಡ ಹಾಕುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ  ರಾಜ್ಯಾಧ್ಯಕ್ಷೆ ವರಲಕ್ಷಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಲ್ಲದೆ ಅಧಿಕಾರಿಗಳು ಕಿರುಕುಳ ಕೊಡುತ್ತಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಅಳಲು ವ್ಯಕ್ತಪಡಿಸಿದ್ದಾರೆ.

ಅಂಗನವಾಡಿ ಶಿಕ್ಷಕರ 65000 ಮೊಬೈಲ್‌ಗೆ ಕರೆನ್ಸಿಯೇ ಇಲ್ಲ!

ಇನ್ನೂ  ವೈಯಕ್ತಿಕ ಸಿಮ್‌ ಬಳಸುವಂತೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಗಂಡ ಇಲ್ಲವೇ ಮನೆಯವರ ಮೊಬೈಲ್ ಮೂಲಕ ಅಪ್ ಡೇಟ್ ಮಾಡುವಂತೆ ಪ್ರತಿ ದಿನ ಒತ್ತಡ ಹಾಕುತ್ತಿದ್ದಾರೆ. ರಾಜ್ಯದಲ್ಲಿ 60 ಸಾವಿರ ಕಾರ್ಯಕರ್ತೆಯರ ಬಳಿ ಶೇ.5ರಷ್ಟು ವೈಯಕ್ತಿಕ ಸ್ಮಾರ್ಟ್ ಫೋನ್ ಇಲ್ಲ.ಆಲ್ಲದೆ ಮಕ್ಕಳು, ಗರ್ಭಿಣಿಯರಿಗೆ ಮೀಸಲಿಟ್ಟ ಅನುದಾನವೂ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಕರೆನ್ಸಿ ಹಾಕಿಸದೇ ಡಾಟಾ ಅಪ್ ಲೋಡ್ ಮಾಡಿ ಎಂದರೆ ಹೇಗೆ? ಅಧಿಕಾರಿಗಳು ಒತ್ತಡ ಹಾಕಿದರೆ ಏನು ಮಾಡಬೇಕು ಹೇಳಿ? ಮೊದಲು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ಎಸ್ ವರಲಕ್ಷ್ಮಿ ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ
ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಸಲೀಂ ಮೇಲೆ ಅನುಮಾನ