ಟೆಸ್ಟ್‌ ಡ್ರೈವ್‌ ವೇಳೆ ಮರಕ್ಕೆ ಗುದ್ದಿ ಎಲೆಕ್ಟ್ರಿಕ್‌ ಬೈಕ್‌; ಸವಾರ ಸಾವು!

By Kannadaprabha News  |  First Published Oct 3, 2023, 6:45 AM IST

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಟೆಸ್ಟ್‌ ಡ್ರೈವ್‌ ಮಾಡುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರ ಎಂಜಿನಿಯರಿಂಗ್‌ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಹಲಸೂರು ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 


ಬೆಂಗಳೂರು (ಅ.3): ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಟೆಸ್ಟ್‌ ಡ್ರೈವ್‌ ಮಾಡುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರ ಎಂಜಿನಿಯರಿಂಗ್‌ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಹಲಸೂರು ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಕೋರಮಂಗಲದ ಧ್ಯಾನ್‌ಶ್ಯಾಮ್‌(20) ಮೃತ ಸವಾರ. ಭಾನುವಾರ ಮಧ್ಯಾಹ್ನ 2.40ರ ಸುಮಾರಿಗೆ ಕೋರಮಂಗಲದ ಒಳವರ್ತುಲ ರಸ್ತೆಯ ಏರ್‌ವೀವ್‌ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದೆ. 

Tap to resize

Latest Videos

ಗ್ಯಾರೇಜ್ ನಲ್ಲಿ ಕೆಲ್ಸ, ಟೆಸ್ಟ್ ಡ್ರೈವ್ ನೆಪದಲ್ಲಿ ಮೊಬೈಲ್ ಕಳ್ಳತನದ ಮಾಡ್ತಿದ್ದ ಇಬ್ಬರು ಅಂದರ್

ನಗರದ ಖಾಸಗಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ಧ್ಯಾನ್‌ ಶ್ಯಾಮ್‌, ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಖರೀದಿಸಲು ನಿರ್ಧರಿಸಿದ್ದ. ಅದರಂತೆ ಭಾನುವಾರ ಮಧ್ಯಾಹ್ನ ಕೋರಮಂಲಗದ ಷೋರೂಮ್‌ನಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಪಡೆದು ಟೆಸ್ಟ್‌ ಡ್ರೈವ್‌ ಮಾಡಲು ಬಂದಿದ್ದ. ಈ ವೇಳೆ ಕೋರಮಂಗಲದ ಒಳವರ್ತುಲ ರಸ್ತೆಯಲ್ಲಿ ಹೋಗುವಾಗ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ವಿಭಜಕದ ಮರಕ್ಕೆ ಡಿಕ್ಕಿ ಹೊಡೆದಿದೆ. 

ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಸವಾರ ಧ್ಯಾನ್‌ಶ್ಯಾಮ್‌ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಸ್ಥಳೀಯರು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಧ್ಯಾನ್‌ಶ್ಯಾಮ್‌ ತೀವ್ರ ರಕ್ತಸ್ರಾವವಾಗಿ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.ಅಪಘಾತಕ್ಕೆ ವೇಗದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಹಲಸೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶದಿಂದ ಅಕ್ರಮ ಎಲೆಕ್ಟ್ರಾನಿಕ್‌ ವಸ್ತು, ಸಿಗರೆಟ್‌ ಕಳ್ಳಸಾಗಣೆ: 8 ಬಂಧನ

ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಎಲೆಕ್ಟ್ರಾನಿಕ್‌ ಉಪಕರಣಗಳು, ಮದ್ಯದ ಬಾಟಲಿಗಳು, ಭಾರೀ ಪ್ರಮಾಣದ ಸಿಗರೆಟ್‌ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ 8 ಮಂದಿ ಪ್ರಯಾಣಿಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. 

ಏಳು ಮಂದಿ ಆರೋಪಿಗಳಿಂದ 21 ಲ್ಯಾಪ್‌ಟಾಪ್‌ಗಳು, 75 ಮೊಬೈಲ್‌ಗಳು, 28 ಮದ್ಯದ ಬಾಟಲಿಗಳು ಹಾಗೂ 7 ಸಾವಿರ ಸಿಗರೆಟ್‌ಗಳು ಹಾಗೂ ಓರ್ವ ಮಹಿಳೆಯಿಂದ 248 ಸಿಗರೆಟ್‌ ಪೊಟ್ಟಣಗಳನ್ನು ಜಪ್ತಿ ಮಾಡಲಾಗಿದೆ. 

ಸ್ಥಳೀಯರಿಗೆ ಲಾಡ್ಜ್‌ನಲ್ಲಿ ರೂಂ ಕೊಡಲ್ಲಎಂದಿದ್ದಕ್ಕೆ ಮಾಲಕಿಯ ಕಿಡ್ನಾಪ್‌ ಯತ್ನ

ಶಾರ್ಜಾದಿಂದ ಬೆಂಗಳೂರಿಗೆ ಬಂದ ಜಿ9-496 ವಿಮಾನದಲ್ಲಿ ಬಂದ ಪ್ರಯಾಣಿಕರು ಹಾಗೂ ಅವರ ಲಗೇಜ್‌ಗಳನ್ನು ತಪಾಸಣೆ ಮಾಡುವಾಗ ಅಕ್ರಮವಾಗಿ ಎಲೆಕ್ಟ್ರಾನಿಕ್‌ ಉಪಕರಣಗಳು ಹಾಗೂ ಭಾರೀ ಪ್ರಮಾಣದ ಸಿಗರೆಟ್‌ಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ, ಮಾಲುಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಕಸ್ಟಮ್ಸ್‌ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

click me!