ಸ್ಥಳೀಯರಿಗೆ ಲಾಡ್ಜ್‌ನಲ್ಲಿ ರೂಂ ಕೊಡಲ್ಲಎಂದಿದ್ದಕ್ಕೆ ಮಾಲಕಿಯ ಕಿಡ್ನಾಪ್‌ ಯತ್ನ

By Kannadaprabha News  |  First Published Oct 3, 2023, 6:25 AM IST

  ಹೋಟೆಲ್‌ನಲ್ಲಿ ಬಾಡಿಗೆಗೆ ರೂಮ್‌ ಕೇಳುವ ನೆಪದಲ್ಲಿ ಬಂದು ಜಗಳ ತೆಗೆದು ಹೋಟೆಲ್‌ ಕಂ ಲಾಡ್ಜ್‌ ಮಾಲಕಿಯನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಲು ಯತ್ನಿಸಿದ ಆರೋಪದಡಿ ಮೂವರು ಮಹಿಳೆಯರು ಸೇರಿ ಐವರನ್ನು ಜಾಲಹಳ್ಳಿ ಠಾಣೆ ಪೊಲಿಸರು ಬಂಧಿಸಿದ್ದಾರೆ.


ಬೆಂಗಳೂರು (ಅ.3):  ಹೋಟೆಲ್‌ನಲ್ಲಿ ಬಾಡಿಗೆಗೆ ರೂಮ್‌ ಕೇಳುವ ನೆಪದಲ್ಲಿ ಬಂದು ಜಗಳ ತೆಗೆದು ಹೋಟೆಲ್‌ ಕಂ ಲಾಡ್ಜ್‌ ಮಾಲಕಿಯನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಲು ಯತ್ನಿಸಿದ ಆರೋಪದಡಿ ಮೂವರು ಮಹಿಳೆಯರು ಸೇರಿ ಐವರನ್ನು ಜಾಲಹಳ್ಳಿ ಠಾಣೆ ಪೊಲಿಸರು ಬಂಧಿಸಿದ್ದಾರೆ.

ಜಾಲಹಳ್ಳಿಯ ಜಯರಾಮ್ (48), ಸಾದಿಕ್(37), ಫರೀದಾ(36), ಅಸ್ಮಾ(34), ನಜ್ಮಾ(32) ಬಂಧಿತರು. ಆರೋಪಿಗಳು ಅ.1ರಂದು ನಿವೃತ್ತ ಸೇನಾಧಿಕಾರಿ ವಿಜಯ್ ಎಂಬುವವರ ಪತ್ನಿ ಎನ್ನಲಾದ ಹೋಟೆಲ್‌ ಮಾಲಕಿ ಪಂಕಜಾ ಅವರನ್ನು ಆಟೋರಿಕ್ಷಾದಲ್ಲಿ ಅಪಹರಿಸಲು ಯತ್ನಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಮಡಿಕೇರಿ: ವ್ಯಕ್ತಿಯ ಅಪಹರಣ ಐದು ಲಕ್ಷಕ್ಕೆ ಬೇಡಿಕೆ ಇಟ್ಟ ನಟೋರಿಯಸ್ ಗ್ಯಾಂಗ್!

ಏನಿದು ಘಟನೆ?:

ಪಂಕಜಾ ಅವರು ಜಾಲಹಳ್ಳಿಯ ಎಂಇಎಸ್ ರಿಂಗ್ ರಸ್ತೆಯಲ್ಲಿ ಡಿಎಂ ರೆಸಿಡೆನ್ಸಿ ಹೋಟೆಲ್ ನಡೆಸುತ್ತಿದ್ದಾರೆ. ಅ.1ರಂದು ಮಧ್ಯಾಹ್ನ 12ರ ಸುಮಾರಿಗೆ 10 ಮಂದಿ ಬುರ್ಖಾಧಾರಿ ಮಹಿಳೆಯರು ಸೇರಿದಂತೆ ಸುಮಾರು 20ಕ್ಕೂ ಅಧಿಕ ಮಂದಿ ಹೋಟೆಲ್‌ಗೆ ಬಂದಿದ್ದು, ಬಾಡಿಗೆಗೆ ರೂಮ್‌ ಕೇಳಿದ್ದಾರೆ. ಈ ವೇಳೆ ಪಂಕಜಾ ಅವರು ಗುರುತಿನಚೀಟಿ ಕೇಳಿದ್ದಾರೆ. ಆರೋಪಿಗಳ ಗುರುತಿನ ಚೀಟಿ ನೋಡಿದಾಗ ಸ್ಥಳೀಯ ವಿಳಾಸ ಇದ್ದಿದ್ದರಿಂದ ಸ್ಥಳೀಯರಿಗೆ ರೂಮ್‌ ನೀಡುವುದಿಲ್ಲ ಎಂದಿದ್ದಾರೆ. ಈ ವಿಚಾರಕ್ಕೆ ಪಂಕಜಾ ಮತ್ತು ಆರೋಪಿಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಈ ವೇಳೆ ಆರೋಪಿಗಳು ಹೋಟೆಲ್‌ನ ಕಿಟಕಿ ಗಾಜುಗಳನ್ನು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಬುರ್ಖಾಧಾರಿ ಕೆಲ ಮಹಿಳೆಯರು ಪಂಕಜಾ ಅವರನ್ನು ಸುತ್ತುವರೆದು ಬಲವಂತವಾಗಿ ಹೊರಗೆ ಎಳೆದುತಂದು ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಪಂಕಜಾ ಅವರು ಜೋರಾಗಿ ಚೀರಾಡಿದಾಗ ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಜಾಲಹಳ್ಳಿ ಸಂಚಾರ ಠಾಣೆ ಸಿಬ್ಬಂದಿ ಆಟೋವನ್ನು ತಡೆದು ವಿಚಾರಿಸಿದ್ದಾರೆ. ಈ ವೇಳೆ ಪಂಕಜಾ ಆರೋಪಿಗಳು ತನ್ನನ್ನು ಅಪಹರಿಸುತ್ತಿರುವ ಬಗ್ಗೆ ಹೇಳಿದ್ದಾರೆ. ತಕ್ಷಣ ಸಂಚಾರ ಪೊಲೀಸರು ಆಟೋ ಸಹಿತ ಆರೋಪಿಗಳನ್ನು ಜಾಲಹಳ್ಳಿ ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಪಂಕಜಾ ನೀಡಿದ ದೂರಿನ ಮೇರೆಗೆ ಐವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ನಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವನ ಮನೆಗೆ ಕರೆಸಿ ಚಾಕುವಿನಿಂದ ಹಲ್ಲೆ ನಡೆಸಿದ ಪತಿ!

ಹೋಟೆಲ್‌ ಮಾಲಕಿಯ ಗೊಂದಲದ ಹೇಳಿಕೆ?

ದೂರುದಾರರಾದ ಹೋಟೆಲ್‌ ಮಾಲಕಿ ಎಂದು ಹೇಳುತ್ತಿರುವ ಪಂಕಜಾ ತಾನು ಮಾಲಕಿ ಎಂಬುದಕ್ಕೆ ಯಾವುದೇ ದಾಖಲೆಗಳನ್ನು ತೋರಿಸುತ್ತಿಲ್ಲ. ಆಕೆಯ ಹೇಳಿಕೆ ಗೊಂದಲದಿಂದ ಕೂಡಿವೆ. ಹೀಗಾಗಿ ಸೂಕ್ತ ದಾಖಲೆ ತಂದು ತೋರಿಸುವಂತೆ ಪೊಲೀಸರು ಆಕೆಗೆ ಸೂಚಿಸಿದ್ದಾರೆ. ಮತ್ತೊಂದೆಡೆ ಕೆಲ ತಿಂಗಳಿಂದ ಹೋಟೆಲ್‌ನಲ್ಲಿ ಪಂಕಜಾ ವಾಸವಾಗಿದ್ದರು. ಇದೀಗ ಮಾಲೀಕರಂತೆ ಬಿಂಬಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಗಳು ಆರೋಪಿಸುತ್ತಿದ್ದಾರೆ. ದೂರುದಾರರು ಹಾಗೂ ಆರೋಪಿಗಳ ಹೇಳಿಕೆಗಳು ಗೊಂದಲದಿಂದ ಕೂಡಿವೆ. ಹೀಗಾಗಿ ಹೋಟೆಲ್‌ ಮಾಲಿಕತ್ವದ ಬಗ್ಗೆ ದಾಖಲೆಗಳ ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!