
ಗದಗ (ಜೂ.16) ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಪಾನ್ ಶಾಪ್ ಅಂಗಡಿ ವ್ಯಾಪಾರಿ ವಿರುದ್ಧಎಫ್‌ಐಆರ್ ದಾಖಲಿಸಿರುವ ಪ್ರಕರಣ ಗದಗನಲ್ಲಿ ನಡೆದಿದೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ನಿವಾಸಿ ಮುತ್ತಣ್ಣ ಯಮನಪ್ಪ ಮ್ಯಾಗೇರಿ ಮೇಲೆ ಕೇಸ್ ದಾಖಲು. ಜೂನ್ 11ರಂದು ಮುತ್ತು ಮ್ಯಾಗೇರಿ ಎನ್ನುವ ತನ್ನ ಫೇಸ್‌ಬುಕ್ ಖಾತೆ(Facebook account)ಯಲ್ಲಿ ಸರ್ಕಾರದ ಗ್ಯಾರಂಟಿ(Congress guarantee shceme) ಯೋಜನೆಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಅಲ್ಲದೇ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಮೂಲಕ ದ್ವೇಷ ಭಾವನೆ ಮೂಡಿಸುವ ಪೋಸ್ಟ್ ಹಾಕಿದ್ದಾನೆಂದು ಆರೋಪಿಸಿ ವ್ಯಕ್ತಯ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಫೇಸ್‌ಬುಕ್ ಪೋಸ್ಟ್ ನಲ್ಲಿ ಏನಿದೆ?
ಷರತ್ತಿನ ಮೇಲೆ ಷರತ್ತು ಹಾಕಿ ಕೊನೆಗೆ ಅವರ ಬಾಂಧವರಿಗಷ್ಟೇ ಯೋಜನೆ ತಲುಪಿಸುವುದು ಗ್ಯಾರಂಟಿಯ ಉದ್ದೇಶ ಎಂದು ಬರೆದುಕೊಂಡಿರುವ ಪಾನ್ ಶಾಪ್ ಮುತ್ತಣ್ಣ. ಇಷ್ಟೇ ಅಲ್ಲದೆ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಕುರಿತಂತೆ ಸಿಎಂ ಸಿದ್ದರಾಮಯ್ಯರ ಬಗ್ಗೆಯೂ ಅವಹೇಳನಕಾರಿ ಪೋಸ್ಟ್. 'ಇಂದಿನಿಂದ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ವ್ಯಾನಿಟಿ ಬ್ಯಾಗಿಗೆ ಖಚಿತ ಇದು ಮುಲ್ಲಾ ಖಾನ್ ಆದೇಶ' ಎಂದು ಬರೆದುಕೊಂಡಿದ್ದಾನೆ.
ಸರ್ಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ, ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಅವಹೇಳನ ಮಾಡಿದ್ದಾರೆಂಬ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಅರ್ಜುನ್ ಹನುಮಂತಪ್ಪ ರಾಥೋಡ್ ಎಂಬುವರು ದೂರು ನೀಡಿದ್ದರು. ದೂರನ್ನು ಸ್ವೀಕರಿಸಿರುವ ಗಜೇಂದ್ರಗಡ ಪೊಲೀಸರು ಅಪರಾಧ 0087/2023, ಐಪಿಸಿ ಸೆಕ್ಷನ್ 1860ರ ಕಲಂ 295A, 505(1)(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೋದಿ ಅವರಷ್ಟು ಕೆಲಸ ಮಾಡಲಾಗದೇ ಕರ್ನಾಟಕದಲ್ಲಿ ಸೋಲು: ಸಿ.ಟಿ. ರವಿ
ಕರ್ನಾಟಕ ಬಿಜೆಪಿ ಕಿಡಿ:
ಈ ಘಟನೆ ಸಂಬಂಧ ಟ್ವೀಟರ್ ಶೇರ್ ಮಾಡಿಕೊಂಡಿರುವ ಕರ್ನಾಟಕ ಬಿಜೆಪಿ #Hitlersarkar ಹ್ಯಾಷ್‌ಟ್ಯಾಗ್ ಬಳಸಿ "ರಾಜ್ಯದಲ್ಲೀಗ ತಾಜಾ ತುಘಲಕ್ ದರ್ಬಾರ್ ನಡೆಯುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ತಲೆಕೆಳಗಾಗಿರುವ ಕಾಂಗ್ರೆಸ್‌ನ ಗ್ಯಾರಂಟಿಗಳ ವೈಫಲ್ಯ ಮತ್ತು ಅವುಗಳಿಂದಾಗುತ್ತಿರುವ ತೊಂದರೆಗಳ ಬಗ್ಗೆ ಯಾರು ಏನೇ ಮಾತನಾಡಿದರೂ ಅವರ ವಿರುದ್ಧ ಸುಳ್ಳು ಕೇಸ್ ದಾಖಲಿಸುತ್ತಾ ಚೀನಾ-ಪಾಕಿಸ್ಥಾನದಂತೆ ವರ್ತಿಸಲಾರಂಭಿಸಿದೆ. ಪ್ರಜೆಗಳ ಧ್ವನಿಯನ್ನು ದಮನಿಸಿ ಬಹುಕಾಲ ರಾಜ್ಯವಾಳಬಹುದೆಂಬ ಭ್ರಮೆಯಿಂದ ಕಾಂಗ್ರೆಸ್ ಹೊರಬಂದು, ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತಾರದೆ, ಅವರ ಗ್ಯಾರಂಟಿಗಳ ಯೋಚನಾರಹಿತ ಅನುಷ್ಠಾನಗಳಿಂದ ಪ್ರಜೆಗಳು ಅನುಭವಿಸುತ್ತಿರುವ ತೊಂದರೆಗಳನ್ನು ಅರಿತು ಸರಿಪಡಿಸಲಿ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ