ಸಾರಿಗೆ ನೌಕರರಿಗೆ ಬಂಪರ್‌ ಕೊಡುಗೆ ನೀಡಿದ ಸಿದ್ದು ಸರ್ಕಾರ..!

By Kannadaprabha News  |  First Published Jun 16, 2023, 8:01 AM IST

ಮಾ.17ರಿಂದ ಪೂರ್ವಾನ್ವಯ ಆಗುವಂತೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ಶೇ.15ರಷ್ಟು ವೇತನ ಹೆಚ್ಚಳ ಮಾಡಿದ್ದು, ಇದರಿಂದ ಪ್ರತಿ ತಿಂಗಳು 45.13 ಕೋಟಿ ರು. ಹೊರೆ ಬೀಳಲಿದೆ. ವಾರ್ಷಿಕ 541.56 ಕೋಟಿ ರು.ಗಳಂತೆ ಮುಂದಿನ 4 ವರ್ಷಗಳಲ್ಲಿ 2,166 ಕೋಟಿ ರು. ಹೊರೆ ಬೀಳಲಿದೆ. 


ಬೆಂಗಳೂರು(ಜೂ.16):  ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯಿಂದ ಸರ್ಕಾರಿ ಸಾರಿಗೆ ನಿಗಮಗಳು ದಿವಾಳಿಯಾಗಲಿವೆ ಎಂಬ ಆರೋಪಗಳ ಬೆನ್ನಲ್ಲೇ ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಬಂಪರ್‌ ಕೊಡುಗೆ ನೀಡಿದ್ದು, ಸಿಬ್ಬಂದಿಯ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದೆ. ಅಲ್ಲದೆ, ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ಬಸ್ಸುಗಳಿಗೆ ಮೋಟಾರು ವಾಹನ ತೆರಿಗೆ ವಿನಾಯಿತಿ ನೀಡಲಾಗಿದೆ. ತನ್ಮೂಲಕ ವರ್ಷಕ್ಕೆ 79.85 ಕೋಟಿ ರು. ಉಳಿತಾಯವಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದ್ದಾರೆ.

4 ವರ್ಷಗಳಲ್ಲಿ 2,166 ಕೋಟಿ ರು. ಹೊರೆ:

Tap to resize

Latest Videos

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾ.17ರಿಂದ ಪೂರ್ವಾನ್ವಯ ಆಗುವಂತೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ಶೇ.15ರಷ್ಟು ವೇತನ ಹೆಚ್ಚಳ ಮಾಡಿದ್ದು, ಇದರಿಂದ ಪ್ರತಿ ತಿಂಗಳು 45.13 ಕೋಟಿ ರು. ಹೊರೆ ಬೀಳಲಿದೆ. ವಾರ್ಷಿಕ 541.56 ಕೋಟಿ ರು.ಗಳಂತೆ ಮುಂದಿನ 4 ವರ್ಷಗಳಲ್ಲಿ 2,166 ಕೋಟಿ ರು. ಹೊರೆ ಬೀಳಲಿದೆ ಎಂದು ತಿಳಿಸಿದರು.

ಬಸ್ಸಿನಲ್ಲಿ ಶೋಭಾ ಕರಂದ್ಲಾಜೆಗೂ ಫ್ರೀ ಎಂದ ಕಾಂಗ್ರೆಸ್‌ಗೆ ಕೇಂದ್ರ ಸಚಿವೆ ತರಾಟೆ

ಡಬಲ್‌ ಡೆಕ್ಕರ್‌ ಬಸ್‌ ಖರೀದಿಗೆ ಅನುದಾನ:

ಇನ್ನು ಡಬಲ್‌ ಡೆಕ್ಕರ್‌ ವಿದ್ಯುತ್‌ ಚಾಲಿತ ಬಸ್‌ ಖರೀದಿಗೆ ಅನುಮೋದನೆ ನೀಡಲಾಗಿದೆ. 28.13 ಕೋಟಿ ರು. ಅನುದಾನ ನೀಡಲಿದ್ದು, ಈ ಬಜೆಟ್‌ನಲ್ಲಿ ಸಾರಿಗೆ ನಿಗಮಗಳು ಬಸ್‌ ಖರೀದಿಸಲು ಅವಕಾಶ ನೀಡಲಾಗಿದೆ. ಎಷ್ಟುಬಸ್‌ ಖರೀದಿ ಎಂಬುದು ಟೆಂಡರ್‌ ಪ್ರಕ್ರಿಯೆ ಬಳಿಕ ತಿಳಿದು ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

click me!