
ಬೆಂಗಳೂರು (ಫೆ.11) : ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ ಆರಂಭವಾಗಲಿರುವ ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕದ ಉನ್ನತ ಮಟ್ಟದ ನಿಯೋಗವು ಭಾಗವಹಿಸುತ್ತಿದ್ದು, ಭಾರತ ಹಾಗೂ ಅಮೆರಿಕ ನಡುವಿನ ಸಹಭಾಗಿತ್ವ ಮತ್ತಷ್ಟುಬಲಗೊಳ್ಳುವ ಸಾಧ್ಯತೆ ಇದೆ.
ಅಲ್ಲದೆ, ಅಮೆರಿಕದ ಹೆವಿ ಬಾಂಬರ್ ಆಗಿರುವ ಬಿ-1ಬಿ ಲ್ಯಾನ್ಸರ್ ಹೆವಿ ಬಾಂಬರ್ ವಿಮಾನ ವೈಮಾನಿಕ ಪ್ರದರ್ಶನ ನೀಡಲಿದ್ದು ಏರೋ ಇಂಡಿಯಾಗೆ ಹೊಸ ಮೆರುಗು ತಂದುಕೊಡಲಿದೆ. ಅಮೆರಿಕದ ಡಾನ್ ಹೆಫ್ಲಿನ್ ಹಾಗೂ ಜಾರ್ಜೆ ಡೆ ಅಫೇರ್ಸ್ ಅವರ ನೇತೃತ್ವದಲ್ಲಿ ಅಮೆರಿಕ ಅಧಿಕಾರಿಗಳು ಹಾಗೂ ರಕ್ಷಣಾ ಉದ್ಯಮದ ಪ್ರತಿನಿಧಿಗಳ ಉನ್ನತ ಮಟ್ಟದ ನಿಯೋಗವು ಏರೋ ಇಂಡಿಯಾದಲ್ಲಿ ಭಾಗವಹಿಸಲಿದೆ.
Aero India 2023: 5 ದಿನ ಸಂಚಾರ ಮಾರ್ಗ ಬದಲಾವಣೆ
ಪತ್ರಿಕಾ ಹೇಳಿಕೆಯಲ್ಲಿ ಈ ವಿಚಾರ ತಿಳಿಸಿರುವ ಹೆಫ್ಲಿನ್, ನಮ್ಮ ಪ್ರಮುಖ ರಕ್ಷಣಾ ಸಹಭಾಗಿಯಾಗಿರುವ ಭಾರತದೊಂದಿಗೆ ಅಮೆರಿಕ ಉತ್ತಮ ಸಂಬಂಧ ಹೊಂದಿದೆ. ಅದರ ಮುಂದುವರಿದ ಭಾಗವಾಗಿ ನನ್ನ ಮುಂದಾಳತ್ವದಲ್ಲಿ ಅಮೆರಿಕ ನಿಯೋಗದೊಂದಿಗೆ ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಾ ಸಂಬಂಧದ ಆಪ್ತತೆ ಮುಂದುವರೆಯಲು ದ್ಯೋತಕವಾಗಲಿದೆ ಎಂದು ಹೇಳಿದ್ದಾರೆ.
ಪ್ರಮುಖ ರಕ್ಷಣಾ ಕಂಪನಿಗಳು ಭಾಗಿ:
ಅಮೆರಿಕ(america)ದ ಪ್ರಮುಖ ರಕ್ಷಣಾ ಕಂಪನಿಗಳು ಸಹ ಈ ವೇಳೆ ಭಾಗವಹಿಸುತ್ತಿವೆ. ಭಾರತದೊಂದಿಗೆ ಉತ್ತಮ ರಕ್ಷಣಾ ಸಂಬಂಧ ಹೊಂದಲು ಅಮೆರಿಕದ ಉದ್ಯಮಗಳು ಹಾಗೂ ಅಮೆರಿಕ ರಕ್ಷಣಾ ಸೇವಾ ಸಂಸ್ಥೆಗಳಿಗೆ ಇದು ವೇದಿಕೆಯಾಗಲಿದೆ. ಎರಡೂ ಸೇನೆಗಳು ಇಂಡೋ ಫೆಸಿಪಿಕ್ ನಿಯಮಾನುಸಾರ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ.
ಅಮೆರಿಕ ತಂಡದಿಂದ ಘಟಂ ಸಂಗೀತ ಕಛೇರಿ
ದ್ವಿ ಪಕ್ಷೀಯ ಸಂಬಂಧದ ಗುರುತಾಗಿ ಹವಾಯಿಯಲ್ಲಿನ ಅಮೆರಿಕ ವಾಯು ಪಡೆಯ ಸಂಗೀತ ತಂಡವು ಭಾರತೀಯ ತಾಳವಾದ್ಯವಾದ ಘಟಂ ವಾದನ ಸಂಗೀತ ಕಛೇರಿಯನ್ನು ಏರ್ಪಡಿಸಿದೆ. ಕಲಾವಿದರಾದ ಗಿರಿಧರ ಉಡುಪ ಅವರು ಈ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ಅಮೆರಿಕ ದೂತವಾಸದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಪುಟಗಳಲ್ಲಿ ಬಿತ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್ಪೋರ್ಟ್ ಪ್ರಯಾಣಿಕರೇ ಈ ಸ್ಟೋರಿ ಓದಲೇಬೇಕು: ಫೆಬ್ರವರಿ 17ರವರೆಗೆ ಏರ್ ಶೋ ಹಿನ್ನೆಲೆ ಸಂಚಾರ ದಟ್ಟಣೆ
ಡಾನ್ ಹೆಫ್ಲಿನ್(Don Heflin), ಜಾರ್ಜೆ ಡಿ ಅಫೇರ್ಸ್(, George D. Affairs) ಅಂತಾರಾಷ್ಟ್ರೀಯ ವ್ಯವಹಾರಗಳ ಉಪ ಅಧೀನಾಧಿಕಾರಿ ಕೆಲ್ಲಿ ಎಲ್(Kelly L), 11ನೇ ವಾಯುಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡೇವಿಡ್ ಏ ಕ್ರಮ್(David A Krum), 8ನೇ ವಾಯುಸೇನಾ ಕಮಾಂಡರ್ ಮೇಜರ್ ಜನರಲ್ ಮಾರ್ಕರ್ ಈ ವೆದರಿಂಗ್ಟನ್, ವಾಯುಸೇನಾ ರಕ್ಷಣಾ ಸಹಕಾರ ಮತ್ತು ಸಹಯೋಗ ನಿರ್ದೇಶನಾಲಯದ ನಿರ್ದೇಶಕರಾದ ಬ್ರಿಗೇಡಿಯರ್ ಜನರಲ್ ಬ್ರಯಾನ್ ಬ್ರಕ್ಬಾರ್, ಚೆನ್ನೈ ಅಮೆರಿಕ ದೂತವಾಸ ಕೌನ್ಸಲ್ ಜನರಲ್ ಜುಡಿತ್ ರವಿನ್, ಅಮೆರಿಕ ವಾಣಿಜ್ಯ ಸೇವೆ ವಾಣಿಜ್ಯ ವ್ಯವಹಾರ ಆಪ್ತ ಸಚಿವರಾದ ಐಲೀನ್ ನಂದಿ, ನವದೆಹಲಿ ದೂತವಾಸ ಕಚೇರಿಯ ಡಿಫೆನ್ಸ್ ಅಟಾಚೆ ಅವರು ನಿಯೋಗದಲ್ಲಿ ಇರಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ