Aero India 2023: 5 ದಿನ ಸಂಚಾರ ಮಾರ್ಗ ಬದಲಾವಣೆ

Published : Feb 11, 2023, 05:31 AM IST
Aero India 2023: 5 ದಿನ ಸಂಚಾರ ಮಾರ್ಗ ಬದಲಾವಣೆ

ಸಾರಾಂಶ

ನಗರದ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆ.13ರಿಂದ 17ರವರೆಗೆ ‘ಏರೋ ಇಂಡಿಯಾ-2023’ ವೈಮಾನಿಕ ಪ್ರದರ್ಶನ ಜರುಗುವ ಹಿನ್ನೆಲೆಯಲ್ಲಿ ಅತಿಗಣ್ಯರು, ಗಣ್ಯರು, ಅತಿಥಿಗಳು, ಸಾರ್ವಜನಿಕರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವಾಗುವಂತೆ ನಗರ ಸಂಚಾರ ಪೊಲೀಸರು ವೈಮಾನಿಕ ಪ್ರದರ್ಶನದ ದಿನಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಕೆಲ ಬದಲಾವಣೆ ತಂದಿದ್ದಾರೆ.

ಬೆಂಗಳೂರು (ಫೆ.11) : ನಗರದ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆ.13ರಿಂದ 17ರವರೆಗೆ ‘ಏರೋ ಇಂಡಿಯಾ-2023’ ವೈಮಾನಿಕ ಪ್ರದರ್ಶನ ಜರುಗುವ ಹಿನ್ನೆಲೆಯಲ್ಲಿ ಅತಿಗಣ್ಯರು, ಗಣ್ಯರು, ಅತಿಥಿಗಳು, ಸಾರ್ವಜನಿಕರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವಾಗುವಂತೆ ನಗರ ಸಂಚಾರ ಪೊಲೀಸರು ವೈಮಾನಿಕ ಪ್ರದರ್ಶನದ ದಿನಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಕೆಲ ಬದಲಾವಣೆ ತಂದಿದ್ದಾರೆ.

ವೈಮಾನಿಕ ಪ್ರದರ್ಶನ(Airshow)ದ ಹಿನ್ನೆಲೆಯಲ್ಲಿ ನಗರದ ಕೆಲ ರಸ್ತೆಗಳಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೊರತುಪಡಿಸಿ ಲಾರಿ, ಟ್ರಕ್‌, ಖಾಸಗಿ ಬಸ್‌ ಹಾಗೂ ಭಾರೀ ಸರಕು ವಾಹನ ಸಂಚಾರ ನಿಷೇಧಿಸಲಾಗಿದೆ.

ವಾಹನ ನಿಲುಗಡೆ ಎಲ್ಲೆಲ್ಲಿ?

  • ಗಂಟಿಗಾನಹಳ್ಳಿ ಬಳಿ ಏರ್‌ ಡಿಸ್‌ಪ್ಲೇ ವೀವಿಂಗ್‌ ಏರಿಯಾ(ಎಡಿವಿಎ) ಪಾರ್ಕಿಂಗ್‌
  • ಹುಣಸಮಾರನಹಳ್ಳಿ ಬಳಿ ಡೊಮೆಸ್ಟಿಕ್‌ ಪಾರ್ಕಿಂಗ್‌
  • ಪಾಸ್‌ ಇಲ್ಲದ ಖಾಸಗಿ ವಾಹನಗಳು- ಜಿಕೆವಿಕೆ ಆವರಣ, ಜಕ್ಕೂರು ಪಾರ್ಕಿಂಗ್‌ ಸ್ಥಳ

ವಾಹನ ಪಾರ್ಕಿಂಗ್‌ ನಿಷೇಧಿತ ರಸ್ತೆಗಳು

  • ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮಾರ್ಗವಾಗಿ ಬೆಂಗಳೂರು-ಬಳ್ಳಾರಿ ರಸ್ತೆ ಸಂಪರ್ಕಿಸುವ ಆಂಬಿಯನ್ಸ್‌ ಡಾಬಾ ಕ್ರಾಸ್‌ವರೆಗೆ
  • ಬೆಂಗಳೂರು-ಬಳ್ಳಾರಿ ರಸ್ತೆಯ ಮೇಖ್ರಿ ಸರ್ಕಲ್‌ನಿಂದ-ದೇವನಹಳ್ಳಿವರೆಗೆ
  • ರಿಂಗ್‌ ರಸ್ತೆಯ ಗೊರಗುಂಟೆ ಪಾಳ್ಯ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್‌ ಜಂಕ್ಷನ್‌ವರೆಗೆ
  • ಬಾಗಲೂರು ಮುಖ್ಯ ರಸ್ತೆಯ ರೇವಾ ಕಾಲೇಜ್‌ ಜಂಕ್ಷನ್‌ನಿಂದ ಬಾಗಲೂರು ಕ್ರಾಸ್‌ವರೆಗೆ
  • ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರು ಜಂಕ್ಷನ್‌ವರೆಗೆ

ಏರ್ಪೋರ್ಟ್ ಪ್ರಯಾಣಿಕರೇ ಈ ಸ್ಟೋರಿ ಓದಲೇಬೇಕು: ಫೆಬ್ರವರಿ 17ರವರೆಗೆ ಏರ್ ಶೋ ಹಿನ್ನೆಲೆ ಸಂಚಾರ ದಟ್ಟಣೆ

ಏರ್‌ಶೋ: ಮಿಟ್ಟಗಾನಹಳ್ಳಿ ಕಸ ವಿಲೇವಾರಿ ಬಂದ್‌  

 

ಯಲಹಂಕ ವೈಮಾನಿಕ ನೆಲೆ(Yalahanka Air Base)ಯಲ್ಲಿ ನಾಡಿದ್ದಿನಿಂದ (ಫೆ.13) ಏರೋ ಇಂಡಿಯಾ(Aero India ) ವೈಮಾನಿಕ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಫೆ.18ವರೆಗೆ ಮಿಟ್ಟಗಾನಹಳ್ಳಿ(Mittaganahali)ಯ ಬಿಬಿಎಂಪಿ(BBMP)ಯ ಭೂಭರ್ತಿ ಕೇಂದ್ರಕ್ಕೆ ನಗರದ ತ್ಯಾಜ್ಯವನ್ನು ವಿಲೇವಾರಿ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌(Tushar girinath) ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ದಿನ ಏರ್‌ಕ್ರಾಫ್‌್ಟ, ಫೈಟರ್‌ ಜೆಟ್‌, ಹೆಲಿಕಾಪ್ಟರ್‌ಗಳ ಹಾರಾಟ ಹೆಚ್ಚಾಗಿರಲಿದೆ. ಮಿಟ್ಟಗಾನಹಳ್ಳಿಯ ಭೂಭರ್ತಿ ಕೇಂದ್ರಕ್ಕೆ ಕಸ ವಿಲೇವಾರಿ ಮಾಡುವುದರಿಂದ ಹಕ್ಕಿ-ಪಕ್ಷಿಗಳು ಆಗಮಿಸುತ್ತವೆ. ಇದರಿಂದ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ, ಮಿಟ್ಟಗಾನಹಳ್ಳಿ ಭೂಭರ್ತಿ ಕೇಂದ್ರಕ್ಕೆ ತ್ಯಾಜ್ಯ ವಿಲೇವಾರಿ ಮಾಡದಂತೆ ನಿರ್ದೇಶಿಸಲಾಗಿದೆ ಎಂದರು. 

ಬೆಂಗಳೂರು ಸ್ಟಾರ್‌ ಹೋಟೆಲ್‌ಗಳು ಬಹುತೇಕ ಭರ್ತಿ: ಈ ನಾಲ್ಕು ದಿನ ಹೋಟೆಲ್‌ ರೂಮು ಸಿಗೊಲ್ಲ

ಮಿಟ್ಟಗಾನಹಳ್ಳಿ ಭೂಭರ್ತಿ ಕೇಂದ್ರದಲ್ಲಿ ವಿಲೇವಾರಿ ಮಾಡಲಾಗುತ್ತಿದ್ದ ತ್ಯಾಜ್ಯವನ್ನು ಬೈಯಪ್ಪನಹಳ್ಳಿಯಲ್ಲಿ ನೂತನವಾಗಿ ತೆರೆಯಲಾಗಿರುವ ಭೂಭರ್ತಿ ಕೇಂದ್ರದಲ್ಲಿ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಈಗಾಗಲೇ ಯಲಹಂಕ ವೈಮಾನಿಕ ನೆಲೆ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

  • ಕಸ ಸುರಿಯುವುದರಿಂದ ಪಕ್ಷಿಗಳ ಆಗಮನ
  • ಇದರಿಂದ ವಿಮಾನ ಹಾರಾಟಕ್ಕೆ ತೊಂದರೆ
  • ಹಾಗಾಗಿ ಕಸ ವಿಲೇವಾರಿಗೆ ತುಷಾರ್‌ ತಡೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ