ಒತ್ತುವರಿ ಮತ್ತು ಅತಿಕ್ರಮಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಗರದಲ್ಲಿರುವ ಬಿಬಿಎಂಪಿಯ ಎಲ್ಲಾ ಆಸ್ತಿಗಳಿಗೆ ತಂತಿಬೇಲಿ ಹಾಕಲು ಪಾಲಿಕೆ ಮುಂದಾಗಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಫೆ.11) : ಒತ್ತುವರಿ ಮತ್ತು ಅತಿಕ್ರಮಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಗರದಲ್ಲಿರುವ ಬಿಬಿಎಂಪಿಯ ಎಲ್ಲಾ ಆಸ್ತಿಗಳಿಗೆ ತಂತಿಬೇಲಿ ಹಾಕಲು ಪಾಲಿಕೆ ಮುಂದಾಗಿದೆ.
ಬಿಬಿಎಂಪಿ(BBMP)ಯ 243 ವಾರ್ಡ್‌ಗಳಲ್ಲಿ ಶಾಲೆ, ಆಟದ ಮೈದಾನ, ಉದ್ಯಾನವನ, ಆಸ್ಪತ್ರೆ, ಕಚೇರಿಗಳು ಸೇರಿದಂತೆ ಒಟ್ಟು 6,828 ಆಸ್ತಿಗಳಿವೆ. ಈ ಆಸ್ತಿಗಳಲ್ಲಿ ಖಾಸಗಿ ವ್ಯಕ್ತಿಗಳಿಂದ ಆಗುವ ಒತ್ತುವರಿ ಮತ್ತು ಅತಿಕ್ರಮಣ ತಡೆಯುವ ಉದ್ದೇಶದಿಂದ ಎಲ್ಲಾ ಆಸ್ತಿಗಳಿಗೆ ತಂತಿಬೇಲಿ ಹಾಕಲು ಬಿಬಿಎಂಪಿ ಆಸ್ತಿ ವಿಭಾಗ ತೀರ್ಮಾನಿಸಲಾಗಿದೆ.
ಬಿಬಿಎಂಪಿ ಆಡಳಿತಕ್ಕೆ 7400 ಸಿಬ್ಬಂದಿ ಸಾಲಲ್ಲ; ಇನ್ನೂ 700 ಸಿಬ್ಬಂದಿ ಬೇಕು!
ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸುವುದಕ್ಕೆ ಪಾಲಿಕೆಯ ಎಂಟು ವಲಯದ ಅಧಿಕಾರಿಗಳಿಂದ ಎಷ್ಟುಆಸ್ತಿಗಳಿಗೆ ಈಗಾಗಲೇ ತಂತಿ ಬೇಲಿ, ತಡೆ ಗೋಡೆ ನಿರ್ಮಿಸಲಾಗಿದೆ. ಇನ್ನೂ ಎಷ್ಟುಆಸ್ತಿಗಳಿಗೆ ತಡೆಗೋಡೆ ಹಾಗೂ ತಂತಿ ಬೇಲಿ ಹಾಕಬೇಕಾಗಿದೆ ಎಂಬ ಮಾಹಿತಿಯನ್ನು ನೀಡುವಂತೆ ನಿರ್ದೇಶಿಸಲಾಗಿದೆ. ಮುಖ್ಯವಾಗಿ ಒತ್ತುವರಿ ಆಗುವ ಸಾಧ್ಯತೆ ಹೆಚ್ಚಾಗಿರುವ ಆಸ್ತಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಪಟ್ಟಿಸಿದ್ಧಪಡಿಸಿ ನೀಡುವಂತೆ ಸೂಚಿಸಲಾಗಿದೆ.
ಅತಿಕ್ರಮಣದ ಆಸ್ತಿಗೆ ಮೊದಲು ಬೇಲಿ
ಅತಿಕ್ರಮಣ ಹಾಗೂ ಒತ್ತುವರಿ ಆಗುವ ಸಾಧ್ಯತೆ ಇರುವ ಆಸ್ತಿಗಳಿಗೆ ಮೊದಲ ಹಂತದಲ್ಲಿ ತಂತಿಬೇಲಿ ಅಳವಡಿಸಲಾಗುವುದು. ಜತೆಗೆ, ಈಗಾಗಲೇ ಒತ್ತುವರಿದಾರರಿಂದ ವಶಕ್ಕೆ ಪಡೆದ ಆಸ್ತಿಗೆ ತಂತಿಬೇಲಿ ಅಳವಡಿಕೆಗೆ ನಿರ್ಧರಿಸಲಾಗಿದೆ.
ಬಿಬಿಎಂಪಿಯ ಆಸ್ತಿ ವಿಭಾಗದಿಂದ ಯಾವ ವಲಯದಲ್ಲಿ ಎಷ್ಟುಆಸ್ತಿಗಳಿವೆ. ಈ ಪೈಕಿ ಎಷ್ಟುಆಸ್ತಿಗಳಿಗೆ ಈಗಾಗಲೇ ತಂತಿಬೇಲಿ, ತಡೆ ಗೋಡೆ ನಿರ್ಮಾಣ ಮಾಡಿ ಸಂರಕ್ಷಣಾ ಕ್ರಮ ಕೈಗೊಳ್ಳಲಾಗಿದೆ. ಇನ್ನು ಎಷ್ಟುಆಸ್ತಿಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೆಸಬೇಕಿದೆ. ತಂತಿಬೇಲಿ ಅಳವಡಿಕೆಗೆ ಯಾವ ಆಸ್ತಿಗೆ ಎಷ್ಟುಮೊತ್ತ ಬೇಕಾಗಲಿದೆ. ಮೊದಲ ಹಂತದಲ್ಲಿ ಯಾವ ಯಾವ ಆಸ್ತಿಗೆ ತಂತಿಬೇಲಿ ಅಳವಡಿಕೆ ಮಾಡಬೇಕು ಎಂಬುದರ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.
ಜತೆಗೆ, ಈ ಬಾರಿ ಆಸ್ತಿ ವಿಭಾಗದಿಂದಲೇ ಕಾಮಗಾರಿ ಕೈಗೊಳ್ಳುವುದಕ್ಕೆ ತೀರ್ಮಾನಿಸಲಾಗಿದೆ. ಈ ಹಿಂದೆ ಆಸ್ತಿ ಸಂರಕ್ಷಣೆಗೆ ಅನುದಾನ ಮೀಸಲಿಟ್ಟರೆ, ಆ ಹಣವನ್ನು ವಲಯ ವ್ಯಾಪ್ತಿಯ ಎಂಜಿನಿಯರಿಂಗ್ ವಿಭಾಗದಿಂದ ಕಾಮಗಾರಿ ನಡೆಸಲಾಗುತ್ತಿತ್ತು. ಯಾವ ಆಸ್ತಿಗಳಿಗೆ ತಂತಿ ಬೇಲಿ, ತಡೆಗೋಡೆ ನಿರ್ಮಿಸಲಾಗಿದೆ ಎಂಬ ಮಾಹಿತಿ ಸ್ಪಷ್ಟವಾಗಿ ಸಿಗುತ್ತಿರಲಿಲ್ಲ. ಹೀಗಾಗಿ, ಈ ನಿರ್ಧರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
₹25 ಕೋಟಿ ಬೇಡಿಕೆ
ಆಸ್ತಿ ವಿಭಾಗವು ಬಿಬಿಎಂಪಿ ಆಸ್ತಿಗಳಿಗೆ ತಂತಿಬೇಲಿ ಹಾಕುವುದಕ್ಕೆ 2023-24ನೇ ಸಾಲಿನ ಬಿಬಿಎಂಪಿ ಆಯ್ಯವ್ಯಯದಲ್ಲಿ ಒಟ್ಟು .25 ಕೋಟಿ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಹಣ ನೀಡುವುದಾಗಿ ಭರವಸೆ ಸಿಕ್ಕಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
Bengaluru Traffic ಟ್ರಾಫಿಕ್ ದಂಡ: ದಾಖಲೆಯ 17.61 ಕೋಟಿ ರು. ಸಂಗ್ರಹ!
ಬಿಬಿಎಂಪಿ ಆಸ್ತಿಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ತಂತಿಬೇಲಿ ಹಾಕುವುದಕ್ಕೆ ನಿರ್ಧರಿಸಲಾಗಿದೆ. 2023-24ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ .25 ಕೋಟಿ ಹಣ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಪ್ರೀತಿ ಗೆಹ್ಲೋತ್, ವಿಶೇಷ ಆಯುಕ್ತೆ, ಪಾಲಿಕೆ ಆಸ್ತಿ ವಿಭಾಗ.
ವಲಯವಾರು ಬಿಬಿಎಂಪಿ ಆಸ್ತಿ ವಿವರ
ವಲಯ ಆಸ್ತಿ ಸಂಖ್ಯೆ