
- ಉ.ಪ್ರ. ಸಿಎಂ ಯೋಗಿಂತೆ ಚುಂಚಶ್ರೀಯೂ ಸಿಎಂ ಆಗಲೆಂದು ಚರ್ಚೆ
- ನಮ್ಮ ಪೀಠ ಕೇವಲ ಧಾರ್ಮಿಕ ಪರಂಪರೆ ಹಾದಿ ಅನುಸರಿಸುತ್ತದೆ: ಶ್ರೀ
ಚನ್ನಪಟ್ಟಣ (ಮೇ.19) ಆದಿಚುಂಚನಗಿರಿ ಮಠ ರಾಷ್ಟ್ರ ಹಾಗೂ ರಾಜ್ಯ ಆಳುವವರನ್ನು ಸೃಷ್ಟಿ ಮಾಡುತ್ತದೆಯೇ ಹೊರತು, ರಾಜಕಾರಣ ಮಾಡುವುದಿಲ್ಲ. ನಮ್ಮದು ಶುದ್ದ ಆಧ್ಯಾತ್ಮಿಕ ಮಠ. ರಾಜಕಾರಣದ ಕೊಂಚ ಸೊಕ್ಕು ಕೂಡ ಇಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜೋಗಿಗಳ ಸಮಾವೇಶ ಹಾಗೂ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರು ಸಿಎಂ ಆಗುವ ಮುಂಚೆಯೇ ಅವರ ಮನೆತನ ರಾಜಕಾರಣದಲ್ಲಿದೆ. ಆದರೆ, ಆದಿಚುಂಚನಗಿರಿ ಮಠ ಎಂದಾದರೂ ರಾಜಕಾರಣ ಪ್ರವೇಶ ಮಾಡಿದ್ದನ್ನು ನೋಡಿದ್ದೀರಾ?. ಅವರಿಗೂ, ನಮಗೂ ವ್ಯತ್ಯಾಸ ಇಷ್ಟೇ. ಎಂದೂ ಕೂಡ ಆ ಆಲೋಚನೆ ಬೇಡ ಎಂದರು.
ನಾಥ ಪರಂಪರೆಯ ಯೋಗಿ ಆದಿತ್ಯನಾಥ್ ಅವರು ಸಿಎಂ ಆದಾಗ ಇಲ್ಲಿ ಯಾಕೆ ಚುಂಚನಗಿರಿ ಶ್ರೀಗಳು ಸಿಎಂ ಆಗಬಾರದು ಎಂಬ ಚರ್ಚೆ ಆರಂಭವಾಯಿತು. ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಅದು ಅವರ ಪರಂಪರೆ. ಆದರೆ, ನಮ್ಮ ಪೀಠ ಕೇವಲ ಧಾರ್ಮಿಕ ಪರಂಪರೆಯ ಹಾದಿಯಲ್ಲಿ ಮಾತ್ರ ಸಾಗಿ ಬಂದಿದೆ. ಮುಂದೆ ಅದರ ದಾರಿಯಲ್ಲಿಯೇ ಶ್ರೀ ಮಠ ಸಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ