Crop Loss Compensation: ರೈತರ ಖಾತೆಗೆ ಬೆಳೆ ಹಾನಿ ಹೆಚ್ಚುವರಿ ಪರಿಹಾರ

Kannadaprabha News   | Asianet News
Published : Feb 12, 2022, 07:31 AM ISTUpdated : Feb 12, 2022, 07:34 AM IST
Crop Loss Compensation: ರೈತರ ಖಾತೆಗೆ ಬೆಳೆ ಹಾನಿ ಹೆಚ್ಚುವರಿ ಪರಿಹಾರ

ಸಾರಾಂಶ

*  ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾವಣೆ  *  ರಾಜ್ಯದ 18.02 ಲಕ್ಷ ರೈತರಿಗೆ 1135.58 ಕೋಟಿ ರು. ಪಾವತಿ *  ಗುರುವಾರದಿಂದಲೇ ರೈತರ ಬ್ಯಾಂಕ್‌ ಖಾತೆಗೆ ಪರಿಹಾರ ಸಂದಾಯ  

ಬೆಂಗಳೂರು(ಫೆ.12):  ಬೆಳೆ ಹಾನಿಗೆ ರಾಜ್ಯ ಸರ್ಕಾರ(Government of Karnataka) ಹೆಚ್ಚುವರಿಯಾಗಿ ಘೋಷಿಸಿದ್ದ ಪರಿಹಾರ ಬಿಡುಗಡೆಯಾಗಿದ್ದು, ಅರ್ಹ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯದ(Karnataka) 18.02 ಲಕ್ಷ ರೈತರಿಗೆ(Farmers) 1135.58 ಕೋಟಿ ರು. ಪಾವತಿ ಆರಂಭಗೊಂಡಿದೆ. ಜೊತೆಗೆ ಕಳೆದ ಬಾರಿ ಮಾಹಿತಿ ಅಪ್‌ಲೋಡ್‌ ಆಗಿ ಕೆಲ ಕಾರಣಗಳಿಂದ ಪರಿಹಾರ(Compensation) ಪಾವತಿ ಆಗದವರನ್ನೂ ಪರಿಗಣಿಸಿರುವುದು ವಿಶೇಷವಾಗಿದೆ.

ಬೆಳೆ ಹಾನಿಗೆ(Crop Loss) ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(NDRF)ಯಡಿ ಪಾವತಿಸುತ್ತಿದ್ದ ಹಣ ಕಡಿಮೆಯಾಯಿತು ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದರು.

ನುಡಿದಂತೆ ನಡೆದ ಸಿಎಂ: ರೈತರಿಗೆ ಬಂಪರ್ ಕೊಡುಗೆ ನೀಡಿದ ಬೊಮ್ಮಾಯಿ

ಎನ್‌ಡಿಆರ್‌ಎಫ್‌ನಡಿ ಹೆಕ್ಟೇರ್‌ ಒಣ ಭೂಮಿಗೆ ನೀಡುತ್ತಿದ್ದ 6800 ರು. ಪರಿಹಾರದ ಜೊತೆಗೆ ರಾಜ್ಯ ಸರ್ಕಾರದಿಂದ 6800 ರು., ಹೆಕ್ಟೇರ್‌ ನೀರಾವರಿ ಭೂಮಿಗೆ(Irrigated Land)  ಕೊಡುತ್ತಿದ್ದ 13,500 ಜೊತೆಗೆ 11,500 ಹಾಗೂ ತೋಟಗಾರಿಕಾ ಬೆಳೆಗಳಿಗೆ ನೀಡುತ್ತಿದ್ದ 18,000 ರುಪಾಯಿ ಜೊತೆಗೆ 10 ಸಾವಿರ ರುಪಾಯಿ ಹೆಚ್ಚುವರಿ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಗುರುವಾರದಿಂದಲೇ ರೈತರ ಬ್ಯಾಂಕ್‌ ಖಾತೆಗೆ ಪರಿಹಾರ ಸಂದಾಯವಾಗುತ್ತಿದೆ.

1135 ಕೋಟಿ ರು. ಜಮೆ ಪ್ರಕ್ರಿಯೆ ಆರಂಭ

ಯಾರಿಗೆ ಎಷ್ಟು? ತೀ ಹೆಕ್ಟೇರ್‌ಗೆ) ಬೆಳೆ ಹಿಂದೆ ಈಗ

ಒಣಭೂಮಿ 6800 13600
ನೀರಾವರಿ 13500 25000
ತೋಟಗಾರಿಕೆ 18000 28000

2.6 ಲಕ್ಷ ಬೆಳೆ ಹಾನಿ ಪರಿಹಾರ ಅರ್ಜಿ ತಿರಸ್ಕೃತ: ರೈತರ ಪರದಾಟ

ಕಳೆದ ವರ್ಷ ಬೆಳೆ ಹಾನಿ ಪರಿಹಾರ(Crop Loss Compensation) ಕೋರಿ ರಾಜ್ಯಾದ್ಯಂತ(Karnataka) ರೈತರಿಂದ ಸಲ್ಲಿಕೆಯಾಗಿದ್ದ ಬರೋಬ್ಬರಿ 2.60 ಲಕ್ಷಕ್ಕೂ ಅಧಿಕ ಅರ್ಜಿ ತಿರಸ್ಕಾರವಾಗಿದ್ದವು. ಸಣ್ಣ ಪುಟ್ಟ ತಾಂತ್ರಿಕ ಕಾರಣಕ್ಕೆಲ್ಲಾ ಅರ್ಜಿ ತಿರಸ್ಕರಿಸಲಾಗಿದ್ದು, ಈ ಬಗ್ಗೆ ಅರಿವಿಲ್ಲದ ರೈತರು(Farmers) ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಮಸ್ಯೆಯನ್ನು ರೈತರ ಗಮನಕ್ಕೆ ತಂದು ಪರಿಹರಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗದೆ ಮುಗುಮ್ಮಾಗಿರುವುದು ರೈತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆಧಾರ್‌ ಕಾರ್ಡ್‌ಗೆ(Aadhar Card) ಬ್ಯಾಂಕ್‌ ಖಾತಾ ಸಂಖ್ಯೆ ಜೋಡಣೆ ಆಗದಿದ್ದರೆ, ಜಮೀನು(Land) ವಿಭಾಗ ಅಥವಾ ಮಾರಾಟವಾಗಿದ್ದು ಹಳೆಯ ಪಹಣಿ ನೀಡಿದ್ದರೆ, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ(Survey) ನಡೆಸಿ ಬೆಳೆ ಹಾನಿ ಎಂದು ಉಲ್ಲೇಖಿಸಿರದ ಭಾಗಗಳ ರೈತರ ಅರ್ಜಿಗಳು ತಿರಸ್ಕಾರಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Flood Effect : ರೈತರ ಖಾತೆಗೆ ಪರಿಹಾರ ಹಣ ಜಮಾ

ಬೆಳೆ ಹಾನಿ ಪರಿಹಾರ ಪಡೆಯಲು ಪಹಣಿ, ಆಧಾರ್‌ ಕಾರ್ಡ್‌ ಮತ್ತಿತರ ದಾಖಲೆಗಳನ್ನು ನೀಡಿದ್ದ ರೈತರು, ಹಂತ ಹಂತವಾಗಿ ಪರಿಹಾರ ಹಣ ಬಿಡುಗಡೆ ಆಗುತ್ತಿರುವುದರಿಂದ ಅರ್ಜಿ ತಿರಸ್ಕಾರವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಗೋಜಿಗೇ ಹೋಗುತ್ತಿಲ್ಲ. ಆದರೆ ಗ್ರಾಮ ಲೆಕ್ಕಿಗರು ಅಥವಾ ಗ್ರಾಮ ಸಹಾಯಕರಾದರೂ, ಇಂತಹವರ ಅರ್ಜಿಗಳು ಈ ಕಾರಣಕ್ಕೆ ತಿರಸ್ಕೃತವಾಗಿವೆ, ಪರಿಹರಿಸಿಕೊಳ್ಳಿ ಎಂದು ಹೇಳದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿವೆ ಎಂದು ರೈತ ನಾಯಕರು ಆರೋಪಿಸಿದ್ದರು.

27,85,103 ಅರ್ಜಿ, 2,61,456 ತಿರಸ್ಕೃತ:

ಬೆಳೆ ಹಾನಿ ಪರಿಹಾರಕ್ಕಾಗಿ ಶುಕ್ರವಾರ ಸಂಜೆಯವರೆಗೆ ರಾಜ್ಯಾದ್ಯಂತ ಒಟ್ಟು 27,85,103 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 2,61,456 ಅರ್ಜಿ ತಿರಸ್ಕೃತವಾಗಿವೆ. 23,73,733 ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಿದ್ದಾರೆ. ಇನ್ನುಳಿದ ಅರ್ಜಿಗಳ ವಿಲೇ ಕಾರ್ಯ ಮುಂದುವರೆದಿದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 26209 ಅರ್ಜಿ ತಿರಸ್ಕೃತವಾಗಿವೆ. ನಂತರ ಚಿಕ್ಕಬಳ್ಳಾಪುರ 24846, ಕಲಬುರಗಿಯಲ್ಲಿ 21125 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್