* ಉಡುಪಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಹೇಳಿಕೆ
* ಉಪನ್ಯಾಸಕಿಯರೊಂದಿಗೂ ಗೌರವಯುತವಾಗಿ ನಡೆದುಕೊಳ್ಳುತ್ತಿರಲಿಲ್ಲ
* ವಿದ್ಯಾರ್ಥಿನಿಯರ ವರ್ತನೆ ಬಗ್ಗೆ ಪೋಷಕರಿಗೂ ಮಾಹಿತಿ ನೀಡಿದ್ದೇವೆ
ಉಡುಪಿ(ಫೆ.12): ಇಲ್ಲಿನ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಹಿಜಾಬ್(Hijab) ಧರಿಸಲು ಪಟ್ಟು ಹಿಡಿದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ 6 ಮಂದಿ ವಿದ್ಯಾರ್ಥಿಗಳು(Students) ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಉಪನ್ಯಾಸಕರೊಂದಿಗೂ ಗೌರವಯುತರಾಗಿ ನಡೆದುಕೊಳ್ಳುತ್ತಿರಲಿಲ್ಲ. ಅವರು ಕಾಲೇಜಿನಲ್ಲಿ ಇರ್ರೆಗ್ಯುಲರ್ ಸ್ಟೂಡೆಂಟ್ಸ್‌ಗಳಾಗಿದ್ದರು ಎಂದು ಪ್ರಾಂಶುಪಾಲ ರುದ್ರೇಗೌಡ ಆರೋಪಿದ್ದಾರೆ. ಇದೇ ವೇಳೆ ಡಿ.27ರಂದು ಈ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಪಟ್ಟು ಹಿಡಿದಿದ್ದರು ಎಂದು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿದ್ಯಾರ್ಥಿನಿಯರು ತರಗತಿಗಳಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ವಾರದಲ್ಲಿ 2 - 3 ದಿನ ಮಾತ್ರ ಕಾಲೇಜಿಗೆ ಬರುತಿದ್ದರು. ಕಾಲೇಜಿಗೆ(College) ರಜೆ ನೀಡಿದ್ದಾರೆ ಎಂದೆಲ್ಲಾ ಮನೆಯಲ್ಲಿ ಸುಳ್ಳು ಹೇಳಿ, ತರಗತಿಗೆ ಗೈರು ಹಾಜರಾಗುತಿದ್ದರು. ಉಪನ್ಯಾಸಕಿಯರೊಂದಿಗೂ ಗೌರವಯುತವಾಗಿ ನಡೆದುಕೊಳ್ಳುತ್ತಿರಲಿಲ್ಲ. ಅವರ ಬಗ್ಗೆ ವರ್ತನೆ ಬಗ್ಗೆ ಪೋಷಕರಿಗೂ ಮಾಹಿತಿ ನೀಡಿದ್ದೇವೆ ಎಂದು ಪ್ರಾಂಶುಪಾಲರು ಹೇಳಿದರು.
undefined
Hubballi: ಹಿಜಾಬ್-ಕೇಸರಿ ಶಾಲು ವಿವಾದ, ಸಭೆ ಕರೆಯಿರಿ: ಸಭಾಪತಿ ಹೊರಟ್ಟಿ
ಅಕ್ಟೋಬರ್‌ನಲ್ಲಿ ಕಾಲೇಜಿನ ಅನುಮತಿ ಇಲ್ಲದೇ ಕೆಲವು ವಿದ್ಯಾರ್ಥಿಗಳು ಎಬಿವಿಪಿ(ABVP) ಪ್ರತಿಭಟನೆಯಲ್ಲಿ(Protest) ಭಾಗವಹಿಸಿದ್ದರು. ಅವರಲ್ಲಿ ಈ 6 ವಿದ್ಯಾರ್ಥಿನಿಯರು ಇದ್ದರು. ಅಂದು ಆ ಎಲ್ಲ ವಿದ್ಯಾರ್ಥಿನಿಯರ ಹಾಜರಿಯನ್ನು ರದ್ದು ಮಾಡಿದ್ದೇವೆ. ನಾವು ಯಾವ ತಾರತಮ್ಯವನ್ನೂ ಮಾಡಿಲ್ಲ ಎಂದರು.
ಮನವೊಲಿಸಲು ಪ್ರಯತ್ನಿಸಿದ್ದೆ:
ನಂತರ ಡಿ.27ರಂದು 12 ಮುಸ್ಲಿಂ(Muslim) ಹುಡುಗಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು(Classes) ಬೇಡಿಕೆಯಿಟ್ಟರು. ಅವತ್ತೇ ನಾನು ಈ ಅಶಿಸ್ತಿಗೆ ಅವಕಾಶ ಇಲ್ಲ ಎಂದು ಹೇಳಿದ್ದೆ. ಅವರಿಗೆ ಮತ್ತು ಪೋಷಕರಿಗೆ 2 ಗಂಟೆಗಳ ಕಾಲ ಮನವೊಲಿಸಲು ಪ್ರಯತ್ನಿಸಿದ್ದೆ. ಆದರೆ ಅವರಲ್ಲಿ 6 ವಿದ್ಯಾರ್ಥಿನಿಯರು ಒಪ್ಪಲಿಲ್ಲ. ಕೊನೆಗೆ ಹಿಜಾಬ್ ಹಾಕಿ ಕ್ಯಾಂಪಸ್‌ನೊಳಗೆ ಬರಬಹುದು. ಆದರೆ 9.30ಕ್ಕೆ ತರಗತಿ ಪ್ರವೇಶಿಸಿ, ಹಿಜಾಬ್ ತೆಗೆಯಬೇಕು ಎಂದು ಹೇಳಿದ್ದೆವು. ಆದರೆ ಅವರು ತರಗತಿ ಒಳಗೂ ಹಾಕುತ್ತೇವೆ ಎಂದರು. ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಪ್ರಾಂಶುಪಾಲರು ವಿವರಣೆ ನೀಡಿದ್ದಾರೆ.
ಈಗಲೂ ಅವರು ನಮ್ಮ ಮಕ್ಕಳೇ:
ಆದರೆ ಅವರೀಗ ನಮ್ಮ ಮೇಲೆನೇ ಆರೋಪ ಮಾಡುವ ಮಟ್ಟಿಗೆ ಬೆಳೆದಿದ್ದಾರೆ ಅನ್ನೋದು ಬೇಸರದ ಸಂಗತಿ. ನಮ್ಮ ವಿರುದ್ಧ ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೂ ಅವರ ಬಗ್ಗೆ ನಾನು ಕೆಟ್ಟ ಭಾವನೆ ಹೊಂದಿಲ್ಲ. ಆದರೆ ಕನಿಕರ, ಅನುಕಂಪ ಇದೆ. ಈಗಲೂ ಅವರು ನಮ್ಮ ಮಕ್ಕಳು ಅಂತಲೇ ಭಾವಿಸುತ್ತೇನೆ. ಕಾಲೇಜಿಗೆ ಬನ್ನಿ, ಶಿಸ್ತು ನಿಯಮ ಪಾಲಿಸಿ, ಶಿಕ್ಷಣ ಪಡೆಯಿರಿ ಎಂದೇ ಹೇಳುತ್ತೇನೆ ಎಂದರು.
ಹಿಜಾಬ್ ವಿವಾದದ ನಡುವೆ ಮಂಗಳೂರಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್
ಮಂಗಳೂರು: ಈ ಹಿಂದೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಮಾಜ್ (Namaz) ಗೆಂದು ಒಂದು ಕೊಠಡಿ ಮೀಸಲಿಡಲಾಗಿದೆ ಎನ್ನವು ಸುದ್ದಿ ವೈರಲ್ ಆಗಿತ್ತು. ಹಿಜಾಬ್ ವಿವಾದದ ನಡುವೆ ಶಾಲೆಯಲ್ಲಿ (School) ವಿದ್ಯಾರ್ಥಿಗಳು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ (Viral Video) ಆಗಿದೆ.
Hijab Row:ಹಿಜಾಬ್ ಅಡಿ ಮುಸ್ಲಿಂ ಮಹಿಳೆಯರ ಸಮಾಧಿ: ಕೇರಳ ಗವರ್ನರ್
ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಶಾಲೆಯ ಮಕ್ಕಳು ನಮಾಜ್ ಮಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ಮೂರು ವಾರಗಳಿಂದ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದಾರೆ. 6 ನೇ ಮತ್ತು 7 ನೇ ತರಗತಿ ಮಕ್ಕಳು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ನಮಾಜ್ ಮಾಡುತ್ತಿದ್ದರೂ ಶಾಲಾ ಸಿಬ್ಬಂದಿ ಗಮನ ಹರಿಸಿಲ್ಲ ಎನ್ನಲಾಗಿದೆ.
ಕಾಲೇಜಿಗೆ ರಜಾ:
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ರಜೆಯನ್ನು ಮುಂಜಾಗ್ರತಾ ಕ್ರಮವಾಗಿ ಫೆ.16ರವರೆಗೂ ಮುಂದುವರಿಸಲಾಗಿದೆ ಸರ್ಕಾರ (Karnataka Govt) ಅಧಿಕೃತ ಆದೇಶವನ್ನು ನೀಡಿದ್ದು ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.