ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ; ಐಟಿ ಇಲಾಖೆ ಮೂರು ದಿನಗಳ ವಿಚಾರಣೆಗೆ ಕೋರ್ಟ್ ಅನುಮತಿ

Published : Jun 11, 2025, 12:24 PM IST
Ranya rao gold smuggling case update today

ಸಾರಾಂಶ

ಚಂದನವನದ ನಟಿ ರನ್ಯಾ ರಾವ್ ವಿರುದ್ಧದ 14 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಿದೆ. ಐಟಿ ಇಲಾಖೆ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಅನುಮತಿ ನೀಡಿದ್ದು, ಜೂನ್ 11 ರಿಂದ 13ರ ತನಕ ವಿಚಾರಣೆ ನಡೆಯಲಿದೆ.

ಬೆಂಗಳೂರು (ಜೂ. 11): ಚಂದನವನದ ನಟಿ ರನ್ಯಾ ರಾವ್ ವಿರುದ್ಧದ 14 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆಕೆಯ ವಿಚಾರಣೆಗೆ ಆದೇಶ ನೀಡಿದೆ. ಐಟಿ (ಆದಾಯ ತೆರಿಗೆ) ಇಲಾಖೆ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಅನುಮತಿ ನೀಡಿದ್ದು, ಜೂನ್ 11 ರಿಂದ 13ರ ತನಕ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿಚಾರಣೆ ನಡೆಸಲು ಕಾನೂನು ಹಸಿರು ನಿಶಾನೆ ತೋರಿದೆ.

DRI ಬಲೆಗೆ ಸಿಕ್ಕಿದ ನಟಿ:

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಏರ್‌ಪೋರ್ಟ್‌ನಲ್ಲಿ ಡಿಆರ್‌ಐ (DRI) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಆಕೆಯ ಬಳಿ ಸುಮಾರು 14 ಕೆಜಿ ತೂಕದ, ಸುಮಾರು ₹12 ಕೋಟಿ ಮೌಲ್ಯದ ಬಂಗಾರವನ್ನು ಅಕ್ರಮವಾಗಿ ಸಾಗಿಸುತ್ತಿದ್ದುದಾಗಿ ಆರೋಪಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರಿಸುತ್ತಿರುವ ಐಟಿ ಇಲಾಖೆ, ಬಂಗಾರದ ಖರೀದಿಗೆ ಬಳಸಲಾದ ಹಣದ ಮೂಲಗಳ ಕುರಿತು ನಟಿಯನ್ನ ಪ್ರಶ್ನಿಸಲು ಕೋರ್ಟ್ ಅನುಮತಿ ಪಡೆದಿದೆ.

ಜೈಲಿನಲ್ಲೇ ನಡೆಯಲಿರುವ ವಿಚಾರಣೆ:

ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರನ್ಯಾ ರಾವ್ ಅವರನ್ನು ಕಾರಾಗೃಹದಲ್ಲಿಯೇ ವಿಚಾರಣೆ ನಡೆಸಲು ಐಟಿ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಧಿಕಾರಿಗಳಾದ ಮಹಿಳಾ ಇನ್‌ಸ್ಪೆಕ್ಟರ್ ಶ್ವೇತಾ ಮತ್ತು ಇನ್‌ಸ್ಪೆಕ್ಟರ್ ರವಿಪಾಲ್ ಅವರ ನೇತೃತ್ವದಲ್ಲಿ ಈ ವಿಚಾರಣೆಯಾಗಲಿದೆ. ಅಲ್ಲದೆ, ವಿಚಾರಣೆಯ ಎಲ್ಲಾ ಸಂಭಾಷಣೆ ಮತ್ತು ಪ್ರಕ್ರಿಯೆಗಳನ್ನು ವಿಡಿಯೋ ರೆಕಾರ್ಡ್ ಮಾಡಬೇಕೆಂಬುದಾಗಿ ಕೋರ್ಟ್ ಸೂಚನೆ ನೀಡಿದೆ.

ಅಕ್ರಮ ಹಣದ ಮಾಹಿತಿ ಹೊರ ಬೀಳುವ ಭೀತಿ: ಈ ವಿಚಾರಣೆಯ ಮೂಲಕ ರನ್ಯಾ ರಾವ್ ಹೇಗೆ ಬಂಗಾರ ಖರೀದಿಗೆ ಹಣ ಸಂಗ್ರಹ ಮತ್ತು ಪಾವತಿ ಮಾಡುತ್ತಿದ್ದರು? ಆ ಹಣದ ಮೂಲ ಎಲ್ಲಿ? ಇತ್ಯಾದಿ ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌