ಗ್ಯಾರಂಟಿಗಳು ಬಡವರ ಪಾಲಿಗೆ ವರದಾನ: ನಟ ಪ್ರಕಾಶ್‌ ರಾಜ್‌

By Kannadaprabha News  |  First Published Aug 9, 2023, 11:59 AM IST

ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಇರಬೇಕೇ ಹೊರತು ಧರ್ಮದ ಪ್ರಚಾರಕ್ಕಲ್ಲ. ಸರ್ಕಾರದ ಗ್ಯಾರಂಟಿಗಳು ಜನರ ಕಲ್ಯಾಣಕ್ಕಾಗಿಯೇ ಇರುತ್ತವೆ. ಅವು ಬಡವರ ಪಾಲಿಗೆ ವರದಾನವಾಗಿರುತ್ತವೆ ಎಂದು ನಟ, ಚಿಂತಕ ಪ್ರಕಾಶ್‌ ರಾಜ್‌ ಅಭಿಪ್ರಾಯಪಟ್ಟರು. 


ಶಿವಮೊಗ್ಗ (ಆ.09): ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಇರಬೇಕೇ ಹೊರತು ಧರ್ಮದ ಪ್ರಚಾರಕ್ಕಲ್ಲ. ಸರ್ಕಾರದ ಗ್ಯಾರಂಟಿಗಳು ಜನರ ಕಲ್ಯಾಣಕ್ಕಾಗಿಯೇ ಇರುತ್ತವೆ. ಅವು ಬಡವರ ಪಾಲಿಗೆ ವರದಾನವಾಗಿರುತ್ತವೆ ಎಂದು ನಟ, ಚಿಂತಕ ಪ್ರಕಾಶ್‌ ರಾಜ್‌ ಅಭಿಪ್ರಾಯಪಟ್ಟರು. ಇಲ್ಲಿನ ಮಥುರಾ ಪ್ಯಾರಾಡೈಸ್‌ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸರ್ಕಾರದ ಗ್ಯಾರಂಟಿಗಳು ಬಡವರ ಪಾಲಿನ ಭಾಗ್ಯಗಳಾಗಿವೆ. ಮನೆಯಿಂದ ಹೊರಜಗತ್ತನ್ನು ನೋಡದ ನಮ್ಮ ಎಷ್ಟೊ ಹೆಣ್ಣು ಮಕ್ಕಳು ಈಗ ಓಡಾಡುತ್ತಿದ್ದಾರೆ ಎಂದರೆ ಸಂತೋಷದ ವಿಷಯವಲ್ಲವೇ. 

ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವವರಿಗೆ ಒಂದು ತುತ್ತು ಅನ್ನ ನೀಡುವುದು ನ್ಯಾಯವಲ್ಲವೇ? ಈ ಯೋಜನೆಗಳು ಕೂಡ ನಮ್ಮ ತೆರಿಗೆಯಿಂದಲೇ ರೂಪಿತವಾಗಿವೆ. ಇದಕ್ಕಾಗಿ ಹೊಟ್ಟಉರಿಬೇಡ. ಮನುಷ್ಯ ಪ್ರೇಮದಿಂದ ಇವುಗಳನ್ನು ಸ್ವಾಗತಿಸೋಣ. ಆದರೆ, ಸರಿಯಾಗಿ ಜಾರಿಯಾಗದಿದ್ದಾಗ ಪ್ರಶ್ನೆ ಮಾಡುವುದು ಸರಿ ಎಂದರು. ಗ್ಯಾರಂಟಿ ಯೋಜನೆಗಳಿಂದ ದೇಶದ ಆರ್ಥಿಕ ಸ್ಥಿತಿ ನಾಶವಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಇಡೀ ದೇಶದ ಆರ್ಥಿಕತೆ ಇಳಿಮುಖವಾಗಿರುವುದು ಯಾವ ಕಾರಣಕ್ಕೆ? ಇದು ಕೇವಲ ರಾಜಕಾರಣದ ಹೇಳಿಕೆಯೇ ಹೊರತು ಸತ್ಯದ ಹೇಳಿಕೆಯಲ್ಲ. ಕೇಂದ್ರದ ಹಲವು ಯೋಜನೆಗಳು ಜಾರಿಯಲ್ಲಿವೆ. 

Latest Videos

undefined

ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ

ಪ್ರಧಾನಿಯೇನೂ ದೇವರಲ್ಲ. ಅವರು ಐದು ವರ್ಷ ಮಾತ್ರ ಅಧಿಕಾರದಲ್ಲಿರುತ್ತಾರೆ. ಜನಸಾಮಾನ್ಯರು ಕೂಡ ಪ್ರಶ್ನೆ ಮಾಡಬಹುದು ಎಂದರು. ಹಿಂಸೆಗೆ ಯಾವುದೇ ಧರ್ಮ ಇಲ್ಲ. ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ, ಸರ್ಕಾರದ ಧರ್ಮದ ಹುಚ್ಚುತನಗಳು ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತವೆ. ನಮ್ಮ ಮನೆಯ ಹೆಣ್ಣು ಮಕ್ಕಳು ತಲ್ಲಣಗಳಿಗೆ ಒಳಗಾಗುತ್ತಿದ್ದಾರೆ. ಎಲ್ಲರೂ ಎಲ್ಲರನ್ನೂ ಪ್ರೀತಿಸುವುದೇ ಧವರ್‍. ನಮಗೆ ಜಗಳ, ದ್ವೇಷ ಬೇಡ. ಮನಸ್ಸಿಗೆ ಆದ ಗಾಯಗಳು ಮಾಯಬಹುದು. ಆದರೆ, ಸಮಾಜಕ್ಕೆ ಆದ ಗಾಯಗಳನ್ನು ವಾಸಿ ಮಾಡುವುದು ತುಂಬಾ ಕಷ್ಟಎಂದರು.

ವಕೀಲರ ಸಮಾವೇಶದಿಂದ ದೂರ ಸರಿದ ಡಿ.ಕೆ.ಶಿವಕುಮಾರ್: ಯಾಕೆ ಗೊತ್ತಾ?

ಪಠ್ಯಪುಸ್ತಕ ವಿವಾದ ಈಗಿನದಲ್ಲ. ಅದು ಒಮ್ಮೆ ಬದಲಾದ ಕಾರಣಕ್ಕಾಗಿ ಈಗ ಮತ್ತೆ ಪ್ರಶ್ನೆ ಮಾಡಲಾಗುತ್ತಿದೆ. ಪಠ್ಯಗಳನ್ನು ನಿರೂಪಿಸಬೇಕಾದವರು ರಾಜಕಾರಣಿಗಳಲ್ಲ. ರಾಜಕಾರಣಿಗಳು ಅವರಿಗೆ ಬೇಕಾದಂತೆ ವಿಷಯಗಳನ್ನು ವಿಷ ಹಾಕಿ ಉಣಬಡಿಸುತ್ತಾರೆ. ಯಾವುದೇ ಸರ್ಕಾರ ರಾಜಕೀಯ ಪಕ್ಷಗಳು ಪಠ್ಯ ಪುಸ್ತಕಗಳನ್ನು ಕೂಡ ಧರ್ಮದ ಬೋಧನೆಗೆ ಬಳಸುವುದಲ್ಲ ಅಥವಾ ಕೇಸರಿ ಬಣ್ಣ ಬಳಿಯುವುದೂ ಅಲ್ಲ. ಅದು ಮಕ್ಕಳ ವಿಕಾಸಕ್ಕೆ ಕಾರಣವಾಗಬೇಕೇ ಹೊರತು ವಿನಾಶಕ್ಕಲ್ಲ ಎಂದರು. ಸಂವಾದ ಕಾರ್ಯಕ್ರಮದಲ್ಲಿ ವಿವೇಕ ಸಂಸ್ಥೆಯ ಅನನ್ಯ ಶಿವು, ಕೆ.ಎಲ್‌. ಅಶೋಕ್‌, ರೈತಮುಖಂಡ ಎಚ್‌.ಆರ್‌.ಬಸವರಾಜಪ್ಪ, ಹಾಲೇಶಪ್ಪ, ಆರ್‌.ಕೆ. ಕುಮಾರ್‌ ಇದ್ದರು.

click me!