
ಬೆಂಗಳೂರು (ನ.4): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಕ್ವಾರಂಟೈನ್ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ, ಚಾರ್ಜ್‌ಶೀಟ್ ನಂತರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾನೆ. ನಿನ್ನೇ ದೋಷಾರೋಪ ನಿಗದಿ ಪ್ರಕ್ರಿಯೆ ಮುಗಿದು, ಟ್ರಯಲ್ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಮುಂದೊಂದು ದಿನ ಜಾಮೀನು ಸಿಕ್ಕಿ ಹೊರಬರುವ ನಿರೀಕ್ಷೆಯಲ್ಲಿ ದರ್ಶನ್ ಅಂಡ್ ಗ್ಯಾಂಗ್ ತಾಳ್ಮೆಯಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಬಾಡಿಹೋದ ಮುಖ, ಆತಂಕದ ಕಣ್ಣು.. ಜೈಲಲ್ಲಿ ಸೊರಗಿ ಸುಣ್ಣವಾದ ದಾಸ!
ನಿನ್ನೆ ಸಂಜೆ 5.40ರ ಸುಮಾರಿಗೆ ಕೋರ್ಟ್‌ನಿಂದ ಮತ್ತೆ ಜೈಲು ಸೇರಿದ್ದ ದರ್ಶನ್, ಪವಿತ್ರಾ ಮತ್ತು ದರ್ಶನ್ ಬೇರೆ ಬೇರೆ ವಾಹನಗಳಲ್ಲಿ ಜೈಲು ಸೇರಿದರು. ಕೋರ್ಟ್‌ಗೆ ಹೋಗಿ ಬಂದು ಆಯಾಸಗೊಂಡಿದ್ದ ದರ್ಶನ್, ರಾತ್ರಿ 9.30ಕ್ಕೆಲ್ಲ ಊಟ ಮಾಡಿ ಬೇಗನೇ ನಿದ್ರೆಗೆ ಜಾರಿದರು. ಜೈಲಿನ ಊಟ ಸೇರದೆ, ನಿದ್ರೆ ಇಲ್ಲದೆ ಸೊರಗಿ ಹೋಗಿರುವ ದಾಸ, ಈಗ ಕೊಂಚ ರಿಲ್ಯಾಕ್ಸ್‌ನಲ್ಲಿದ್ದಾರೆ. ಬೆಳಿಗ್ಗೆ 6 ಗಂಟೆಗೆ ನಿದ್ರೆಯಿಂದ ಎದ್ದು ಕೆಲ ಹೊತ್ತು ಬ್ಯಾರಕ್‌ನಲ್ಲಿಯೇ ವಾಕಿಂಗ್ ಮಾಡಿ ಬಿಸಿ ನೀರು ಕುಡಿದು ಸೆಲ್‌ನಲ್ಲಿ ರೆಸ್ಟ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ವಿರುದ್ಧ ದೋಷಾರೋಪ ನಿಗದಿ ದಿನವೇ ಎರಡು ಮಹತ್ವದ ಬೆಳವಣಿಗೆ
ನಿನ್ನೆ ಕೋರ್ಟ್‌ನಲ್ಲಿ ಡಿ-ಗ್ಯಾಂಗ್ ಜೊತೆ ಮಾತನಾಡಿರುವ ದರ್ಶನ್, 'ಜಾಮೀನು ಸಿಗುತ್ತದೆ, ತಾಳ್ಮೆಯಿಂದ ಇರೋಣ' ಎಂದು ಸಹಚರರಿಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ಕೋರ್ಟ್‌ನಲ್ಲಿ ಪವಿತ್ರಾ ಗೌಡ ಮತ್ತು ದರ್ಶನ್ ಮಾತನಾಡಿದ್ದು, ಎಲ್ಲರಿಗೂ ಧೈರ್ಯದಿಂದ ಇರುವಂತೆ ಹೇಳಿರುವ ದರ್ಶನ್, ಸಹಬಂಧಿಗಳ ಜೊತೆಗೆ ಸೆಲ್‌ನಲ್ಲಿ ಮಾತನಾಡಿಕೊಂಡಿದ್ದಾರೆ. ಒಟ್ನಲ್ಲಿ ದೋಷಾರೋಪ ನಿಗದಿ ಮುಗಿದು ಟ್ರಯಲ್ ಡೇಟ್ ನಿಗದಿ ಹಿನ್ನೆಲೆಯಲ್ಲಿ ಡಿ-ಗ್ಯಾಂಗ್ ಕೊಂಚ ರಿಲ್ಯಾಕ್ಸ್‌ನಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ