ಕಾವೇರಿ ಹೋರಾಟಕ್ಕೆ ಬರಲಿಲ್ಲವೆಂದು ಕಿಡಿಕಾರಿದ ಕನ್ನಡಿಗರೇ, ನೀವು ತಮಿಳು ಸಿನಿಮಾ ನೋಡ್ತೀರಿ. ಆದ್ರೆ, ಹೋರಾಟಕ್ಕೆ ಕನ್ನಡ ಕಲಾವಿದರು ಬರಬೇಕಾ? ಎಂದು ನಟ ದರ್ಶನ್ ಕಿಡಿಕಾರಿದ್ದಾರೆ.
ಮೈಸೂರು (ಸೆ.25): ಕಾವೇರಿ ಹೋರಾಟಕ್ಕೆ ಕರ್ನಾಟಕದ ಸಿನಿಮಾ ನಟರು ಬರಲಿಲ್ಲವೆಂದು ರೈತೆರು ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿದ್ದರು. ಮೊನ್ನೆ ಬಿಡುಗಡೆಯಾದ ತಮಿಳು ಸಿನಿಮಾ ನೋಡಿ 36 ಕೋಟಿ ರೂ. ಕೊಟ್ಟಿದ್ದೀರಿ. ಆದರೆ, ಕನ್ನ ಸಿನಿಮಾ ನೋಡಲಿಲ್ಲಿ. ನೀವುಗಳು ಕನ್ನಡ ಸಿನಿಮಾ ನೋಡಿದ್ರೆ ಮಾತ್ರ ಕನ್ನಡ ಕಲಾವಿದರು ಬರ್ತಾರೆ ಎಂದು ನಟ ದರ್ಶನ್ ತೂಗುದೀಪ ಕಿಡಿ ಕಾರಿದ್ದಾರೆ.
ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಕಾವೇರಿ ಹೋರಾಟದ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ. ಕಳೆದ ದಿನಗಳಿಂದ ಕಲಾವಿದರು ಹೋರಾಟಕ್ಕೆ ಬರಲಿಲ್ಲ ಅಂತಿದ್ದಾರೆ. ಮೊನ್ನೆ ಮೊನ್ನೆ ತಮಿಳು ಸಿನಿಮಾ ರಿಲೀಸ್ ಆಯ್ತು, ಅದನ್ನು ವಿತರಕರೊಬ್ಬರು 6 ಕೋಟಿ ರೂ.ಗೆ ಸಿನಿಮಾ ತೆಗೆದುಕೊಂಡರು. ಇದೇ ಸಿನಿಮಾದಿಂದ 36 ರಿಂದ 37 ಕೋಟಿ ರೂ. ಆದಾಯವನ್ನು ಕರ್ನಾಟಕದಲ್ಲಿ ಗಳಿಕೆ ಮಾಡಿದ್ದಾರೆ. ಇದನ್ನು ತಮಿಳಿನವರು ನೋಡಿದ್ರಾ ಸ್ವಾಮಿ, ಕನ್ನಡದವರು ತಾನೇ ನೋಡಿದ್ದಾರೆ. ಯಾವತ್ತೂ ಏನಾದ್ರು ಮಾಡಿ ನೂರಾರು ಕೋಟಿ ರೂ.ಗಳನ್ನು ಅನ್ಯ ಭಾಷೆಯ ಸಿನಿಮಾದವರಿಗೆ ಕೊಡುತ್ತಿದ್ದೀರಿ. ಯಾಕೆ ಕನ್ನಡ ಸಿನಿಮಾಗೆ ಕೊಡುವುದಿಲ್ಲ ನೀವು? ನೀವು ಕನ್ನಡ ಸಿನಿಮಾಗೆ ಕೊಟ್ಟರೆ ಮಾತ್ರ ಕನ್ನಡ ಕಲಾವಿದರು ಹೋರಾಟಕ್ಕೆ ಬರ್ತಾರೆ ಸ್ವಾಮಿ ಎಂದು ಖಾರವಾಗಿ ನುಡಿದರು.
ಕೆಆರ್‌ಎಸ್ ಜಲಾಶಯ ಪರಿಶೀಲಿಸಿ ಕೇಂದ್ರವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿ: ಮಾಜಿ ಪ್ರಧಾನಿ ದೇವೇಗೌಡರ ಆಗ್ರಹ
ಯಾವುದೋ ಒಂದು ತಮಿಳು ಸಿನಿಮಾಗೆ ಅಥವಾ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವುದು ಒಂದು ದೊಡ್ಡತನ ಎಂದುಕೊಳ್ಳೋಣ. ಆದರೆ, ಹೋರಾಟಕ್ಕೆ ಬರಲಿಲ್ಲವೆಂದು ಹೇಳಿದಾಗ ಯಾಕೆ ನೀವು ಅವರ ಬಾಯಿ ಬಂದ್ ಮಾಡಲಿಲ್ಲ ನೀವು. ಯಾಕೆ ದರ್ಶನ್, ಸುದೀಪ್, ಶಿವಣ್ಣ, ಯಶ್, ಅಭಿ... ಇನ್ನೊಬ್ರು, ಮತ್ತೊಬ್ರು ಅಷ್ಟೇ ಕಾಣಿಸೋದಾ.? ಯಾಕೆ ನೀವು 36 ಕೋಟಿ ರೂ. ಕೊಟ್ರಲ್ಲಾ ಅವರು ಯಾರು ಕಾಣಿಸೋದಿಲ್ವಾ? ಯಾಕೆ ಅವರನ್ನು ಕರೆಯೋದಲ್ವಾ? ಯಾಕೆ ನಾವು ಗುದ್ದಾಡ್ತೊರೋದಕ್ಕೆ ಯಾಕೆ ಹೇಳಿ? ನೋಡಿದ್ರಾ ಎಲ್ಲರೂ ಸುಮ್ಮನಾಗಿಬಿಟ್ರಿ ನೀವು. ನಾನು ಮಾತನಾಡಿದ್ರೆ ಕೆಟ್ಟದಾಗಿರುತ್ತದೆ, ಸಾಫ್ಟ್ ಆಗಿದುತ್ತದೇ, ಮಾನ ಮರ್ಯಾದೆ ಇಲ್ಲವೆಮದು ಹೇಳ್ತೀರಾ ಎಂದು ಕಿಡಿಕಾರಿದರು.
ಹಳ್ಳಿಕಾರ್ ತಳಿ ರಾಸುಗಳನ್ನು ಖರೀದಿಸಲು ದರ್ಶನ್ ಮನವಿ: ಹಳ್ಳಿಕಾರ್ ರಾಸುಗಳು ದೇಶೀಯ ತಳಿಗಳಾಗಿದ್ದು, ಇವುಗಳನ್ನು ಉಳಿಸಿ ಬೆಳೆಸಬೇಕು. ನಾವು ಎಲ್ಲೇ ಹೋದರು ಹಳ್ಳಿಕಾರ್ ತಳಿಗಳನ್ನು ನಮ್ಮ ಭಾರತದ ತಳಿಗಳೆಂದು ಹೇಳಿಕೊಳ್ಳಲು ಬಹಳಷ್ಟು ಹೆಮ್ಮಯಾಗುತ್ತದೆ ಎಂದು ಚಲನಚಿತ್ರ ನಟ ದರ್ಶನ್ ತಿಳಿಸಿದರು. ಪಟ್ಟಣದಲ್ಲಿ ಗಂಗಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅಶ್ವಿನಿ ಚಾರಿಟಬಲ್ ಟ್ರಸ್ಟ್‌ನ ಡಾ. ರಾಹುಲ್ ಗೌಡ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ನೈಸರ್ಗಿಕ ಕೃಷಿಕರಿಗೆ 100 ಹಳ್ಳಿಕಾರ್ ತಳಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಸುಗಳನ್ನು ಪಡೆದುಕೊಳ್ಳುವುದು ಮುಖ್ಯವಲ್ಲ. ಪಡೆದವರು ಆ ತಳಿಗಳನ್ನು ಅಭಿವೃದ್ಧಿಪಡಿಸಬೇಕೆಂದು, ಸೂಕ್ತ ರೀತಿಯಲ್ಲಿ ರಾಸುಗಳನ್ನು ಪಾಲನೆ ಮಾಡಬೇಕೆಂದು ಕಿವಿಮಾತು ಹೇಳಿದರು.
ಕಾವೇರಿ ಹೋರಾಟಕ್ಕೆ ಧುಮಿಕಿದ ಮೊದಲ ಕನ್ನಡ ನಟ ದರ್ಶನ್ ತೂಗುದೀಪ
ನೂರು ರಾಸುಗಳ ವಿತರಣೆ: ಚಿತ್ರನಟ ಅಭಿಷೇಕ್ ಅಂಬರೀಶ್ ಮಾತನಾಡಿ, ರಾಸುಗಳನ್ನು ನೀಡುವ ಕಾರ್ಯ ಬಹಳಷ್ಟು ಸಂತಸವನ್ನುಂಟು ಮಾಡಿದೆ. ಇಂದಿನ ನೂರು ರಾಸುಗಳ ವಿತರಣೆ ಮುಂದಿನ ದಿನಗಳಲ್ಲಿ ಸಾವಿರಾರು ಆಗಲಿ ಎಂದು ಅವರು ಶುಭ ಕೋರಿದರು. ಕಾರ್ಯಕ್ರಮದಲ್ಲಿ ಅಶ್ವಿನಿ ಚಾರಿಟಬಲ್ ಟ್ರಸ್ಟ್‌ಅಧ್ಯಕ್ಷ ಡಾ.ರಾಹುಲ್‌ಗೌಡ, ಶಾಸಕ ದರ್ಶನ್ ಪುಟ್ಟಣಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಬನ್ನೂರು ಕೃಷ್ಣಪ್ಪ ಮತ್ತಿತರಿದ್ದರು.