ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ನಟ ಚೇತನ್ ಇದೀಗ ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ರಾಜ್ಯಾದ್ಯಂತ ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಶಾಲೆಗಳಲ್ಲಿ ದೇವರು ಪೂಜೆ ಬೇಡ ಎಂಬ ಹೇಳಿಕೆ ನೀಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಬೀದರ್ (ಫೆ.19) ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ನಟ ಚೇತನ್ ಇದೀಗ ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ರಾಜ್ಯಾದ್ಯಂತ ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಶಾಲೆಗಳಲ್ಲಿ ದೇವರು ಪೂಜೆ ಬೇಡ ಎಂಬ ಹೇಳಿಕೆ ನೀಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಬೀದರ್‌ನಲ್ಲಿ ಈ ಬಗ್ಗೆ ಮಾತನಾಡಿದ ನಟ ಚೇತನ್, ಶಾಲೆಗಳಲ್ಲಿ ದೇವರ ಪೂಜೆ ಬೇಕಾಗಿಲ್ಲ. ಪೂಜೆ, ಪುನಸ್ಕಾರವೆಂಬ ಮೌಢ್ಯ ನಿಮ್ಮ ನಿಮ್ಮ ಮನೆ ದೇಗುಲಗಳಲ್ಲಿ ಇಟ್ಟುಕೊಳ್ಳಿ. ಶಾಲೆಗಳಲ್ಲಿ ಮುಖ್ಯವಾಗಿ ವೈಜ್ಞಾನಿಕತೆ ಪಾಲಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ವೈಜ್ಞಾನಿಕತೆಯಿಂದಲೇ ಸತ್ಯ, ವೈಜ್ಞಾನಿಕ ನಡುವೆ ಸತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಯಿ, ನರಿ ಬೊಗಳಿದರೆ ಇತಿಹಾಸ ಬದಲಾಗುವುದೆ? ನಟ ಜಗ್ಗೇಶ್ ಟ್ವೀಟ್ ವೈರಲ್
ಶಾಲೆಗಳಲ್ಲಾಗಲಿ,, ಸರ್ಕಾರಿ ಕಚೇರಿಗಳಲ್ಲಾಗಲಿ ಯಾವುದೇ ದೇವರ ಪೂಜೆ ಎಂಬ ಮೌಢ್ಯ ಬೇಕಾಗಿಲ್ಲ. ಅವೆಲ್ಲ ನಿಮ್ಮ ಮನೆಗಳಲ್ಲಿ ಆಚರಿಸಲು ನಿಮಗೆ ಹಕ್ಕಿದೆ ನಿಮ್ಮ ನಂಬಿಕೆಗಳು ಮನೆ, ಗುಡಿ-ಗುಂಡಾರದಲ್ಲಿ ಇಟ್ಟುಕೊಳ್ಳಿ. ನಮಗೆ ವೈಜ್ಞಾನಿಕ ಬೇಕು, ವೈಜ್ಞಾನಿಕತೆಯಿಂದಲೇ ಸಂವಿಧಾನ ಅರ್ಥ ಮಾಡಿಕೊಳ್ಳಬಹುದು. ವೈಜ್ಞಾನಿಕ ಗೊತ್ತಿಲ್ಲದೇ ಮೌಢ್ಯ-ಕಂದಾಚಾರ, ಮೂಡನಂಬಿಕೆ ಇದ್ದರೆ ಸಂವಿಧಾನ ಪೀಠಿಕೆ ಕಾರ್ಯರೂಪಕ್ಕೆ ತರಲು ಆಗಲ್ಲ ಎಂದಿದ್ದಾರೆ.
ಸಮಾಜದಲ್ಲಿ, ಶಾಲೆಗಳಲ್ಲಿ ಪೊಲೀಸ್, ಆಸ್ಪತ್ರೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ನಮಗೆ ಮೌಢ್ಯ, ಮೂಢನಂಬಿಕೆ, ದೇವರುಗಳು ಬೇಕಾಗಿಲ್ಲ, ವೈಜ್ಞಾನಿಕತೆ ಬೇಕು, ವೈಜ್ಞಾನಿಕತೆಯಿಂದ ಉತ್ತಮ ಭಾರತ ನಿರ್ಮಾಣ ಆಗುತ್ತದೆ. ಈ ಮೂಡನಂಬಿಕೆಗಳಿಂದಲೇ ಅಸಮಾನತೆ ಬಂದಿದೆ, ಬೇಧ ಭಾವ ವ್ಯವಸ್ಥೆ ನಮಗೆ ಅಸಮಾನತೆ ಮಾಡುತ್ತಿದೆ. ಸಮಾಜದಲ್ಲಿ ಸಮಾನತೆ ಬರಬೇಕು ಅಂದ್ರೆ ಅದು ವೈಜ್ಞಾನಿಕತೆಯಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯ ಅಸಮಾನತೆಯ ಸಂರಕ್ಷಣೆ, ಗಾಂಧಿವಾದ ಕಿತ್ತೊಗೆಯಲು ನಟ ಚೇತನ್ ಆಗ್ರಹ!
ಇನ್ನು ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟ ಚೇತನ, ಇವೆಲ್ಲ ಸಣ್ಣಪುಟ್ಟ ವಿಷಯಗಳು ಮುಖ್ಯ ಆಗಲ್ಲ. ನಮ್ಮ ವಿದ್ಯಾಮಂದಿರದಲ್ಲಿ ಸಂವಿಧಾನದ ಪಾಠ ಬೇಕು. ಜಾತ್ಯಾತೀತ, ಸಮಾನತೆ, ನ್ಯಾಯ ಧರ್ಮನಿರಪೇಕ್ಷತೆ ಎನ್ನುವುದು ನಮಗೆ ಬೇಕಾಗಿದೆ. ಅದುಬಿಟ್ಟು ಸಣ್ಣಪುಟ್ಟ ಹೆಸರು ಬದಲಾವಣೆಯಿಂದ ನಮಗೆ ಏನೂ ವ್ಯತ್ಯಾಸವಾಗೊಲ್ಲ. ನಾವು ಕುವೆಂಪು ಅನುಯಾನಿಗಳು, ಅವರು ಏನಾದರೂ ಉದ್ದೇಶ ಇಟ್ಟುಕೊಂಡು ಬದಲಾಯಿಸಿರಬೇಕು ಎಂದು ವಸತಿ ಶಾಲೆಗಳ ಘೋಷವಾಕ್ಯ ಬದಲಾವಣೆಯನ್ನ ಪರೋಕ್ಷವಾಗಿ ಸಮರ್ಥಿಸಿಕೊಂಡರು.