ಗದಗ ತೋಂಟದಾರ್ಯ ಮಠ V/s ಶಿರಹಟ್ಟಿ ಫಕೀರೇಶ್ವರ ಮಠ: ಏನಿದು ಭಾವೈಕ್ಯತೆ, ಕರಾಳದಿನ ಸಂಘರ್ಷ?

By Ravi JanekalFirst Published Feb 19, 2024, 2:46 PM IST
Highlights

ತೋಂಟದ ಸಿದ್ಧಲಿಂಗ ಸ್ವಾಮಿಗಳ ಜಯಂತಿಯನ್ನ ಭಾವೈಕ್ಯತೆಯ ದಿನವನ್ನಾಗಿ ಆಚರಿಸುತ್ತಿರೋದಕ್ಕೆ ಶಿರಹಟ್ಟಿ ಫಕೀರೇಶ್ವರ ಮಠದ ಫಕ್ಕೀರ ದಿಂಗಾಲೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗದಗ (ಫೆ.19) : ತೋಂಟದ ಸಿದ್ಧಲಿಂಗ ಸ್ವಾಮಿಗಳ ಜಯಂತಿಯನ್ನ ಭಾವೈಕ್ಯತೆಯ ದಿನವನ್ನಾಗಿ ಆಚರಿಸುತ್ತಿರೋದಕ್ಕೆ ಶಿರಹಟ್ಟಿ ಫಕೀರೇಶ್ವರ ಮಠದ ಫಕ್ಕೀರ ದಿಂಗಾಲೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಫಕೀರ ದಿಂಗಾಲೇಶ್ವರ ಶ್ರೀಗಳು, ಫೆಬ್ರವರಿ 21 ರಂದು ತೋಂಟದ ಸಿದ್ದಲಿಂಗ ಶ್ರೀಗಳ 75 ನೇ ಜಯಂತಿ ಆಚರಿಸಲಾಗ್ತಿದೆ. ಆ ದಿನವನ್ನ ತೋಂಟದಾರ್ಯಮಠದ ವತಿಯಿಂದ ಭಾವೈಕ್ಯತೆಯ ದಿನವನ್ನಾಗಿ ಆಚರಿಸಲಾಗ್ತಿದೆ. ಅಲ್ದೆ, ಭಾವೈಕ್ಯತೆಯ ಯಾತ್ರೆಯನ್ನ ಕೈಗೊಳ್ಳಲಾಗಿದೆ. ಆದರೆಕ ಸಿದ್ದಲಿಂಗ ಶ್ರೀಗಳಿಗೆ ಭಾವೈಕ್ಯತೆಯ ಹರಿಕಾರ ಎನ್ನುವ ಪದ ಅನ್ವಯವಾಗುವುದಿಲ್ಲ. ಫಕೀರೇಶ್ವರ ಮಠ ಭಾವೈಕ್ಯತೆಯ ಪರಂಪರೆ ಹೊಂದಿಗೆ. ತೋಂಟದಾರ್ಯ ಮಠ ವಿರಕ್ತ ಪರಂಪರೆಯನ್ನ ಹೊಂದಿರುವ ಮಠ. ಹೀಗಾಗಿ ಅವರ ಜಯಂತಿಯನ್ನ ಭಾವೈಕ್ಯತೆ ದಿನವನ್ನಾಗಿ ಆಚರಿಸುವುದು ಸರಿಯಲ್ಲ ಅಂತಾ ತಿಳಿಸಿದರು.

ಮಠಾಧೀಶರು, ನಾಯಕರ ಕೈಗೆ ಆಯುಧ ಕೊಡಬೇಕು ಎಂದ ದಿಂಗಾಲೇಶ್ವರ ಸ್ವಾಮೀಜಿ!

ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಿದ್ದಲಿಂಗ ಸ್ವಾಮಿಗಳ ಜಯಂತಿಯನ್ನ ಭಾವೈಕ್ಯತೆಯ ದಿನ ಅಂತಾ ಘೋಷಣೆ ಮಾಡಿದ್ರು. ಘೋಷಣೆ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿ ಬೊಮ್ಮಾಯಿ ಅವರ ನಡೆಯನ್ನ ಖಂಡಿಸಿದ್ದೆ. ಘೋಷಣೆಗಷ್ಟೇ ಸೀಮಿತವಾಗಿದ್ದ ಭಾವೈಕ್ಯತೆ ದಿನವನ್ನ ಈಗ ಮತ್ತೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಮಠದ ಆಡಳಿತ ಮಂಡಳಿಯೊಂದಿಗೂ ದೂರವಾಣಿ ಮೂಲಕ ಮಾತ್ನಾಡಿದ್ದೇನೆ. ಸಮರ್ಪಕ ಉತ್ತರ ಸಿಗದ ಹಿನ್ನೆಲೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದೇನೆ ಅಂತಾ ಶ್ರೀಗಳು ಹೇಳಿದ್ರು. ಒಂದು ವೇಳೆ ಭಾವೈಕ್ಯತಾ ದಿನ ಆಚರಿಸಿದರೆ ಶಿರಹಟ್ಟಿ ಮಠದ ಭಕ್ತರಿಂದ ಕರಾಳ ದಿನ ಆಚರಿಸಲಾಗುವುದು ಎಂದರು.

ಸ್ವಾಮಿಗಳದ್ದು ಎಷ್ಟರ ಮಟ್ಟಿಗೆ ಕಷ್ಟ ಐತಿ ಅಂದ್ರ; ರಾಜಕಾರಣಿ ಮನೆ ಕಸ ಬಳಿಯುವ ಆಳಿಗಿಂತ ಕಡೇ ಆಗೇತಿ: ದಿಂಗಾಲೇಶ್ವರಶ್ರೀ ಆಕ್ರೋಶ

ಭಾವೈಕ್ಯತೆಯ ಪರಂಪರೆ ಶಿರಹಟ್ಟಿಯ ಫಕೀರೇಶ್ವರ ಮಠದ್ದಾಗಿದೆ ಮಿನಾರ, ಗೋಪುರ ಹೊಂದಿರುವ ಮಠದ ಆಚಾರ ವಿಚಾರದಲ್ಲಿ ಭಾವೈಕ್ಯತೆ ಮೇಳೈಸಿದೆ. ಮಠದ ಪೀಠಾಧಿಪತಿಗಳಿಗೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಉಡುಗೆ ನೀಡುವ ಸಂಪ್ರದಾಯವಿದೆ. ಮಠದಲ್ಲಿ ಫಕ್ಕೀರ, ಈಶ್ವರರಿಬ್ಬರಿಗೂ ಆರಾಧನೆ ನಡೆಯುತ್ತೆ. ಶ್ರೀಮಠವನ್ನ ಬಿಟ್ಟು ಬೇರೆ ಮಠಕ್ಕೆ ಭಾವೈಕ್ಯತೆ ಪದ ಬಳಸುವುದು ಸಮಂಜಸ ಅಲ್ಲ ಅನ್ನೋದು ಮಠದ ಭಕ್ತರ ಒತ್ತಾಯ. ಒಂದ್ವೇಳೆ 21 ರಂದು ಭಾವೈಕ್ಯತೆ ದಿನ ಆಚರಿಸಿದ್ದಾದಲ್ಲಿ, ಮಠದ ಭಕ್ತರು ಗದಗ ನಗರದಲ್ಲಿ ಕರಾಳ ದಿನ ನಡೆಸಿ, ತೋಂಟದಾರ್ಯ ಮಠದ ವರೆಗೂ ಮೆರವಣಿಗೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಲಿಂಗೈಕ್ಯ ಸಿದ್ದಲಿಂಗ ಶ್ರೀಗಳು ಭಾಗಿಯಾದಾಗ ದಿಂಗಾಲೇಶ್ವರ ಶ್ರೀಗಳು ವಿರೋಧಿಸಿದ್ರು.. ಈಗ ಮತ್ತೆ ಮಠದ ಪರಂಪರೆ ವಿಚಾರವಾಗಿ‌ ಎರಡು ಮಠದ ನಡುವೆ ಸಂಘರ್ಷ ಏರ್ಪಡುವ ವಾತಾವರಣೆ ಸೃಷ್ಟಿಯಾಗಿದೆ.

click me!