
ಕುಶಾಲನಗರ (ಆ.4) : ಇಲ್ಲಿನ ಹಾರಂಗಿ ಅಣೆಕಟ್ಟು ಮುಂಭಾಗದಲ್ಲಿ ಪ್ರವಾಸಿಗರೊಬ್ಬರು ಸೆಲ್ಫೀ ತೆಗೆಯುವ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದು ನೀರುಪಾಲಾಗಿರುವ ಘಟನೆ ಗುರುವಾರ ನಡೆದಿದೆ.
ಬೆಂಗಳೂರಿನ ಉದ್ಯಮಿ ಸಂದೀಪ್ (40) ನೀರುಪಾಲಾಗಿರುವವರು. ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ನಾಲ್ವರು ಪ್ರವಾಸಿಗರು ಗೋಣಿಕೊಪ್ಪ, ಮಡಿಕೇರಿ ನಂತರ ಗುರುವಾರ ಸಂಜೆ ಹಾರಂಗಿ ಅಣೆಕಟ್ಟೆಗೆ ಭೇಟಿ ನೀಡಿದರು. ಅಣೆಕಟ್ಟೆಯ ಎದುರುಗಡೆ ಇರುವ ಸೇತುವೆಯಲ್ಲಿ ಸೆಲ್ಫೀ ತೆಗೆಯುವ ಸಂದರ್ಭ ಸಂದೀಪ್ ನದಿಗೆ ಬಿದ್ದಿರುವುದಾಗಿ ಅವರ ಸ್ನೇಹಿತರು ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಮತ್ತು ಅಗ್ನಿಶಾಮಕ ತಂಡ ಸಂದೀಪ್‌ಗಾಗಿ ಶೋಧ ನಡೆಸಲಾಯಿತು.
ಸೆಲ್ಫಿ ಗೀಳಿದ್ರೆ ಒಳ್ಳೇದೆ..'ಸ್ವಂತಿ' ಕ್ಲಿಕ್ಕಿಸಿ ಖುಷ್ ಖುಷಿಯಾಗಿರಿ
ಜಮೀನು ವಿಚಾರಕ್ಕೆ ಮಾರಾಮಾರಿ
ಕುದೂರು: ಜಮೀನು ವಿಚಾರವಾಗಿ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಕುದೂರು ಹೋಬಳಿಯ ಹೊನ್ನಾಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಗೋಮಾಳ ಜಮೀನನ್ನು ಪ್ರಶ್ನಿಸಿ ನಡು ರಸ್ತೆಯಲ್ಲಿಯೇ ಓರ್ವ ಪುರುಷ ಹಾಗೂ ಮೂವರು ಮಹಿಳೆಯರ ನಡುವೆ ಗಲಾಟೆ ನಡೆದಿದೆ.
ಜಮೀನು ವಿವಾದ: ಎರಡು ಕುಟುಂಬಗಳ ನಡುವೆ ಮಾರಾಮಾರಿ, ಕೊಲೆಯಲ್ಲಿ ಅಂತ್ಯ!
ಈ ಮಾರಾಮಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಿಂಗಾಯತ ಸಮುದಾಯದವರು ಹಲ್ಲೆ ಮತ್ತು ಜಾತಿನಿಂದನೆ ಮಾಡಿದ್ದಾರೆಂದು ಆರೋಪಿಸಿ ದಲಿತ ಸಮುದಾಯದವರು ದೂರು ಸಲ್ಲಿಸಿದರೆ, ವಿನಾಕಾರಣ ಮಹಿಳೆ ಮೇಲೆ ಹಲ್ಲೆ ಮಾಡಿರುವ ಕುರಿತಾಗಿ ದಲಿತ ಸಮುದಾಯದ ವಿರುದ್ಧ ಲಿಂಗಾಯತ ಸಮುದಾಯದವರು ಪ್ರತಿ ದೂರು ಸಲ್ಲಿಸಿದ್ದಾರೆ. ಸದ್ಯ ಎರಡೂ ಕಡೆಯ ಪ್ರಕರಣದ ಕುರಿತು ಕುದೂರು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ