ಸಿಎಂ ಸಿದ್ದರಾಮಯ್ಯಗೆ ಭಾವನಾತ್ಮಕ ಪತ್ರ ಬರೆದ ಬಾಲಕಿ; ಪತ್ರದಲ್ಲೇನಿದೆ?

By Ravi JanekalFirst Published Feb 26, 2024, 10:18 AM IST
Highlights

ಯೋಜನೆ ಬಳಿಕ ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಸ್ ಸಿಗುತ್ತಿಲ್ಲ. ಉಚಿತ ಯೋಜನೆಯಿಂದ ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲೂ ತುಂಬಿರುವುದರಿಂದ ಶಾಲಾಮಕ್ಕಳು ಬ್ಯಾಗ್ ಹೊತ್ತುಕೊಂಡು ಅವರ ಮಧ್ಯೆ ನಿಂತುಕೊಂಡು ಪ್ರಯಾಣಿಸುವುದು ದುಸ್ತರವಾಗಿದೆ. ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಬಾಲಕಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಗಮನಸೆಳೆದಿದ್ದಾರೆ.

ಬೆಂಗಳೂರು (ಫೆ.26): ಶಕ್ತಿ ಯೋಜನೆ ಬಳಿಕ ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಸ್ ಸಿಗುತ್ತಿಲ್ಲ. ಉಚಿತ ಯೋಜನೆಯಿಂದ ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲೂ ತುಂಬಿರುವುದರಿಂದ ಶಾಲಾಮಕ್ಕಳು ಬ್ಯಾಗ್ ಹೊತ್ತುಕೊಂಡು ಅವರ ಮಧ್ಯೆ ನಿಂತುಕೊಂಡು ಪ್ರಯಾಣಿಸಬೇಕಾಗಿದೆ. ಒಂದೆಡೆ ಬಸ್ ಇಲ್ಲ. ಇರುವ ಬಸ್‌ನಲ್ಲೂ ಶಾಲಾ ಮಕ್ಕಳು ಪ್ರಯಾಣಿಸಲು ಅಸಾಧ್ಯವಾಗುವಂತಹ ಪರಿಸ್ಥಿತಿ ಇದೆ. ಹೀಗಾಗಿ ಬಾಲಕಿಯೊಬ್ಬಳು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವನಾತ್ಮಕವಾಗಿ ಪತ್ರ ಬರೆದು ಗಮನ ಸೆಳೆದಿದ್ದಾಳೆ.

ಬೆಂಗಳೂರು ನಗರದಿಂದ ಸುಮಾರು 25 ಕಿಲೋಮಿಟರ್ ದೂರದಲ್ಲಿರುವ ತಾವರೆಕೆರೆ. ಇದೇ ತಾವರಕೆರೆ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ವಾಸವಿರುವ ಹರ್ಷಿಣಿ ಎಂಬ ಬಾಲಕಿ. ತನ್ನೂರಿಗೆ ಬಸ್ ಸೌಲಭ್ಯ ಇಲ್ಲದಿರುವುದರ ಬಗ್ಗೆ ಪತ್ರ ಬರೆದು ಸಿಎಂ ಗಮನ ಸೆಳೆದಿದ್ದಾಳೆ..'ಸಿಎಂ ಅಂಕಲ್ ನಮ್ಗೆ ಸೂಲ್‌ಗೆ ಹೋಗಲು ಬಸ್ ಕೊಡಿ. ಬಸ್ ವ್ಯವಸ್ಥೆಯಿಲ್ಲದೆ ಸರಿಯಾದ ಸಮಯಕ್ಕೆ ಶಾಲೆ ತಲುಪಲಾಗದೆ ದಿನನಿತ್ಯ ತೊಂದರೆ ಅನುಭವಿಸುತ್ತೇವೆ ಸಮಸ್ಯೆ ಬಗೆಹರಿಸಿಕೊಡುವಂತೆ ಮುಖ್ಯಮಂತ್ರಿ ಹಾಗೂ ಬಿಎಂಟಿಸಿ ಎಂಡಿ ಆರ್‌. ರಾಮಚಂದ್ರನ್‌ ಗೆ ಬಾಲಕಿ ಪತ್ರ ಬರೆದು ಬಾಲಕಿ ಅಳಲು ತೋಡಿಕೊಂಡಿದ್ದಾಳೆ.

ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ; ಬಿಜೆಪಿ ಸೇರ್ಪಡೆ ಬಳ ...

ತಾವರಕೆರೆ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ವಾಸವಿರುವ ಹರ್ಷಿಣಿ. ಇದು ನಗರದಿಂದ ಸುಮಾರು 25 ಕಿಲೋಮಿಟರ್ ದೂರವಿದೆ. ಹತ್ತಿರದಲ್ಲೇ ಬಿಎಂಟಿಸಿ ವಾಯುವ್ಯ ವಿಭಾಗದ ಡಿಪೋ ಇದೆ. ಇಲ್ಲಿಂದ ಅನೇಕ ಕಡೆ ಬಸ್ ಗಳ ವ್ಯವಸ್ಥೆಯನ್ನು ಬಿಎಂಟಿಸಿ ಕಲ್ಪಿಸಿದೆ. ಆದರೆ ಅಕ್ಕಪಕ್ಕದಲ್ಲಿರುವ ವನಗನಹಟ್ಟಿ,ಚನ್ನೇನಹಳ್ಳಿ, ಜಟ್ಟಿಪಾಳ್ಯ, ಸೀಗೆಹಳ್ಳಿಯಿಂದ ಬೆಂಗಳೂರಿಗೆ ಬಸ್ ಗಳ ವ್ಯವಸ್ಥೆಯೇ ಇಲ್ಲದಂತಾಗಿದೆ. ಇದರಿಂದ ಬೆಂಗಳೂರಿನಲ್ಲಿರುವ ಶಾಲಾ—ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಬಸ್ ಗಳು ಇಲ್ಲದೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತಲುಪಲಾಗುತ್ತಿಲ್ಲ. ಹೀಗಾಗಿ ಇಲ್ಲಿಂದ ಶಾಲಾ ಮಕ್ಕಳಿಗೆ ಅನುಕೂಲ ಆಗುವಂತೆ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿರುವ ಬಾಲಕಿ 

ಅಂತಾರಾಜ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ

ಬಾಲಕಿ ಪತ್ರಕ್ಕೆ ಸಿಎಂ ಸಿದ್ದರಾಮಯ್ಯನವರು ಸ್ಪಂಧಿಸುತ್ತಾರಾ? ಬಾಲಕಿಯರಿಗೆ, ವಿದ್ಯಾರ್ಥಿನಿಯರು, ಶಾಲಾ ಕಾಲೇಜುಗಳಿಗೆ ತೆರಳಲು ಪ್ರತ್ಯೇಕ ಬಸ್ ಕಲ್ಪಿಸುತ್ತಾರಾ ಕಾದು ನೋಡಬೇಕು.

click me!