ಶೇ.60 ಕನ್ನಡ ನಾಮಫಲಕ ಜಾರಿಗೆ 3 ದಿನ ಬಾಕಿ; ಇನ್ನೂ ಇವೆ ಅನ್ಯ ಭಾಷೆ ಫಲಕಗಳು!

By Kannadaprabha NewsFirst Published Feb 26, 2024, 6:46 AM IST
Highlights

ನಗರದಲ್ಲಿ ಶೇಕಡ 60ರಷ್ಟು ಭಾಗ ಕನ್ನಡ ಭಾಷೆಯ ನಾಮಫಲಕ ಅಳವಡಿಕೆಗೆ ಕೇವಲ ಮೂರು ದಿನ ಬಾಕಿ ಉಳಿದಿದ್ದರೂ ಅನೇಕ ಕಡೆ ಅನ್ಯ ಭಾಷೆಯ ನಾಮಫಲಕಗಳು ರಾಜಾಜಿಸುತ್ತಿವೆ.

ಬೆಂಗಳೂರು (ಫೆ.26): ನಗರದಲ್ಲಿ ಶೇಕಡ 60ರಷ್ಟು ಭಾಗ ಕನ್ನಡ ಭಾಷೆಯ ನಾಮಫಲಕ ಅಳವಡಿಕೆಗೆ ಕೇವಲ ಮೂರು ದಿನ ಬಾಕಿ ಉಳಿದಿದ್ದರೂ ಅನೇಕ ಕಡೆ ಅನ್ಯ ಭಾಷೆಯ ನಾಮಫಲಕಗಳು ರಾಜಾಜಿಸುತ್ತಿವೆ.

ಕಳೆದ ಎರಡು ತಿಂಗಳಿನಿಂದ ನಗರದಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಸದ ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗುತ್ತಿದೆ. ಆದರೂ ನಗರದ ಮಲ್ಲೇಶ್ವರ, ಯಶವಂತಪುರ, ಚಾಮರಾಜಪೇಟೆ, ರಾಜಾಜಿನಗರ, ವಿಜಯನಗರ, ಆರ್.ಆರ್‌.ನಗರ, ಕೋರಮಂಗಲ, ಜಯನಗರ, ಎಚ್‌ಎಸ್‌ಆರ್‌ ಲೇಔಟ್‌, ಎಂ.ಜಿ ರಸ್ತೆ, ರೆಸಿಡೆನ್ಸಿ ರಸ್ತೆ ಸೇರಿದಂತೆ ಅನೇಕ ಕಡೆ ಇಂದಿಗೂ ಅನ್ಯ ಭಾಷೆಯ ನಾಮ ಫಲಕಗಳ ನೇತಾಡುತ್ತಿವೆ.

ಬೆಂಗಳೂರಿನಂತೆ ಬೆಳಗಾವಿ ಕನ್ನಡಮಯವಾಗಬೇಕು: ನಾರಾಯಣಗೌಡ

50 ಸಾವಿರಕ್ಕೂ ಹೆಚ್ಚು ನೋಟಿಸ್‌:

ನಗರದಲ್ಲಿ ಈಗಾಗಲೇ 50,216 ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗಿದೆ. ಈ ಪೈಕಿ ಈಗಾಗಲೇ 46,600 ವ್ಯಾಪಾರಿಗಳು ಕನ್ನಡ ನಾಮ ಫಲಕ ಅಳವಸಿಕೊಂಡಿದ್ದಾರೆ. ಇನ್ನೂ 3,616 ವ್ಯಾಪಾರಿಗಳು ಕನ್ನಡ ನಾಮ ಫಲಕ ಅಳವಡಿಸಿಕೊಳ್ಳುವುದು ಬಾಕಿ ಇದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅನ್ಯ ಭಾಷೆಯ ನಾಮಫಲಕ ಒಡೆದ ಬಿಬಿಎಂಪಿ ಅಧಿಕಾರಿ ಅಮಾನತು!

ಸೆನ್ಸ್‌ದಾರರಿಗೆ ಮಾತ್ರ ನೋಟಿಸ್‌?

ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ ಪಡೆದ ವ್ಯಾಪಾರಿಗಳಿಗೆ ಮಾತ್ರ ಬಿಬಿಎಂಪಿ ಆರೋಗ್ಯಾಧಿಕಾರಿಗಳು ನೋಟಿಸ್‌ ನೀಡುತ್ತಿದ್ದಾರೆ. ಆದರೆ, ನಗರದಲ್ಲಿ ಸಾವಿರಾರು ಸಂಖ್ಯೆಯ ಪರವಾನಗಿ ಪಡೆಯದ ವ್ಯಾಪಾರ ನಡೆಸಲಾಗುತ್ತಿದೆ. ಆ ವಾಣಿಜ್ಯ ಮಳಿಗೆಗಳ ಮೇಲೆ ಅನ್ಯ ಭಾಷೆಯ ನಾಮಫಲಕ ಇಂದಿಗೂ ಇವೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಕ್ರಮ ಕೈಗೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!