ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಾರ್ ಮಾಲಿಕನೊಬ್ಬ ಕಳೆದ 15 ವರ್ಷಗಳಿಂದ ಪುರಸಭೆ ಕರವನ್ನೆ ಪಾವತಿ ಮಾಡದೆ ವಂಚಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಪುರಸಭೆ ಅಧಿಕಾರಿ ಬಾರ್ ಮಾಲಿಕನನ್ನ ಎಚ್ಚರಿಸಲು ತಮಟೆ ಮೊರೆ ಹೋಗಿದ್ದು ಗಮನ ಸೆಳೆದಿದೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಆ 22) : ಪ್ರತಿ ಪುರಸಭೆ, ಪಟ್ಟಣ ಪಂಚಾಯ್ತಿ, ಮಹಾನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ವಾಣಿಜ್ಯ ವಹಿವಾಟು ನಡೆಸುವ ಅಂಗಡಿ ಮುಂಗಟ್ಟು, ಬಿಲ್ಡಿಂಗ್‌ಗಳಿಂದ ಕರ ವಸೂಲಿ ಮಾಡುತ್ತವೆ. ಇಲ್ಲಿ ವಸೂಲಿಯಾಗುವ ಹಣ ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ ಆದಾಯ ತಂದು ಕೊಡುತ್ತೆ. ಆದ್ರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಾರ್ ಮಾಲಿಕನೊಬ್ಬ ಕಳೆದ 15 ವರ್ಷಗಳಿಂದ ಪುರಸಭೆ ಕರವನ್ನೆ ಪಾವತಿ ಮಾಡದೆ ವಂಚಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಪುರಸಭೆ ಅಧಿಕಾರಿ ಬಾರ್ ಮಾಲಿಕನನ್ನ ಎಚ್ಚರಿಸಲು ತಮಟೆ ಮೊರೆ ಹೋಗಿದ್ದು ಗಮನ ಸೆಳೆದಿದೆ.
ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಪುರಸಭೆ ಅಧಿಕಾರಿಗಳು ಈಗ ಕರ ಪಾವತಿ ಮಾಡದೆ ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಹಾಕ್ತಿದ್ದ ವಾಣಿಜ್ಯ ಕಟ್ಟಡ ಬಳಕೆದಾರರ ಬಳಿ ವಿನೂತನವಾಗಿ ಕರ ವಸೂಲಿಗೆ ಮುಂದಾಗಿದ್ದಾರೆ. ಮುದ್ದೇಬಿಹಾಳ ಪಟ್ಟಣದ ಪಲ್ಲವಿ ಬಾರ್ ಆಂಡ್ ರೆಸ್ಟೋರೆಂಟ್ ಮಾಲಿಕ ಲಕ್ಷಾಂತರ ರೂಪಾಯಿ ಕರ ಪಾವತಿ ಬಾಕಿ ಉಳಿಸಿಕೊಂಡಿದ್ದು ಪುರಸಭೆ ಅಧಿಕಾರಿಗಳು ಕರ ವಸೂಲಿಗೆ ತಮಟೆ ಮೂಲಕ ಬಾರ್ ಗೆ ಲಗ್ಗೆ ಇಟ್ಟಿದ್ದಾರೆ. ಬಾರ್ ಎದುರು ತಮಟೆ ಬಾರಿಸಿ ಕರ ಪಾವತಿ ಮಾಡುವಂತೆ ಒತ್ತಡ ಹಾಕಿದ್ದಾರೆ. ತಮಟೆ ಬಾರಿಸುವ ಮೂಲಕ ಕರ ವಸೂಲಿಗೆ ಮುಂದಾಗಿದ್ದಾರೆ.
ಕಲುಷಿತ ನೀರು ಪೂರೈಕೆಯಿಂದ 6 ಜನರ ಬಲಿ ಪಡೆದ ಕವಾಡಿಗರಹಟ್ಟಿ: ಈಗಿನ ಸ್ಥಿತಿ ನೋಡಿ..
ಪುರಸಭೆಗೆ ಸೇರಬೇಕಿದ್ದ 30 ಲಕ್ಷ ಕರ ಭಾಕಿ..!
ಮುದ್ದೇಬಿಹಾಳ ಪಟ್ಟಣದ ಪಲ್ಲವಿ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕ ಕರಭಂಟನಾಳ ಕಳೆದ 15 ವರ್ಷಗಳಿಂದ ಪುರಸಭೆಗೆ ಕರವನ್ನೆ ಪಾವತಿ ಮಾಡಿಲ್ಲ. ಕೇಳಿದಾಗಲೆಲ್ಲ ಅಧಿಕಾರಿಗಳನ್ನ ಯಾಮಾರಿಸುತ್ತಲೆ ಬಂದಿದ್ದ. ಹೀಗಾಗಿ 15 ವರ್ಷಗಳಲ್ಲಿ 30 ಲಕ್ಷಕ್ಕು ಅಧಿಕ ಕರ ಪಾವತಿ ಬಾಕಿ ಉಳಿದಿತ್ತು. ಈ ಕರ ಪಾವತಿ ಮಾಡದ ಬಾರ್ ಮಾಲಿಕನನ್ನ ಎಚ್ಚರಿಸಲು ಬಾರ್ ಮುಂದೆ ತಮಟೆ ಬಾರಿಸಿದ್ದಾರೆ. ಇನ್ನೂ ನೀರಿನ ಕರ 29 ಸಾವಿರ ರೂಪಾಯಿಯನ್ನು ಇದೆ ಬಾರ್ ಆಂಡ್ ರೆಸ್ಟೋರೆಂಟ್ ಮಾಲಿಕ ಕರಭಂಟನಾಳ ಬಾಕಿ ಉಳಿಸಿಕೊಂಡಿದ್ದಾನೆ. ಇದನ್ನ ಪಾವತಿ ಮಾಡುವಂತೆ ಎಷ್ಟೇ ಹೇಳಿದರು ಕೇಳದೆ ಇದ್ದಾಗ ಅಧಿಕಾರಿಗಳು ಎಚ್ಚರಿಸಲು ತಮಟೆ ಮೂಲಕ ಮಾರ್ಗೊಪಾಯ ಕಂಡುಕೊಂಡಿದ್ದಾರೆ.
ಕರ ವಸೂಲಿಗೆ ಸೂಚಿಸಿದ್ದ ಡಿಸಿ ಭೂಬಾಲನ್..!
ಒಂದೆರಡು ದಿನಗಳ ಹಿಂದೆ ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್ ಪುರಸಭೆಗೆ ಭೇಟಿ ನೀಡಿ ಕರ ಬಾಕಿ ಉಳಿಸಿಕೊಂಡವರು ಯಾರೇ ಆಗಲಿ ತಕ್ಷಣದಿಂದಲೇ ಕರ ವಸೂಲಿಗಿಳಿದು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದರೂ ಈ ಹಿನ್ನೆಲೆಯಲ್ಲಿ ಸಧ್ಯ ಪಟ್ಟಣದ ಪಲ್ಲವಿ ಬಾರ್ ಆಂಡ್ಯ ರೆಸ್ಟೋರೆಂಟ್ ಹಾಗೂ ಲಾಡ್ಜ ಮುಂದೆ ಸಿಬ್ಬಂದಿಗಳು ಹಲಿಗೆ ಬಾರಿಸುವ ಮೂಲಕ ಕರ ವಸೂಲಿಗಿಳಿಯಲಾಗಿದೆ.
ಕರ ಪಾವತಿಸದಿದ್ದರೆ ಪಟ್ಟಣದ ಕಸ ತಂದು ಸುರಿಯೋ ಎಚ್ಚರಿಕೆ..!
ಪ್ರಥಮ ಹಂತವಾಗಿ ತಮಟೆ ಬಾರಿಸಿ ಕರ ಕಟ್ಟುವಂತೆ ಎಚ್ಚರಿಸಲಾಗಿದೆ. ಇದಕ್ಕೆ ಬಗ್ಗದೆ ಹೋದರೆ ಪಟ್ಟಣದೆಲ್ಲೆಡೆ ಸಂಗ್ರಹವಾಗುವ ಕಸವನ್ನು ಅವರ ಲಾಡ್ಜ್ ಮತ್ತು ರೆಸ್ಟೋರೆಂಟ್ ಮುಂದೆ ಹಾಕಿ ಇವರ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಇದು ಕೇವಲ ಪಲ್ಲವಿ ಬಾರ್ ಆಂಡ್ ರೆಸ್ಟೋರೆಂಟ್ ಗೆ ನೀಡಿರುವ ಎಚ್ಚರಿಕೆ ಅಲ್ಲ, ಉಳಿದವರಿಗು ಇದೆ ಗತಿ ಎನ್ನುವ ಸಂದೇಶವನ್ನ ಪುರಸಭೆ ಅಧಿಕಾರಿಗಳು ನೀಡಿದ್ದಾರೆ.
ವಿಜಯಪುರ: 1,322 ಕೋಟಿ ವೆಚ್ಚದಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿ, ಸಂಸದ ರಮೇಶ ಜಿಗಜಿಣಗಿ
ಪುರಸಭೆ ಕಂದಾಯ ಅಧಿಕಾರಿ ಹೇಳೋದೇನು.?
ಈ ವೇಳೆ ಪುರಸಭೆ ಕಂದಾಯ ನಾಗಮ್ಮ ಪಾಟೀಲ ಅವರು ಮಾತನಾಡಿ ಪಟ್ಟಣದ ಪಲ್ಲವಿ ಬಾರ್ ಆಂಡ್ ರೇಸ್ಟೋರಂಟ್(Pallavi Bar and Restaurant) ಹಾಗೂ ಲಾಡ್ಜ್ ನ ಅಂದಾಜು 34 ಲಕ್ಷ ರೂಗಳ ವಾಣಿಜ್ಯ ಹಾಗೂ ಕುಡಿಯುವ ನೀರಿನ ಕರವನ್ನು ಪುರಸಭೆ ಭರಿಸಬೇಕಾಗಿದೆ ಆದರೇ ಕಳೇದ 14 ವರ್ಷಗಳಿಂದ ಬಾರ್ ಹಾಗೂ ಲಾಡ್ಜ್ ಮಾಲಿಕರಿಗೆ ಹಲವು ಬಾರಿ ನೋಟಿಸ್ ನೀಡಿ ಕರ ಬಾಕಿ ಹಣವನ್ನು ಭರಿಸುವಂತೆ ತಿಳಿದರೂ ನಮ್ಮ ಯಾವ ನೋಟಿಸ್ ಸಮರ್ಪಕ ಉತ್ತರ ನೀಡದೇ ಸತಾಯಿಸುತ್ತಲೇ ಬಂದಿರುವುದು ಮಾತ್ರವಲ್ಲದೇ ಕರ ಭರಿಸುತ್ತಿಲ್ಲ. ಇದರಿಂದಾಗಿ ಪುರಸಭೆ ಆದಾಯ ಕಡಿಮೆಯಾಗಿ ಪಟ್ಟಣದ ಹಲವು ಅಭಿವೃದ್ಧಿಗೆ ತೊಂದರೆಯುಂಟಾಗಿದೆ ಎಂದಿದ್ದಾರೆ.