ಜಯನಗರ ಕಾಸ್ಮೋಪಾಲಿಟನ್‌ ಕ್ಲಬ್‌ ವಶಕ್ಕೆ ಪಡೆಯಿರಿ: ಎನ್ನಾರ್‌ ರಮೇಶ್‌ ಒತ್ತಾಯ

By Kannadaprabha News  |  First Published Aug 22, 2023, 12:06 PM IST

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಬರೆದುಕೊಟ್ಟಿರುವ ಅಧಿಕೃತ ಮುಚ್ಚಳಿಕೆ ಪತ್ರದಲ್ಲಿನ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿರುವ ಮತ್ತು ಪ್ರಾಧಿಕಾರಕ್ಕೆ ಹತ್ತಾರು ಕೋಟಿ ರುಪಾಯಿ ವಂಚಿಸಿರುವ ಜಯನಗರದ ಕಾಸ್ಮೊಪಾಲಿಟನ್‌ ಕ್ಲಬ್‌ವನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಒತ್ತಾಯಿಸಿದ್ದಾರೆ.


ಬೆಂಗಳೂರು (ಆ.22) :  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಬರೆದುಕೊಟ್ಟಿರುವ ಅಧಿಕೃತ ಮುಚ್ಚಳಿಕೆ ಪತ್ರದಲ್ಲಿನ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿರುವ ಮತ್ತು ಪ್ರಾಧಿಕಾರಕ್ಕೆ ಹತ್ತಾರು ಕೋಟಿ ರುಪಾಯಿ ವಂಚಿಸಿರುವ ಜಯನಗರದ ಕಾಸ್ಮೊಪಾಲಿಟನ್‌ ಕ್ಲಬ್‌ವನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಒತ್ತಾಯಿಸಿದ್ದಾರೆ.

ಈ ಸಂಬಂಧ ಬಿಡಿಎ ಆಯುಕ್ತರಿಗೆ ಪತ್ರ ಬರೆದು, ನಿಯಮ ಉಲ್ಲಂಘನೆ ಮಾಡಿರುವ ಕಾಸ್ಮೊಪಾಲಿಟನ್‌ ಕ್ಲಬ್‌ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Tap to resize

Latest Videos

1968-69ರಲ್ಲಿ ಕ್ಲಬ್‌ ಆರಂಭವಾಗಿದ್ದು, ಹಲವು ಷರತ್ತುಗಳನ್ನು ಹಾಕಿ 69 ಸಾವಿರ ಚದುರ ಅಡಿಗಳಷ್ಟುವಿಸ್ತೀರ್ಣದ ಮೂಲೆ ಸ್ವತ್ತನ್ನು ಕ್ಲಬ್‌ಗೆ ನೀಡಲಾಗಿತ್ತು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಸ್ವತ್ತಿನ ಗುತ್ತಿಗೆ ಅವಧಿಯನ್ನು 2000-2001ರಲ್ಲಿ 30 ವರ್ಷಗಳಿಗೆ ಬಿಡಿಎ ನವೀಕರಿಸಿದ್ದು, 2031ಕ್ಕೆ ಪೂರ್ಣಗೊಳ್ಳಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ, ಬಿಬಿಎಂಪಿ ಅಧಿಕಾರಿಗಳು ತಲಾ 2000 ಜನರನ್ನು ಕರೆತರಬೇಕು; ಎನ್‌.ಆರ್. ರಮೇಶ್‌ ಆರೋಪ

ಕ್ಲಬ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ಮತ್ತು ಕ್ಲಬ್‌ನ ಸುತ್ತಮುತ್ತಲಿನ ನಾಗರಿಕರಿಗಾಗಿ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಉದ್ದೇಶದಿಂದ 2009ರಲ್ಲಿ ಕಾಸ್ಮೊಪಾಲಿಟನ್‌ ಕ್ಲಬ್‌ ಕಾರ್ಪಸ್‌ ಫಂಡ್‌ ಟ್ರಸ್ಟ್‌ ಎಂಬ ಅಂಗಸ್ಥೆಯನ್ನು ಆರಂಭಿಸಲಾಯಿತು. ವಿವಿಧ ರೀತಿಯ ಸಹಾಯಾರ್ಥ ಕಾರ್ಯಗಳು ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ಕ್ಲಬ್‌ನ ಆದಾಯದ ಮೂಲಗಳಿಂದ ಮಾಡಬೇಕು ಎಂಬ ಷರತ್ತು ವಿಧಿಸಿದರೂ ಯಾವುದೇ ಕಾರ್ಯಗಳನ್ನು ಮಾಡುತ್ತಿಲ್ಲ. ಈ ಮೂಲಕ ಷರತ್ತನ್ನು ಉಲ್ಲಂಘನೆ ಮಾಡಲಾಗಿದೆ. ಇದೇ ವರ್ಷದ ಏಪ್ರಿಲ್‌ನಲ್ಲಿ ಪ್ರತಿನಿತ್ಯ ಮಧ್ಯಾಹ್ನದ ವೇಳೆ ಒಂದು ಸಾವಿರ ಬಡ ಜನರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಮೂರೇ ತಿಂಗಳಿಗೆ ಇದನ್ನು ಸ್ಥಗಿತಗೊಳಿಸಲಾಯಿತು. ಜು.30ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಉಚಿತ ಊಟದ ಸೇವಾ ಕಾರ್ಯವನ್ನು ಸ್ಥಗಿತಗೊಳಿಸುವ ನಿಯಮಬಾಹಿರ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕ್ಲಬ್‌ ಅನ್ನು ಕೇವಲ ತಮ್ಮ ಕುಟುಂಬ ಸದಸ್ಯರ ವಿಲಾಸಿ ಜೀವನ ಸಾಗಿಸಲು ಮತ್ತು ಮೋಜು ಮಸ್ತಿ ಕಾರ್ಯಗಳನ್ನು ಮಾಡಲು ಮಾತ್ರವೇ ಬಳಸುತ್ತಿರುವ ಕಾರ್ಯವೈಖರಿ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದ್ದಾರೆ.

Bengaluru: ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾಥ ಶವ ಹಾಗೂ ಅಂಗಾಂಗ ಮಾರಾಟ ಮಾಫಿಯಾ..!

‘ಖಾಲಿ ಇರುವ ನೆಲ ಮಹಡಿ ಬಿಡಿಎ ಕಚೇರಿಗೆ ಬಳಸಿಕೊಳ್ಳಿ’

ಕ್ಲಬ್‌ನ ಕಟ್ಟಡದಲ್ಲಿ ಬಾಡಿಗೆಗೆ ನೀಡಿರುವ ವಾಣಿಜ್ಯ ಕೇಂದ್ರಗಳಿಂದ ಪ್ರತಿ ತಿಂಗಳು ಸಂಗ್ರಹವಾಗುತ್ತಿರುವ .15 ಲಕ್ಷ ಪೈಕಿ ಕಾನೂನು ರೀತಿ .10 ಲಕ್ಷ ಮಾಸಿಕ ಬಾಡಿಗೆ ಹಣವನ್ನು ಬಿಡಿಎ ಪಾವತಿಸಿಕೊಳ್ಳಬೇಕು. ವಾಹನಗಳ ನಿಲುಗಡೆಗಾಗಿ ನಿರ್ಮಿಸಿರುವ ಮೂರು ಮಹಡಿಗಳ ಪೈಕಿ ನೆಲ ಮಹಡಿಯು ಸಂಪೂರ್ಣ ಖಾಲಿ ಇದೆ. ಇದನ್ನು ಮಧ್ಯಾಹ್ನ ಊಟದ ವ್ಯವಸ್ಥೆಗೆಂದು ಅರ್ಧ ಭಾಗದಷ್ಟುಮತ್ತು ಇನ್ನುಳಿದ ಅರ್ಧದಷ್ಟುಬಿಡಿಎ ಕಚೇರಿಯ ಬಳಕೆಗೆಂದು ಉಪಯೋಗಿಸಿಕೊಳ್ಳುವ ಬಗ್ಗೆ ಆದೇಶ ಹೊರಡಿಸಬೇಕು ಎಂದು ರಮೇಶ್‌ ಪತ್ರದಲ್ಲಿ ಆಗ್ರಹಿಸಿದ್ದಾರೆ.

click me!