ನಾವು ಮನಸು ಮಾಡಿದ್ರೆ ಬಿಜೆಪಿ, ಜೆಡಿಎಸ್ ಖಾಲಿ ಆಗುತ್ತೆ: ಸಚಿವ ತಂಗಡಗಿ

By Kannadaprabha News  |  First Published Aug 22, 2023, 12:18 PM IST

ನಾವೇನಾದರೂ ನಮ್ಮ ಪಕ್ಷಕ್ಕೆ ಕರೆದುಕೊಳ್ಳಲು ಆರಂಭಿಸಿದರೆ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಶಾಸಕರೇ ಇರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.


ಹುಬ್ಬಳ್ಳಿ (ಆ.22) :  ನಾವೇನಾದರೂ ನಮ್ಮ ಪಕ್ಷಕ್ಕೆ ಕರೆದುಕೊಳ್ಳಲು ಆರಂಭಿಸಿದರೆ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಶಾಸಕರೇ ಇರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಪ್ರಧಾನಿಗಳು ಗಲ್ಲಿಗಲ್ಲಿಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದರು. ಆದರೂ ಬಿಜೆಪಿ ಎರಡಂಕಿ ದಾಟಲಿಲ್ಲ. ನಾವು ಯಾರನ್ನೂ ಬಾ ಎಂದು ಕರೆಯುತ್ತಿಲ್ಲ. ಆಪರೇಷನ್‌ ಹಸ್ತ ಮಾಡುವ ಅವಶ್ಯಕತೆಯೂ ನಮಗಿಲ್ಲ. ಆಡಳಿತ ನಡೆಸಲು ಬೇಕಾದ ಸ್ಥಾನ ನಮ್ಮ ಬಳಿ ಇವೆ. ಆದರೆ, ಪಕ್ಷದ ತತ್ವ, ಸಿದ್ಧಾಂತಗಳನ್ನು ಮೆಚ್ಚಿಕೊಂಡು ಬರುವವರು ಬರಲಿ ಎಂದರು.

Tap to resize

Latest Videos

ಡಿಕೆ ಬ್ರದರ್ಸ್‌ ವಿರುದ್ಧ ನೈಸ್‌ ಅಕ್ರಮದ ದಾಖಲೆ ನಾಳೆ ರಿಲೀಸ್‌: ಎಚ್‌ಡಿಕೆ

ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಪೈಕಿ 3ನ್ನು ಈಗಾಗಲೇ ನಾವು ಜಾರಿಗೊಳಿಸಿದ್ದೇವೆ. 4ನೆಯ ಗ್ಯಾರಂಟಿ ಗೃಹಲಕ್ಷ್ಮಿಯನ್ನು ಆ. 30ಕ್ಕೆ ಜಾರಿಗೊಳಿಸಲಿದ್ದೇವೆ. ಇದು ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಡುಕವನ್ನುಂಟು ಮಾಡಿದೆ. ಅವರು ಇಷ್ಟುಬೇಗ ಗ್ಯಾರಂಟಿ ಜಾರಿಗೊಳಿಸುತ್ತೇವೆ ಎಂದುಕೊಂಡಿರಲಿಲ್ಲ ಎಂದು ವ್ಯಂಗ್ಯವಾಡಿದರು.

ನಮ್ಮ ಪಕ್ಷದಿಂದ ಹೊರಹೋದ ಶಾಸಕರು, ಬಿಜೆಪಿ, ಜೆಡಿಎಸ್‌ ಶಾಸಕರಿಗೂ ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆಯಾಗಿದೆ. ಅವರೆಲ್ಲರೂ ಈಗ ಕಾಂಗ್ರೆಸ್‌ಗೆ ಬರಲು ಉತ್ಸುಕರಾಗಿದ್ದಾರೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಿರುವುದು ದ್ವೇಷದ ರಾಜಕಾರಣ ಎಂದು ಏಕೆ ಕರೆಯುತ್ತೀರಿ? ದ್ವೇಷದ ರಾಜಕಾರಣ ಮಾಡಿದ್ದು ಬಿಜೆಪಿಯವರು. 9 ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಬಡವರ ಪರವಾಗಿರುವ ಒಂದೇ ಒಂದು ಯೋಜನೆ ಜಾರಿಗೆ ತರಲಿಲ್ಲ. ಸಮಾಜದಲ್ಲಿ ವಿಷಬೀಜ ಬಿತ್ತಿದ್ದನ್ನು ಬಿಟ್ಟು ಬೇರೆ ಏನನ್ನೂ ಮಾಡಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗ್ಯಾರಂಟಿ ಜಾರಿಯಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುವ ಯಾವುದೇ ಕಾರ್ಯಕ್ರಮಗಳು, ಉತ್ಸವಗಳಿಗೆ ತೊಂದರೆಯಾಗುವುದಿಲ್ಲ. ಎಂದಿನಂತೆಯೇ ಅವು ನಡೆಯಲಿವೆ. ಸರ್ಕಾರಕ್ಕೆ ಹಣದ ಕೊರತೆ ಇದೆ ಎಂದು ಯಾರು ಹೇಳಿದರು? ಬಿಜೆಪಿ, ಜೆಡಿಎಸ್‌ ಆಧಾರರಹಿತ ಆರೋಪ ಮಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 13 ಬಾರಿ ಬಜೆಟ್‌ ನೀಡಿದ ಅನುಭವವಿದೆ. ಸರ್ಕಾರದ ಯಾವುದೇ ಅಭಿವೃದ್ಧಿ ಯೋಜನೆಗೆ ಅನುದಾನದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕ ಬಸವರಾಜ ರಾಯರೆಡ್ಡಿ ಪತ್ರದ ವಿಚಾರಕ್ಕೆ ಉತ್ತರಿಸಿದ ತಂಗಡಗಿ, ರಾಯರಡ್ಡಿ ಅವರು ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ವ್ಯಾಪಕ ಭ್ರಷ್ಟಾಚಾರವಾಗಿತ್ತು. ಅದನ್ನು ನಮ್ಮ ಸರ್ಕಾರ ಮುಂದುವರಿಸದೇ ಉತ್ತಮ ಆಡಳಿತ ನೀಡುವಂತೆ ಸಲಹೆ ನೀಡಿದ್ದಾರೆ, ಇದರಲ್ಲಿ ತಪ್ಪೇನು? ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಡ್ರಗ್‌್ಸ ದಂಧೆ ವ್ಯಾಪಕವಾಗಿ ನಡೆದಿದೆ. ನಾವು ಅಧಿಕಾರಕ್ಕೆ ಬಂದ ಆನಂತರ ರಾಜ್ಯದಲ್ಲಿ ಡ್ರಗ್‌್ಸ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದರು.

ಬಾಂಬೆ ಬಾಯ್ಸ್‌ ಅಷ್ಟೇ ಅಲ್ಲ ಬಿಜೆಪಿ, ಜೆಡಿಎಸ್‌ನಲ್ಲಿ ಯಾವ ಶಾಸಕರೂ ಇರೋಲ್ಲ: ತಂಗಡಗಿ

ಎಚ್‌ಡಿಕೆ ಹೇಳಿಕೆ ಹಾಸ್ಯಾಸ್ಪದ:

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಅವರ ಬಳಿ ಇರುವುದು ಖಾಲಿಯಾಗಿರುವ ಪೆನ್‌ಡ್ರೈವ್‌. ಪೆನ್‌ಡ್ರೈವ್‌ ಯಾರ ಹತ್ತಿರ ಇಲ್ಲ ಹೇಳಿ? ಎಲ್ಲರ ಹತ್ತಿರವೂ ಇದೆ. ಹಾಗೆ, ಅವರ ಹತ್ತಿರನೂ ಇದೆ. ಎಚ್‌ಡಿಕೆ ಹೇಗೆ ಹೇಳುತ್ತಾರೆ ಅಂದರೆ, ಹಾವಾಡಿಗನು ಬುಟ್ಟಿತೋರಿಸಿ ಹಾವಿದೆ... ಹಾವಿದೆ ಎನ್ನುವಂತಾಗಿದೆ. ಅವನು ಬುಟ್ಟಿಯಿಂದ ಹಾವು ತೋರಿಸಲ್ಲ, ಇವರು ಪೆನ್‌ಡ್ರೈವ್‌ನಲ್ಲಿ ಏನಿದೆ ಅನ್ನೋದನ್ನು್ನ ತೋರಿಸಲ್ಲ. ಹೆದರಿಸುತ್ತಿದ್ದಾರೆ ಅಷ್ಟೇ ಎಂದು ಸಚಿವ ತಂಗಡಗಿ ವ್ಯಂಗ್ಯವಾಡಿದರು.

click me!