ಮೈಸೂರಿನಲ್ಲಿ ಅದ್ದೂರಿ ದಸರಾ ಜಂಬೂಸವಾರಿ: 5ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು

By Kannadaprabha News  |  First Published Oct 13, 2024, 6:59 AM IST

ವಿಶ್ವವಿಖ್ಯಾತ ಮೈಸೂರು ದಸರಾದ ಆಕರ್ಷಣೆಯಾದ 'ಜಂಬೂಸವಾರಿ' ಮಳೆ ನಡುವೆಯೂ ಶನಿವಾರ ಅದ್ದೂರಿಯಾಗಿ ನಡೆಯಿತು. ಮಳೆ ಕಣ್ಣಾಮುಚ್ಚಾಲೆ ನಡುವೆಯೂ ಮೆರವಣಿಗೆಯನ್ನು ಜನ ಕಣ್ತುಂಬಿಕೊಂಡರು. 


ಅಂಶಿ ಪ್ರಸನ್ನಕುಮಾರ್

ಮೈಸೂರು (ಅ.13): ವಿಶ್ವವಿಖ್ಯಾತ ಮೈಸೂರು ದಸರಾದ ಆಕರ್ಷಣೆಯಾದ 'ಜಂಬೂಸವಾರಿ' ಮಳೆ ನಡುವೆಯೂ ಶನಿವಾರ ಅದ್ದೂರಿಯಾಗಿ ನಡೆಯಿತು. ಮಳೆ ಕಣ್ಣಾಮುಚ್ಚಾಲೆ ನಡುವೆಯೂ ಮೆರವಣಿಗೆಯನ್ನು ಜನ ಕಣ್ತುಂಬಿಕೊಂಡರು. ಸಂಜೆ ಬನ್ನಿಮಂಟಪದಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆ ಯಿತು. ರಾಜ್ಯಪಾಲ ಥಾವರ್‌ಚಂದ್ ಗೆದ್ದೋತ್ ಗೌರವ ವಂದನೆ ಕಳೆದ ಹತ್ತು ಸ್ವೀಕರಿಸಿದರು. ಇದರೊಂದಿಗೆ ದಿನಗಳಿಂದ ನಡೆಯುತ್ತಿದ್ದ ದಸರಾಗೆ ತೆರೆ ಬಿತ್ತು. ಇದಕ್ಕೂ ಮೊದಲು, ಮಧ್ಯಾಹ್ನ 1.41 ರಿಂದ 2.10 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರಮನೆಯ ಉತ್ತರದಲ್ಲಿರುವ 'ಬಲರಾಮ' ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದರು. 

Tap to resize

Latest Videos

ಅಲ್ಲಿಂದ ಸಿಎಂ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಮೊದಲಾದವರು ತೆರೆದ ಜೀಪಿನಲ್ಲಿ ಅರಮನೆ ಆವರಣಕ್ಕೆ ಆಗಮಿಸಿದರು. ನಂತರ, ಆಕರ್ಷಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಿಶಾನೆ ಆನೆ 'ಧನಂಜಯ', ನೌಫತ್ ಆನೆ 'ಗೋಪಿ', ಸಾಲಾನೆಗಳು ಮುಂದೆ ಸಾಗಿ ದವು. ಅವುಗಳ ಹಿಂದೆ ವಿವಿಧ ಸಾಂಸ್ಕೃತಿಕ, ಕಲಾ ತಂಡಗಳು, ಸ್ತಬಚಿತ್ರಗಳು ಒಂದರ ಹಿಂದೆ ಒಂದರಂತೆ ಸಾಗಿದವು. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಗೃಹ ಜ್ಯೋತಿ, ಯುವನಿಧಿ, ಅನ್ನಭಾಗ್ಯ, ಶಕ್ತಿ ಯೋಜನೆ ಕುರಿತು ಸ್ತಬ್ದ ಚಿತ್ರಗಳು ಜನರ ಮನಸೂರೆಗೊಂಡವು. 

ಮುಖ್ಯಮಂತ್ರಿ ಹುದ್ದೆ ಖಾಲಿ ಇದೆ ಅಂತ ನಿಮಗ್ಯಾರು ಹೇಳಿದ್ದು?: ಸಚಿವರಿಗೆ ಸಂಪುಟದಲ್ಲಿ ಸಿಎಂ ಕ್ಲಾಸ್‌

ಕೊನೆಯಲ್ಲಿ ಇಂಗ್ಲಿಷ್ ಬ್ಯಾಂಡ್, ಪೊಲೀಸ್ ಅಶ್ವದಳ, ನಾದಸ್ವರ ನಂತರ ಸತತ ಐದನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಗಜರಾಜ 'ಅಭಿಮನ್ಯು' ಹೊತ್ತು ಸಂಗಾತಿಗಳಾದ 'ಲಕ್ಷ್ಮಿ' ಹಾಗೂ 'ಹಿರಣ್ಯಾ' ಜೊತೆ ಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಾ ಅರಮನೆ ಆವರಣದ ವಿಶೇಷ ವೇದಿಕೆ ಎದುರು ಬಂದ ಸಂಜೆ 4 ರಿಂದ 4.30 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸಬೇ ಕಿತ್ತು. ಆದರೆ, ಮಳೆಯಿಂದಾಗಿ ವಿಳಂಬವಾಯಿತು. ಹೀಗಾಗಿ 5 ಮೆರವಣಿಗೆ ನಿಧಾನಗತಿಯಲ್ಲಿ ಸಾಗಿತು. ಈ ಬಾರಿ ಅಂಬಾರಿ ಆನೆ ಅರಮನೆ ವಿಶೇಷ ವೇದಿಕೆಗೆ ಅರಮನೆಯ ಪೂರ್ವ ದಿಕ್ಕಿಗೆ ಬದಲಾಗಿ ಹಿಂಭಾಗದಿಂದ ಬಂದಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದರು. 

ಅರಮನೆ ಅಂಗಳದಲ್ಲಿ ಸೇರಿದ್ದ ಸಹಸ್ರಾರು ಮಂದಿ ಅಂಬಾರಿ ಯಲ್ಲಿದ್ದ ನಾಡದೇವತೆ ಚಾಮುಂಡೇಶ್ವರಿ ವಿಗ್ರಹ ಕಂಡು, ಭಕ್ತಿ ಪರವಶರಾಗಿ ಜೈಕಾರ ಹಾಕಿದರು. ಪುಷ್ಪಾರ್ಚನೆ ಆಗುತ್ತಿದ್ದಂತೆ 21 ಕುಶಾಲತೋಪು ಗಳನ್ನು ಸಿಡಿಸಿ, ರಾಷ್ಟ್ರಗೀತೆನುಡಿಸಲಾಯಿತು. ನಂತರ, ಅಂಬಾರಿ ಆನೆ ಪೊಲೀಸ್ ಅಶ್ವದಳದ ಬೆಂಗಾವಲಿನಲ್ಲಿ ಸಾಗಿ, ರಾಜರ ಕಾಲದ ಗತವೈಭವವನ್ನು ನೆನಪಿಸಿತು. ಮೆರವಣಿಗೆ ಅರಮನೆಯಿಂದ ಸಂಪೂರ್ಣವಾಗಿ ಹೊರಗೆ ಹೋಗಲು ಸುಮಾರು ಎರಡು ತಾಸು ಬೇಕಾಯಿತು. ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ನಿಂತು, ಮೆರವಣಿಗೆಯನ್ನು ಕಣ್ಣುಂಬಿಕೊಂಡರು. ಸಂಜೆ ಬನ್ನಿಮಂಟಪದಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆಯಿತು. ರಾಜ್ಯಪಾಲ ಥಾವ‌ರ್ ಚಂದ್ ಗೆಹಲೋತ್ ಗೌರವ ವಂದನೆ ಸ್ವೀಕರಿಸಿದರು. ಇದರೊಂದಿಗೆ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ದಸರಾ ಮಹೋತ್ಸವಕ್ಕೆ ತೆರೆ ಬಿತ್ತು. 

ಬೈಎಲೆಕ್ಷನ್‌ನಿಂದ ಡಿಕೆಶಿಗೆ ಚನ್ನಪಟ್ಟಣ ನೆನಪಾಗ್ತಿದೆ: ಎಚ್.ಡಿ.ಕುಮಾರಸ್ವಾಮಿ

ರಾಜವಂಶಸ್ಥ ಯದುವೀರ್‌ಗೈರು: ಸಂಪ್ರದಾಯ ದಂತೆ ಪುಷ್ಪಾರ್ಚನೆ ಕಾಲಕ್ಕೆ ಹಾಜರಿರಬೇಕಿದ್ದ ರಾಜ ವಂಶಸ್ಥ ಯದುವೀರ್‌ಕೃಷ್ಣದತ್ತ ಚಾಮರಾಜ ಒಡೆ ಯರ್‌ಗೈರಾಗಿದ್ದರು. ಅವರಿಗೆ ಎರಡನೇ ಪುತ್ರ ಜನನವಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನಲಾಗಿದೆ. ದಸರೆಗೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೂಡ ಬರುತ್ತಾರೆ. ಶಿಷ್ಟಾಚಾರದ ಪ್ರಕಾರ ಅವರನ್ನು ಕೂಡ ಪುಷ್ಪಾರ್ಚನೆ ವೇಳೆ ವಿಶೇಷ ವೇದಿಕೆಗೆ ಕರೆಯಲಾಗುತ್ತದೆ. ಆದರೆ, ಈ ಬಾರಿ ಅವರು ಕೂಡ ಗೈರಾಗಿದ್ದರು.

click me!