ಬದುಕಿಗೆ ವಿದಾಯ ಹೇಳುವುದಾಗಿ ವಾಟ್ಸಪ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆ ಆಗಿರುವ ಶಿವಮೊಗ್ಗ ತಾಲೂಕು ಘಟಕದ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಅವರನ್ನು ಹುಡುಕಿಕೊಡುವಂತೆ ಪತ್ನಿ ಕೋಟೆ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಶಿವಮೊಗ್ಗ (ಜು.20) : ಬದುಕಿಗೆ ವಿದಾಯ ಹೇಳುವುದಾಗಿ ವಾಟ್ಸಪ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆ ಆಗಿರುವ ಶಿವಮೊಗ್ಗ ತಾಲೂಕು ಘಟಕದ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಅವರನ್ನು ಹುಡುಕಿಕೊಡುವಂತೆ ಪತ್ನಿ ಕೋಟೆ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪ್ರಭಾಕರ್ ಬುಧವಾರ ಬೆಳಗ್ಗೆ 7.45ಕ್ಕೆ ಶಿವಮೊಗ್ಗ ನಗರದ ಸೋಮಯ್ಯ ಲೇಔಟ್‌ನ ಮನೆಯಿಂದ ಕಾಣೆಯಾಗಿದ್ದಾರೆ. ಕಳೆದ 6 ತಿಂಗಳ ಹಿಂದೆ ಎಫ್‌ಡಿಎ ಹುದ್ದೆಯಿಂದ ಎಸ್ಡಿಎ ಹುದ್ದೆಗೆ ಹಿಂಬಡ್ತಿ ಪಡೆದಿದ್ದರು. ಅಲ್ಲದೇ, ಇವರಿಗೆ ಆರು ತಿಂಗಳಿಂದ ಸಂಬಳ ಆಗಿರಲಿಲ್ಲ. ಇದರಿಂದ ತೀವ್ರ ಮನನೊಂದಿದ್ದರು ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾಪತ್ತೆಯಾಗಿರುವ ಪ್ರಭಾಕರ್ ಕಳುಹಿಸಿರುವ ಮೆಸೇಜ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿದಂತೆ ಹಲವು ಗಣ್ಯರ ಹೆಸರುಗಳನ್ನು ಉಲ್ಲೇಖ ಮಾಡಲಾಗಿದೆ. ಬದುಕಿಗೆ ವಿದಾಯ ಹೇಳುವುದಾಗಿ ಸಂದೇಶ ರವಾನಿಸಿದ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಆಂಧ್ರದಲ್ಲಿ ಮಗು ನಾಪತ್ತೆ: ಬೆಂಗಳೂರಿನಲ್ಲಿ ಹುಡುಕಾಟ!