ಅತಿ ಗರಿಷ್ಠ ಕೆಎಸಾರ್ಟಿಸಿ ಬಿಡುಗಡೆ ಮಾಡಿರುವ ರೇಟ್ ಚಾರ್ಟ್ ಪ್ರಕಾರ ಬೆಂಗಳೂರಿನಿಂದ ಬೀದರ್‌ಗೆ ದರವನ್ನು 115 ರು. ಹೆಚ್ಚಿಸಲಾಗಿದೆ. ಅಂದರೆ 821 ರು. ಇದ್ದ ದರ 936 ರು.ಗೆ ಏರಲಿದೆ. ಇದು ಒಟ್ಟಾರೆ ಪ್ರಯಾಣ ದರ ಏರಿಕೆಯಲ್ಲೇ ಗರಿಷ್ಠ.
ಬೆಂಗಳೂರು(ಜ.05): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ಶನಿವಾರ ಮಧ್ಯರಾತ್ರಿಯಿಂದಲೇ ಹೆಚ್ಚಳವಾಗಿದೆ. ಬಿಎಂಟಿಸಿಯ ಸಾಮಾನ್ಯ ಬಸ್ ದರ 1 ರು.ನಿಂದ 6 ರು.ವರೆಗೆ ಹೆಚ್ಚಳವಾಗಿದ್ದರೆ, ಉಳಿದ ಮೂರು ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್‌ಗಳ ಪ್ರಯಾಣ ದರ 7 ರು. ನಿಂದ 115 ರು.ವರೆಗೆ ಏರಿಕೆಯಾಗಿದೆ.
ಟೋಲ್ ಶುಲ್ಕವನ್ನೂ ಸೇರಿಸಿ ಹೆಚ್ಚಿಗೆ ಆದರೆ, ಹವಾನಿಯಂತ್ರಿತ ಬಸ್ ಸೇವೆಗಳ ಪ್ರಯಾಣ ದರ ಶೇ.15ರ ಜತೆಗೆ ಜಿಎಸ್‌ಟಿ, ಸಲಾಗಿದೆ. ಇದರಿಂದ ಸಾಮಾನ್ಯ ಮತ್ತು ಡಿಲಕ್ಸ್ ಬಸ್‌ಗಳಿಗೆ ಹೋಲಿಸಿದರೆ ಎಸಿ ಬಸ್‌ಗಳ ಪ್ರಯಾಣ ದರ ಶೇ. 15ಕ್ಕಿಂತ ಹೆಚ್ಚಿಗೆ ಏರಿಕೆಯಾದಂತಾಗಿದೆ. ಇದು ಪ್ರಯಾಣಿಕರ ಪಾಲಿಗೆ ಇನ್ನಷ್ಟು ಆಘಾತಕಾರಿಯಾಗಿದೆ.
ಬಡವನ ಬೆನ್ನ ಮೇಲೆ ಸರ್ಕಾರದ ಅಂಬಾರಿ, ರಾಜ್ಯದಲ್ಲಿ ಖಾಸಗಿ ಬಸ್‌ಗಿಂತ ಕೆಎಸ್‌ಆರ್‌ಟಿಸಿಯೇ ದುಬಾರಿ!
ಬಿಎಂಟಿಸಿಯಲ್ಲಿ 10 ವರ್ಷಗಳ ನಂತರ ಹಾಗೂ ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್ಟಿಸಿಯಲ್ಲಿ ವರ್ಷಗಳ ನಂತರ ಬಸ್ ಪ್ರಯಾಣ ದರ ಹೆಚ್ಚಳವಾಗಿದೆ. ಶೇ.15ರಷ್ಟು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿ ಶನಿವಾರ ರಾಜ್ಯ ಸರ್ಕಾರ ಅಧಿಕೃತ ಆದೇಶ ಮಾಡಿದೆ. ಅದರಂತೆ ನಾಲ್ಕೂ ನಿಗಮಗಳ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ ಎಸಿ ಬಸ್ ದರ ಜಿಎಸ್ಟಿ ಹಾಗೂ ಟೋಲ್ ಶುಲ್ಕ ಸೇರಿ ಶೇ.15ಕ್ಕಿಂತ ಹೆಚ್ಚಿದೆ.
ಶೇ.42ರಷ್ಟು ದರ ಏರಿಕೆ ಪ್ರಸ್ತಾಪ:
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಉತ್ತಮ ಬಸ್ ಸೇವೆ ನೀಡುವುದು ಸೇರಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಳೆದ ಕೆಲ ತಿಂಗಳ ಹಿಂದೆಯೇ ಪ್ರಯಾಣ ದರ ಏರಿಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಶೇ.33ರಷ್ಟು ಹಾಗೂ ಬಿಎಂಟಿಸಿ ಪ್ರಯಾಣ ದರ ಶೇ.42ರಷ್ಟು ಹೆಚ್ಚಳಕ್ಕೆ ಅನುಮತಿ ನೀಡಲು ಕೋರಿದ್ದವು. ಆದರೆ, ಅದರಲ್ಲಿ ಶೇ. 15ರಷ್ಟು ಬಸ್ ಪ್ರಯಾಣ ದರಕ್ಕೆ ಅನುಮತಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
Bengaluru: ಶಕ್ತಿ ಯೋಜನೆಯಿಂದ ಖಾಲಿ ಅಯ್ತ KSRTC ಖಜಾನೆ, ಪೀಣ್ಯ ಬಸ್ ನಿಲ್ದಾಣ ಲೀಸ್‌ಗಿಟ್ಟ ಸರ್ಕಾರ!
78 ಕೋಟಿ ರು. ಹೆಚ್ಚುವರಿ ಆದಾಯ ನಿರೀಕ್ಷೆ:
ಪ್ರಯಾಣ ದರ ಹೆಚ್ಚಳದಿಂದಾಗಿ ನಾಲ್ಕೂ ನಿಗಮಗಳಿಗೆ ಮಾಸಿಕ 78 ಕೋಟಿ ರು. ಹಾಗೂ ವಾರ್ಷಿಕ 930 ಕೋಟಿ ರು. ಹೆಚ್ಚುವರಿ ಆದಾಯದ ನಿರೀಕ್ಷೆ ಹೊಂದಲಾಗಿದೆ. ಅದರಲ್ಲೂ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯ ಆದಾಯ ಭಾರೀ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆಗಳಿವೆ. 8 ತಿಂಗಳಲ್ಲಿ 1,093ಕೋಟಿರು. ನಿವ್ವಳಕೊರತೆ:ನಾಲ್ಕೂನಿಗಮಗಳು 2024ರಡಿ.31ರ ಅಂತ್ಯಕ್ಕೆ 6,520.14 ಕೋಟಿ ರು. ಆರ್ಥಿಕ ಹೊಣೆಗಾರಿಕೆ ಹೊಂದಿವೆ. ಅಲ್ಲದೆ, 2024ರ ಏಪ್ರಿಲ್ 1ರಿಂದ ನವೆಂಬರ್ 30ರವರೆಗೆ 8,418.46 ಕೋಟಿ ರು.ಆದಾಯ ಬಂದಿದೆ. ಆದರೆ, ಅದೇ ಅವಧಿಯಲ್ಲಿ 9,511.41 ಕೋಟಿ ರು. ವೆಚ್ಚವಾಗಿದೆ. ಒಟ್ಟಾರೆ 8 ತಿಂಗಳಲ್ಲಿ 1,092.95 ಕೋಟಿ ರು. ನಿವ್ವಳ ಆದಾಯ ಕೊರತೆಯನ್ನು ನಿಗಮಗಳು ಹೊಂದಿವೆ.
ಬೆಂಗಳೂರಿಂದ ಬೀದರ್‌ಗೆ ₹115 ಹೆಚ್ಚಳ:
ಅತಿ ಗರಿಷ್ಠ ಕೆಎಸಾರ್ಟಿಸಿ ಬಿಡುಗಡೆ ಮಾಡಿರುವ ರೇಟ್ ಚಾರ್ಟ್ ಪ್ರಕಾರ ಬೆಂಗಳೂರಿನಿಂದ ಬೀದರ್‌ಗೆ ದರವನ್ನು 115 ರು. ಹೆಚ್ಚಿಸಲಾಗಿದೆ. ಅಂದರೆ 821 ರು. ಇದ್ದ ದರ 936 ರು.ಗೆ ಏರಲಿದೆ. ಇದು ಒಟ್ಟಾರೆ ಪ್ರಯಾಣ ದರ ಏರಿಕೆಯಲ್ಲೇ ಗರಿಷ್ಠ.