Chitra Santhe 2025: ನಾಳೆ ಚಿತ್ರಸಂತೆಗೆ ಹೋಗುವವರಿಗೆ ಗುಡ್ ನ್ಯೂಸ್ ನೀಡಿದ ಬಿಎಂಟಿಸಿ!

By Ravi Janekal  |  First Published Jan 4, 2025, 10:31 PM IST

ಜನವರಿ 5 ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ 22ನೇ ಚಿತ್ರಸಂತೆ ಕೃಮಾರಕೃಪ ರಸ್ತೆಯಲ್ಲಿ ನಡೆಯಲಿದೆ. ಚಿತ್ರಸಂತೆಗೆ ಬರುವವರ ಅನುಕೂಲಕ್ಕಾಗಿ ಬಿಎಂಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ರಿಯಾಯಿತಿ ದರದಲ್ಲಿ ಮೆಟ್ರೋ ಫೀಡರ್ ಸೇವೆ ಲಭ್ಯವಿರುತ್ತದೆ.


ಬೆಂಗಳೂರು (ಜ.4): ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ವರ್ಷದ ಆರಂಭದ ಹೊತ್ತಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ 22ನೇ ಚಿತ್ರಸಂತೆ ನಾಳೆ(ಜ.5ರಂದು) ಕೃಮಾರಕೃಪ ರಸ್ತೆಯಲ್ಲಿ ಚಿತ್ರಸಂತೆ ಆಯೋಜನೆ ಮಾಡಲಾಗಿದೆ. ಇದೇ ವೇಳೆ 'ಚಿತ್ರಕಲಾ ಸಮ್ಮಾನ' ಪ್ರಶಸ್ತಿ ಸಮಾರಂಭವೂ ಇರುವುದರಿಂದ ಲಕ್ಷಾಂತರ ಜನರು ಬರುವ ಸಾಧ್ಯತೆ ಹಿನ್ನೆಲೆ ಚಿತ್ರಸಂತೆಗೆ ಬರುವವರ ಅನಕೂಲಕ್ಕಾಗಿ ಬಿಎಂಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಚಿತ್ರಸಂತೆ ಕಾರ್ಯಕ್ರಮಕ್ಕೆ ಬರುವವರಿಗೆ ರಿಯಾಯಿತಿ ದರದಲ್ಲಿ ಮೆಟ್ರೋ ಫೀಡರ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ7 ಗಂಟೆಯವರೆಗೆ ಮೆಟ್ರೋ ಫೀಡರ್ ಸೇವೆ ಇರಲಿದೆ. ಕೇವಲ 15 ರೂ.ಪ್ಲಾಟ್ ಫೇರ್ ವಿಧಿಸಿ ಮೆಟ್ರೋ ಫೀಡರ್ ಬಸ್ ಕಾರ್ಯಾಚರಣೆ ನಡೆಸಲಿದೆ.

Tap to resize

Latest Videos

ಎಲ್ಲಿಂದ ಎಲ್ಲಿವರೆಗೆ ಮೆಟ್ರೋ ಫೀಡರ್ ಸೇವೆ?

ಕೆಂಪೇಗೌಡ ಬಸ್ ನಿಲ್ದಾಣದಿಂದ ವಿಧಾನಸೌಧಕ್ಕೆ 4 ಬಸ್ ಕಾರ್ಯಾಚರಣೆ, ಮೆಜೆಸ್ಟಿಕ್ ನಿಂದ ಆನಂದರಾವ್ ಸರ್ಕಲ್, ಶಿವಾನಂದ ಸ್ಟೋರ್ಸ್ ಮಾರ್ಗವಾಗಿ ವಿಧಾನಸೌಧ ತಲುಪಲಿದೆ ಬಸ್, ಮಂತ್ರಿಮಾಲ್ ಮೆಟ್ರೋ ನಿಲ್ದಾಣದಿಂದ ವಿಧಾನಸೌಧ ಮೆಟ್ರೋ ಫೀಡರ್ ಬಸ್ ವ್ಯವಸ್ಥೆ. ಈ ಮಾರ್ಗದಲ್ಲಿ ಒಟ್ಟು 4 ಬಸ್ ಕಾರ್ಯಚರಣೆಗೆ ಮುಂದಾಗಿರುವ ಬಿಎಂಟಿಸಿ. ನಾಲ್ಕು ಬಸ್ಸುಗಳು ಮಂತ್ರಿಮಾಲ್ ನಿಂದ ಸೆಂಟ್ರಲ್ ಟಾಕೀಸ್, ಲಿಂಕ್ ರಸ್ತೆ ಹಾಗೂ ಶಿವಾನಂದ ಸ್ಟೋರ್ಸ್ ಮಾರ್ಗವಾಗಿ ವಿಧಾನಸೌಧ ತಲುಪಲಿವೆ. ಪ್ರತಿ  10 ನಿಮಿಷಕ್ಕೊಂದರಂತೆ ಫೀಡರ್ ಬಸ್ ಸೇವೆ ಸಿಗಲಿದೆ.

click me!