Road Accidents: ರಾಜ್ಯದಲ್ಲಿ ಜವರಾಯನ ಅಟ್ಟಹಾಸಕ್ಕೆ 7 ಮಂದಿ ಬಲಿ

By Kannadaprabha NewsFirst Published Jan 8, 2022, 6:03 AM IST
Highlights

*  ಲಾರಿ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜು
*  ಪುರವಂಕರ ಅಪಾರ್ಟ್‌ಮೆಂಟ್‌ ಬಳಿ ಘಟನೆ
*  ಮದ್ಯದ ಪಾರ್ಟಿ ಮುಗಿಸಿ ಬೈಕ್‌ನಲ್ಲಿ ಮನೆಗೆ ಹೋಗುವಾಗ ಅಪಘಾತ
 

ಬೆಂಗಳೂರು(ಜ.08): ಭೀಕರ ಸರಣಿ ಅಪಘಾತದಲ್ಲಿ(Accident) ಕಾರ್‌ನಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಮೃತಪಟ್ಟಿರುವ(Dead) ಘಟನೆ ನೈಸ್‌ ರಸ್ತೆ ಸಮೀಪ ಶುಕ್ರವಾರ ರಾತ್ರಿ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ವೆಗನ್‌ಆರ್‌ ಕಾರ್‌ನಲ್ಲಿದ್ದ ಫಾಸಿಲ್‌(32) ಮೃತಪಟ್ಟಿದ್ದಾರೆ. ಇನ್ನುಳಿದ ಮೂವರ ಹೆಸರು ತಿಳಿದುಬಂದಿಲ್ಲ. ಬೇರೆ ಕಾರಿನಲ್ಲಿದ್ದ ಇನ್ನಿತರ ನಾಲ್ವರಿಗೆ ಸಣ್ಣಪುಟ್ಟಗಾಯಗಳಾಗಿವೆ. ಟ್ರಕ್‌ವೊಂದು ವೆಗನ್‌ಆರ್‌ ಕಾರಿಗೆ ಗುದ್ದಿದೆ. ವೆಗನ್‌ಆರ್‌, ಕ್ವಾಲೀಸ್‌, ಸ್ವಿಫ್ಟ್‌ ಸೇರಿದಂತೆ ಒಟ್ಟು ಆರು ವಾಹನಗಳ ನಡುವೆ ಡಿಕ್ಕಿ(Collision) ಸಂಭವಿಸಿ ಈ ದುರಂತ ನಡೆದಿದೆ.

ಶುಕ್ರವಾರ ರಾತ್ರಿ 3.45ರ ಸುಮಾರಿಗೆ ತಮಿಳುನಾಡು ನೋಂದಣಿಯ ಲಾರಿಯೊಂದು ಬನ್ನೇರುಘಟ್ಟಕಡೆಯಿಂದ ಕನಕಪುರ ರಸ್ತೆಯ ಕಡೆಗೆ ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಪುರವಂಕರ ಅಪಾರ್ಟ್‌ಮೆಂಟ್‌ ಬಳಿ ನಿಧಾನಗತಿಯ ವಾಹನ ಸಂಚಾರವಿತ್ತು. ಈ ವೇಳೆ ವೇಗವಾಗಿ ಬಂದ ಲಾರಿಯು ಹಿಂಬದಿಯಿಂದ ವೆಗನ್‌ಆರ್‌ ಕಾರಿಗೆ ಗುದ್ದಿದೆ. ವೆಗನ್‌ಆರ್‌ ಕಾರು ಕ್ವಾಲಿಸ್‌ಗೆ ಡಿಕ್ಕಿ ಹೊಡೆದಿದೆ. ರಭಸದಿಂದ ಗುದ್ದಿದ್ದರಿಂದ ವೆಗನ್‌ಆರ್‌ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕ್ವಾಲಿಸ್‌, ಸ್ವಿಫ್ಟ್‌ ಸೇರಿದಂತೆ ಇನ್ನಿತರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಆ ವಾಹನಗಳಲ್ಲಿ ಇದ್ದ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Heavy Fog: 11 ವಾಹನ ನಡುವೆ ಸರಣಿ ಅಪಘಾತ: ಇಬ್ಬರ ದುರ್ಮರಣ

ಅಪಘಾತದಿಂದಾಗಿ ನೈಸ್‌ ರಸ್ತೆಯಲ್ಲಿ(NICE Road) ಕೆಲ ಸಮಯ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಕುಮಾರಸ್ವಾಮಿ ಲೇಔಟ್‌ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಪಘಾತಗೊಂಡ ವಾಹನಗಳನ್ನು ತಕ್ಷಣ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅಪಘಾತದಲ್ಲಿ ಮುಖ್ಯ ಪೇದೆ ಸಾವು

ಹರಪನಹಳ್ಳಿ: ಹಾಸನದಲ್ಲಿ ಕೆಎಸ್‌ಆರ್‌ಪಿಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಲಿದ್ದ ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದ ಪಡುಗವನವರ್‌ ಶಿವರಾಜ (30) ಬೈಕ್‌(Bike) ಅಪಘಾತದಲ್ಲಿ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ. ಹಾಸನದಲ್ಲಿ ಬೈಕ್‌ಗೆ ಕೆಎಸ್‌ಆರ್‌ಟಿಸಿ(KSRTC) ಬಸ್‌ ನಡುವೆ ಡಿಕ್ಕಿ ಸಂಭವಿಸಿ ತೀವ್ರ ಗಾಯಗೊಂಡಿದ್ದ ಶಿವರಾಜರನ್ನು ಹಾಸನದ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಅಸುನೀಗಿದ್ದಾರೆ. ಮೃತರಿಗೆ ಪತ್ನಿ ಮತ್ತು ಒಬ್ಬ ಮಗ, ಒಬ್ಬ ಮಗಳು ಇದ್ದಾರೆ. ಅಂತ್ಯ ಕ್ರಿಯೇ ಸ್ವ-ಗ್ರಾಮವಾದ ಮೈದೂರು ಗ್ರಾಮದಲ್ಲಿ ನಡೆಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಅಮಲಿನಲ್ಲಿ ಡಿವೈಡವರ್‌ಗೆ ಬೈಕ್‌ ಡಿಕ್ಕಿ: ಇಬ್ಬರು ಸವಾರರು ಸಾವು

ಬೆಂಗಳೂರು:  ಮದ್ಯದ ಪಾರ್ಟಿ ಮುಗಿಸಿ ಬೈಕ್‌ನಲ್ಲಿ ಮನೆಗೆ ಹೋಗುವಾಗ ಮಾರ್ಗ ಮಧ್ಯೆ ನಿಯಂತ್ರಣ ತಪ್ಪಿದ ಬೈಕ್‌ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬನಶಂಕರಿಯ ಲಕ್ಷ್ಮೇಶ(28) ಮತ್ತು ರಾಘವೇಂದ್ರ(30) ಮೃತರು. ಬನಶಂಕರಿ ರಿಂಗ್‌ ರಸ್ತೆಯ ಪಿಇಎಸ್‌ ಕಾಲೇಜಿನ ಇಂದಿರಾ ಕ್ಯಾಂಟಿನ್‌ ಬಳಿ ಗುರುವಾರ ರಾತ್ರಿ 10.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮದ್ಯ ಸೇವನೆ, ಅತೀ ವೇಗ ಮತ್ತು ಹೆಲ್ಮೆಟ್‌ ರಹಿತ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Bagalkot Road Accidents: ಎರಡು ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

ಹಿಟಾಚಿ ಹರಿದು ಮೂರು ವರ್ಷದ ಮಗು ದಾರುಣ ಸಾವು

ಬೆಂಗಳೂರು: ನಿದ್ರೆ ಮಂಪರಿನಲ್ಲಿ ಕುಳಿತಿದ್ದಾಗ ಹಿಟಾಚಿ(Hitachi) ವಾಹನ ಹರಿದು ಮೂರು ವರ್ಷದ ಮಗುವೊಂದು(Kid) ಸಾವನ್ನಪ್ಪಿರುವ(Death) ದಾರುಣ ಘಟನೆ ಜ.01 ರಂದು ಮೆಜೆಸ್ಟಿಕ್‌ ಸಮೀಪದ ಧನ್ವಂತರಿ ರಸ್ತೆಯಲ್ಲಿ ನಡೆದಿತ್ತು. 

ಶ್ರೀರಾಮಪುರದ ನಿವಾಸಿ ನೇತ್ರಾವತಿ ಹಾಗೂ ಡೇವಿಡ್‌ ಜಾನ್‌ ದಂಪತಿ ಪುತ್ರ ಸಿಮಿಯಾನ್‌ (3) ಮೃತ ದುರ್ದೈವಿ. ಈ ಘಟನೆ ಸಂಬಂಧ ಹಿಟಾಚಿ ಚಾಲಕ ಶಂಕರ್‌ ನಾಯಕ್‌ನನ್ನು ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ. ಶನಿವಾರ ಮುಂಜಾನೆ 5.30ರ ಸುಮಾರಿಗೆ ಹಿಟಾಚಿ ವಾಹನ ಶೆಡ್‌ನಿಂದ ಹೊರ ತೆಗೆಯಲು ಬಂದಾಗ ಈ ಘಟನೆ ನಡೆದಿತ್ತು.
 

click me!