Mekedatu Padayatra: ವ್ಯವಸ್ಥಿತ ಪಾದಯಾತ್ರೆಗೆ ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌

Kannadaprabha News   | Asianet News
Published : Jan 08, 2022, 05:11 AM IST
Mekedatu Padayatra: ವ್ಯವಸ್ಥಿತ ಪಾದಯಾತ್ರೆಗೆ ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌

ಸಾರಾಂಶ

*  ಕೋವಿಡ್‌ ಅಂಕಿಅಂಶ ಬೋಗಸ್‌, ಜಡ್ಜ್‌ರಿಂದ ತನಿಖೆ ನಡೆಸಲಿ: ಡಿಕೆಶಿ *  ಕನಕಪುರದಲ್ಲಿಂದು ಕೈ ಶಾಸಕಾಂಗ ಪಕ್ಷ ಸಭೆ *  ಕನಕಪುರ ಗಡಿಯಲ್ಲಿ ಚೆಕ್‌ ಪೋಸ್ಟ್‌, 2000 ಪೊಲೀಸ್‌ ನಿಯೋಜನೆ

ಬೆಂಗಳೂರು(ಜ.08): ರಾಜ್ಯ ಸರ್ಕಾರ ಕೊರೋನಾಕ್ಕೆ(Coronavirus) ಸಂಬಂಧಿಸಿದಂತೆ ಬೋಗಸ್‌ ಅಂಕಿಅಂಶಗಳನ್ನು ನೀಡುತ್ತಿದೆ. ಈ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಆಗ್ರಹಿಸಿದ್ದಾರೆ. 

ಸರ್ಕಾರ ನಿಯಮಬಾಹಿರವಾಗಿ ವಾರಾಂತ್ಯದ ಕರ್ಫ್ಯೂ(Weekend Curfew) ಜಾರಿಗೊಳಿಸಿದೆ. ಬಹುತೇಕ ಜಿಲ್ಲೆಗಳಲ್ಲಿ ಒಂದೂ ಸಾವಿಲ್ಲ. ಆದರೂ ಜನರನ್ನು ‘ಸಾಯಿಸಲಾಗುತ್ತಿದೆ.’ ರಾಮನಗರದಲ್ಲಿ ಐಸಿಯುನಲ್ಲಿ ಒಬ್ಬರೂ ಇಲ್ಲ. ಆದರೂ ಏಕಾಏಕಿ ನಿಷೇಧಾಜ್ಞೆ ವಿಧಿಸಿದ್ದು ಏಕೆ? ರಾಜಕೀಯಕ್ಕಾಗಿ ಜನರ ಜೀವನ ಕಸಿಯುತ್ತಿರುವ ನಿಮ್ಮನ್ನು ಜನ ಕ್ಷಮಿಸಲ್ಲ ಎಂದು ಬಿಜೆಪಿ(BJP) ವಿರುದ್ಧ ಕಿಡಿಕಾರಿದ್ದಾರೆ.

Padayatra Politics: ತಮಿಳ್ನಾಡಲ್ಲಿ ಮಿತ್ರಪಕ್ಷಕ್ಕೆ ಬುದ್ಧಿ ಹೇಳಿ: ಕಾಂಗ್ರೆಸ್‌ಗೆ ಕಾರಜೋಳ ತಿರುಗೇಟು

ಪಾದಯಾತ್ರೆ ಪ್ಲಾನ್‌: ಕನಕಪುರದಲ್ಲಿಂದು ಕೈ ಶಾಸಕಾಂಗ ಪಕ್ಷ ಸಭೆ

ಬೆಂಗಳೂರು: ಮೇಕೆದಾಟು ಪಾದಯಾತ್ರೆ(Mekedatu Padayatra) ಕುರಿತು ಚರ್ಚಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅಧ್ಯಕ್ಷತೆಯಲ್ಲಿ ಶನಿವಾರ ಡಿ.ಕೆ.ಶಿವಕುಮಾರ್‌(DK Shivakumar) ಅವರ ಕನಕಪುರದ ನಿವಾಸದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಪಾದಯಾತ್ರೆಯ ಮೊದಲ ದಿನವಾದ ಜ.9ರಂದು ವಾರಾಂತ್ಯದ ಕರ್ಫ್ಯೂ ಇದೆ. ಹೀಗಾಗಿ ಪಾದಯಾತ್ರೆಯಲ್ಲಿ ಎಲ್ಲರೂ ನಡೆಯಲು ಆಗುವುದಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಇಬ್ಬರೇ ನಡೆಯಬೇಕೆ ಅಥವಾ ಎಲ್ಲರೂ ಪಾದಯಾತ್ರೆ ನಡೆಸಿ ಪೊಲೀಸರ(Police) ಕ್ರಮ ಎದುರಿಸಬೇಕೆ ಎಂಬ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಕನಕಪುರ ಗಡಿಯಲ್ಲಿ ಚೆಕ್‌ ಪೋಸ್ಟ್‌, 2000 ಪೊಲೀಸ್‌ ನಿಯೋಜನೆ

ರಾಮ​ನ​ಗರ: ಕೋವಿಡ್‌(Covid19) ನಿರ್ಬಂಧಗಳ ನಡುವೆಯೇ ಪಾದಯಾತ್ರೆ ನಡೆಸಲು ಕಾಂಗ್ರೆಸ್‌(Congress) ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಕನಕಪುರದಲ್ಲಿ ಪೊಲೀಸ್‌ ಇಲಾ​ಖೆ​ ಬಿಗಿ ಬಂದೋ​ಬಸ್ತ್‌ ಕೈಗೊ​ಳ್ಳು​ತ್ತಿದೆ. ಮೇಕೆದಾಟಿಗೆ ಪ್ರವೇಶ ಕಲ್ಪಿಸುವ 5-6 ಕಡೆಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ 2000 ಪೊಲೀಸರನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಇನ್ನಷ್ಟುಪೊಲೀಸರನ್ನು ನಿಯೋಜಿಸಲಾಗುತ್ತದೆ. ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸುವವರನ್ನು ಬಂಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂದು(ಶನಿವಾರ) ಬೆಳಿಗ್ಗೆಯಿಂದ ಜ.19 ರ ವರೆಗೆ ಮೇಕೆದಾಟುವಿನಿಂದ ಬೆಂಗಳೂರು ನಗರದವರೆಗೆ ಪಾದಯಾತ್ರೆ ನಡೆಯಲಿದೆ.  

ಪಾದಯಾತ್ರೆಗೆ 1500 ಮಂದಿ: ಪಿಎಂಎನ್‌

ಮಳವಳ್ಳಿ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜ.9ರಿಂದ ಹಮ್ಮಿಕೊಂಡಿರುವ ಪಾದಯಾತ್ರೆಗೆ ತಾಲೂಕಿನಿಂದ 1500 ಮಂದಿ ಭಾಗವಹಿಸಬೇಕು ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ(P Narendraswamy) ಕರೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್‌ ರೈತ ಸಭಾಂಗಣದಲ್ಲಿ ಮೇಕೆದಾಟು ಜಾರಿಗಾಗಿ ಆಗ್ರಹಿಸಿ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆಯ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್‌ನವರು ಮೇಕೆದಾಟು ಯೋಜನೆ ಪಾದಯಾತ್ರೆಯನ್ನು ರಾಜಕಾರಣಕ್ಕಾಗಿ(Politics) ಎಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.

ನಮಗೆ ಅಧಿಕಾರ ಒಂದೇ ಮುಖ್ಯವಲ್ಲ. ನಮಗೆ ಜನರ ರಕ್ಷಣೆ ಮತ್ತು ಸಾಮಾಜಿಕ ಕಳಕಳಿಯೇ ಮುಖ್ಯವಾಗಿದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೇಕೆದಾಟು ಜಲಾಶಯ ನಿರ್ಮಾಣವಾಗಬೇಕಿದೆ. ಒಂದು ರಾಷ್ಟ್ರೀಯ ಪಕ್ಷವಾಗಿ ಜನಸಾಮಾನ್ಯರ ಬಹುತೇಕ ವಿಷಯಗಳಲ್ಲಿ ಹೋರಾಟ ನಡೆಸಿಕೊಂಡು ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ(Government of Karnataka) ಗಮನ ಸೆಳೆಯಲು ನಡೆಸುತ್ತಿರುವ ಪಾದಯಾತ್ರೆಯ ಯಶ್ವಸಿಗೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.

Mekedatu Politics: ‘ಕೈ’ ಪಾದಯಾತ್ರೆಗೆ ಸಡ್ಡು: ಜೆಡಿಎಸ್‌ನಿಂದ ಜಲಯಾತ್ರೆ

ಮೇಕೆದಾಟು ಯೋಜನೆಯಿಂದ ಅಭಿವೃದ್ಧಿ:

ರಾಮನಗರ ಜಿಲ್ಲೆಯ ಕನಕಪುರ ಹಾಗೂ ಚಾಮರಾಜನಗರ ಜಿಲ್ಲೆ ಹಾಗೂ ತಾಲೂಕಿನ ನಡುವೆ ಈ ಯೋಜನೆ ಬರಲಿದೆ. ಇದ್ದರಿಂದ ತಾಲೂಕಿನ ಅಭಿವೃದ್ಧಿಗೆ ಸಹಾಯವಾಗಲಿದೆ. ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಕಾರಣ ಪಾದಯಾತ್ರೆಯ ಉದ್ದಕ್ಕೂ ಒಂದು ಒಂದು ದಿನ ಬೇರೆ ಬೇರೆ ಜಿಲ್ಲೆಗಳ ಕಾರ್ಯಕರ್ತರು ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.

ಜ.13ರಂದು ಜಿಲ್ಲೆಯಿಂದ ಕಾರ್ಯಕರ್ತರು ರಾಮನಗರದಿಂದ ಬಿಡದಿಯವರೆಗೆ ನಡೆಯುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯ ಹತ್ತು ಸಾವಿರ ಮಂದಿ ಭಾಗವಹಿಸಲಿದ್ದಾರೆ. ತಾಲೂಕಿನಿಂದ 1500ಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಇರಬೇಕು. ಅಲ್ಲದೆ ಪಾದಯಾತ್ರೆಯ ಆರಂಭ ದಿನವಾದ ಜ.9ರಂದು ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಂದು ಬೆಳಗ್ಗೆ 6 ಗಂಟೆಗೆ ಪಟ್ಟಣದಿಂದ ಬೈಕ್ ರ್ಯಾಲಿ ಮೂಲಕ ತೆರಳಲಾಗುವುದು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!