ರಾಜ್ಯದ 47 ಜೈಲು​ಗ​ಳ​ಲ್ಲಿ ಕೈದಿಗಳಿಗೆ ವಕ್ಕರಿಸಿದ ಕೊರೋನಾ

By Kannadaprabha NewsFirst Published Oct 1, 2020, 7:51 AM IST
Highlights

ಕೊರೋನಾ ಮಹಾಮಾರಿ ವಿಶ್ವದಾದ್ಯಂತ ವಕ್ಕರಿಸಿದ್ದು, ಕೋಟಿ ಕೋಟಿ ಸಂಖ್ಯೆಯಲ್ಲಿ ಜನರು ಮಹಾಮಾರಿಯಿಂದ ಬಳಲುತ್ತಿದ್ದಾರೆ. ಲಕ್ಷಾಂತರ ಮಂದಿಯು ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದರೆ ಸಾವಿರಾರು ಮಂದಿ ಒಟ್ಟಾಗಿರುವ ಜೈಲುಗಳಿಗೂ ಕೊರೋನಾ ವಕ್ಕರಿಸಿದೆ

ಬೆಂಗ​ಳೂರು (ಸೆ.01): ಕೊರೋನಾ ಸೋಂಕು ಎಲ್ಲೆಡೆ ಹಬ್ಬು​ತ್ತಿದ್ದು, ಜೈಲು​ಗ​ಳಲ್ಲಿರುವ ಕೈದಿ​ಗ​ಳನ್ನೂ ಬಿಟ್ಟಿಲ್ಲ. 

ರಾಜ್ಯದ 47 ಜೈಲುಗಳಲ್ಲಿ 668 ಕೈದಿಗಳಿಗೆ ಕೊರೋನಾ ಸೋಂಕು ತಗುಲಿದೆ. ಆ ಪೈಕಿ 585 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. 

ಸದ್ಯ 83 ಸೋಂಕಿತ ಕೈದಿಗಳಿಗೆ ಕೋವಿಡ್‌ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರಾಗೃಹಗಳಲ್ಲಿ ಐಸೋಲೇಷನ್‌ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಕೈದಿಗಳ ದಟ್ಟಣೆ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: 6 ಲಕ್ಷ ಗಡಿದಾಟಿದ ಸೋಂತರ ಸಂಖ್ಯೆ .

ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯ ಜನರಿಗೆ ಮಹಾಮಾರಿ ವಕ್ಕರಿಸಿದೆ. ಸಾವಿರಾರು ಮಂದಿ ಕೊರೋನಾದಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. 

ಚೀನಾದಿಂದ ವಿಶ್ವಕ್ಕೆ ಪಸರಿಸಿದ ಕೊರೋನಾ ಎಂಬ ಮಹಾಮಾರಿಯನ್ನು ನಿಯಂತ್ರಣ ಮಾಡಲು ಎಲ್ಲಾ ದೇಶಗಳು ಹರಸಾಹಸವನ್ನೇ ಮಾಡುತ್ತಿವೆ.

click me!